ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಸಿಎಂ ಶೀಘ್ರ ಗುಣಮುಖರಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾರೈಸಿದ್ದಾರೆ. ಸಿಎಂ ಬಿಎಸ್ವೈ ಅವರು ತ್ವರಿತವಾಗಿ ಸಂಪೂರ್ಣ ಚೇತರಿಕೆಯಾಗಲಿ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.
![Congress Leaders wish for BSY recovery](https://etvbharatimages.akamaized.net/etvbharat/prod-images/768-512-8046424-thumbnail-3x2-raa_0308newsroom_1596435717_796.jpg)
ಯಡಿಯೂರಪ್ಪ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಬೇಸರದ ವಿಚಾರ. ಯಡಿಯೂರಪ್ಪ ಶೀಘ್ರವೇ ಗುಣಮುಖರಾಗಲಿ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
![Congress Leaders wish for BSY recovery](https://etvbharatimages.akamaized.net/etvbharat/prod-images/kn-bng-02-dks-tweet-script-7208077_03082020114054_0308f_1596435054_923.jpg)
ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿರುವ ವಿಷಯ ತಿಳಿದು ಬಂದಿದೆ. ಅವರು ಶೀಘ್ರ ಕೊರೊನಾ ಸೋಂಕಿನ ಬಾಧೆಯಿಂದ ಮುಕ್ತರಾಗಿ ಆಡಳಿತಾತ್ಮಕ ಕಾರ್ಯದಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
![Congress Leaders wish for BSY recovery](https://etvbharatimages.akamaized.net/etvbharat/prod-images/kn-bng-02-dks-tweet-script-7208077_03082020114054_0308f_1596435054_932.jpg)
ಸಂಸದ ಡಿ. ಕೆ. ಸುರೇಶ್ ಟ್ವೀಟ್ ಮಾಡಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಲಿ ಎಂದು ಯಡಿಯೂರು ಸಿದ್ದಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
![Congress Leaders wish for BSY recovery](https://etvbharatimages.akamaized.net/etvbharat/prod-images/kn-bng-02-dks-tweet-script-7208077_03082020114054_0308f_1596435054_377.jpg)
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿರುವ ವಿಷಯ ಕೇಳಿ ನನಗೆ ಬೇಸರವಾಗಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ನೀವು ಅತಿ ಶೀಘ್ರ ಗುಣಮುಖರಾಗಿ ಪುನಃ ಕಾರ್ಯೋನ್ಮುಖರಾಗಲು ಆರೋಗ್ಯ ಲಭಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
![Congress Leaders wish for BSY recovery](https://etvbharatimages.akamaized.net/etvbharat/prod-images/kn-bng-02-dks-tweet-script-7208077_03082020114054_0308f_1596435054_1018.png)