ETV Bharat / state

ಕಾಂಗ್ರೆಸ್​​ ಟಿಕೆಟ್​ಗಾಗಿ 1120ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ... ಕೈ ಭಂಡಾರಕ್ಕೆ ಹರಿದು ಬಂತು ಕೋಟಿ ಕೋಟಿ!

ಕಾಂಗ್ರೆಸ್ ಟಿಕೆಟ್​ ಅರ್ಜಿಗೆ ಇಂದು ಕೊನೆಯ ದಿನ ಆದ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ನೂಕು ನುಗ್ಗಲು ಕಂಡು ಬಂತು. ಟಿಕೆಟ್ ಆಕಾಂಕ್ಷೀಗಳು ಅವರ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

KN_BNG
ಕಾಂಗ್ರೆಸ್‌ ಟಿಕೆಟ್ ಅರ್ಜಿ ಸಲ್ಲಿಕೆ ಮುಕ್ತಾಯ
author img

By

Published : Nov 21, 2022, 11:01 PM IST

ಬೆಂಗಳೂರು: 2023 ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ನಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಇಂದು ಮುಕ್ತಾಯವಾಗಿದ್ದು, ಬರೋಬ್ಬರಿ 1,120 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಅರ್ಜಿ ನಮೂನೆ ಸ್ವೀಕಾರಕ್ಕೆ ಐದು ಸಾವಿರ ರೂಪಾಯಿ ಶುಲ್ಕ ಬರಿಸುವ ಜೊತೆಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ಸಂದರ್ಭ ಕಾಂಗ್ರೆಸ್ ಪಕ್ಷದ ಕಟ್ಟಡ ಪರಿಹಾರ ನಿಧಿ ಹೆಸರಿನಲ್ಲಿ ಸಾಮಾನ್ಯವಾಗಿ ಎರಡು ಲಕ್ಷ ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಒಂದು ಲಕ್ಷ ರೂಪಾಯಿ ಮೊತ್ತದ ಡಿಡಿ ತೆಗೆದು ಪಕ್ಷಕ್ಕೆ ಸಲ್ಲಿಕೆ ಮಾಡಬೇಕು ಎಂದು ಸೂಚಿಸಲಾಗಿತ್ತು. ಡಿಡಿ ಮೂಲಕ ಸಲ್ಲಿಕೆಯಾದ ಮೊತ್ತವೇ 17 ಕೋಟಿ ರೂ ಗಿಂತಲೂ ಅಧಿಕ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಮೂಲಗಳ ಪ್ರಕಾರ ಈವರೆಗೆ ಎರಡು ದಿನ ಹಿಂದೆ ಒಟ್ಟು 1080 ಅರ್ಜಿ ಪಡೆದುಕೊಂಡವರ ಪೈಕಿ 950 ಅರ್ಜಿಗಳು ಡಿಡಿ ಸಮೇತ ಸಲ್ಲಿಕೆಯಾಗಿವೆ. ಇದರಲ್ಲಿ ಎಸ್​ಸಿ ಎಸ್​ಟಿ ಸಮುದಾಯದ 250 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಲಾಗಿತ್ತು. ಕಡೆಯ ದಿನವಾದ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಹೈಕಮಾಂಡ್ ಸೂಚನೆ: ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಒತ್ತಡ ತಿಳಿದುಕೊಳ್ಳಲು ಪಕ್ಷದ ಹೈಕಮಾಂಡ್ ಆಸಕ್ತರಿಂದ ಅರ್ಜಿ ಸ್ವೀಕರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿತ್ತು. ಇದೇ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಕರೆದು ಅರ್ಜಿ ಸ್ವೀಕರಿಸುವ ಮಾಹಿತಿ ತಿಳಿಸಿದ್ದರು. ಕೆಪಿಸಿಸಿ ಕಚೇರಿಯಲ್ಲಿ ನವಂಬರ್ 5 ರಿಂದ 15 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ತಮ್ಮ ಉಮೇದುವಾರಿಕೆ ಆಕಾಂಕ್ಷೆ ವ್ಯಕ್ತಪಡಿಸಿದ್ದರು.

ಭರ್ತಿ ಮಾಡಿದ ಅರ್ಜಿ ಜೊತೆ ಡಿಡಿ ಸಮೇತ ಪಕ್ಷಕ್ಕೆ ತಮ್ಮ ಉಮೇದುಗಾರಿಕೆಯ ಆಸಕ್ತಿಯನ್ನು ದೃಢಪಡಿಸಿದ್ದರು. ಆರಂಭದ 10 ದಿನದ ಕಾಲಾವಧಿ ನಂತರವೂ ಸಾಕಷ್ಟು ಆಸಕ್ತರು ಸಮಯ ವಿಸ್ತರಣೆಗೆ ಮನವಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷ ನವೆಂಬರ್ 21ರವರೆಗೆ ಅವಕಾಶವನ್ನು ವಿಸ್ತರಿಸಿತ್ತು. ಇಂದು ಆ ಗಡುವು ಸಹ ಮುಕ್ತಾಯವಾಗಿದೆ. ಇನ್ನಷ್ಟು ದಿನ ವಿಸ್ತರಿಸುವ ಘೋಷಣೆಯನ್ನು ಸಹ ಕಾಂಗ್ರೆಸ್ ಮಾಡಿಲ್ಲ. ಮೊದಲ ಅವಧಿಯಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಾವು ಕನಕಪುರದಿಂದ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಕಡೆಯ ದಿನವಾದ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಮಾಡಿದ್ದು ಆಸಕ್ತಿಯ ಕ್ಷೇತ್ರವನ್ನು ಮಾತ್ರ ಸೂಚಿಸಿಲ್ಲ. ತಮ್ಮ ಕ್ಷೇತ್ರದ ಆಯ್ಕೆ ಪಕ್ಷದ ಹೈಕಮಾಂಡ್​ಗೆ ಬಿಟ್ಟದ್ದು ಎಂದಷ್ಟೇ ತಿಳಿಸಿದ್ದಾರೆ. ಸಿದ್ದರಾಮಯ್ಯ ಸಾಕಷ್ಟು ಕ್ಷೇತ್ರಗಳತ್ತ ಆಸಕ್ತಿ ತೋರಿಸುತ್ತಿದ್ದು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇವರಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ ವರುಣ ಎಂದು ಅಂದಾಜಿಸಲಾಗಿತ್ತು. ಆದರೆ ಕಡೆಯ ಕ್ಷಣಗಳಲ್ಲಿ ಅವರು ಕೋಲಾರದತ್ತಲು ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ.

ಈ ಹಿಂದೆ ಚಾಮರಾಜಪೇಟೆ, ಚಿಕ್ಕಮಗಳೂರು, ಬದಾಮಿ ಹಾಗೂ ಚಾಮುಂಡೇಶ್ವರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸಿದ್ದರಾಮಯ್ಯ ಸ್ಪರ್ಧೆಯ ವಿಚಾರವಾಗಿ ತಳುಕು ಹಾಕಿಕೊಂಡಿದ್ದವು. ಆದರೆ ಕೊನೆಯದಾಗಿ ಅವರು ತಮ್ಮ ಪುತ್ರ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ವರುಣ ಕ್ಷೇತ್ರದಿಂದ ಮರು ಆಯ್ಕೆಗೆ ಟಿಕೆಟ್ ಬಯಸಿ ಡಾ.ಯತಿಂದ್ರ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಡೆ ಕ್ಷಣಗಳಲ್ಲಿ ಇವರು ತಂದೆಗಾಗಿ ಕ್ಷೇತ್ರ ತ್ಯಾಗ ಮಾಡುತ್ತಾರೋ ಅಥವಾ ಸಿದ್ದರಾಮಯ್ಯ ಕೋಲಾರ ಇಲ್ಲವೇ ಬೇರೆ ಕ್ಷೇತ್ರಗಳ ಆಯ್ಕೆಯನ್ನು ಸ್ಪರ್ಧೆಗೆ ಮಾಡಿಕೊಳ್ಳುತ್ತಾರೋ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ.

ಕಾಂಗ್ರೆಸ್ ಟಿಕೆಟ್​ ಅರ್ಜಿಗೆ ಇಂದು ಕೊನೆ ದಿನ ಆದ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ನೂಕು ನುಗ್ಗಲು ಕಂಡು ಬಂತು. ಟಿಕೆಟ್ ಆಕಾಂಕ್ಷೀಗಳು ಅವರ ಬೆಂಬಲಿಗರೊಂದಿಗೆ ಕೆಪಿಸಿಸಿಗೆ ಆಗಮಿಸಿದರು. ರಾಜ್ಯದ ವಿವಿಧ ಕ್ಷೇತ್ರಗಳಿಂದ ಅರ್ಜಿ ಸಲ್ಲಿಸಲು ಬಂದ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮೂಲಕ ಜೈಕಾರ ಕೂಗಿಸಿಕೊಂಡರು.

ಇದನ್ನೂ ಓದಿ: ಕಾಡಾನೆ ಹಾವಳಿ: ಪ್ರತಿ ಜಿಲ್ಲೆಗೊಂದು ಆನೆ ಟಾಸ್ಕ್ ಫೋರ್ಸ್ ರಚನೆಗೆ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.