ETV Bharat / state

ಪರಿಷತ್​ನಲ್ಲಿ ಸದಸ್ಯರ ವಿದಾಯ ಭಾಷಣ: ಅನುಭವ, ಒಡನಾಟದ ಮೆಲುಕು

ವಿಧಾನಪರಿಷತ್​​ನಲ್ಲಿಂದು ಕಾಂಗ್ರೆಸ್​ನ ಮೂವರು ಸದಸ್ಯರಾದ ಮೋಹನ್​ ಕೊಂಡಜ್ಜಿ, ಪಿ.ಆರ್.ರಮೇಶ್​ ಹಾಗು ಸಿ.ಎಂ.ಲಿಂಗಪ್ಪ ವಿದಾಯ ಭಾಷಣ ಮಾಡಿದರು.

ಮೋಹನ್ ಕೊಂಡಜ್ಜಿ, ಪಿ ಆರ್ ರಮೇಶ್, ಸಿ ಎಂ ಲಿಂಗಪ್ಪ

author img

By

Published : Feb 24, 2023, 8:20 PM IST

Updated : Feb 24, 2023, 8:47 PM IST

ಕಾಂಗ್ರೆಸ್​ ಸದಸ್ಯ ಮೋಹನ್ ಕೊಂಡಜ್ಜಿ ವಿದಾಯ ಭಾಷಣ

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ನ ಮೂವರು ಸದಸ್ಯರು ಇಂದು ವಿದಾಯ ಭಾಷಣ ಮಾಡಿದರು. ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿನ್ನೆ ವಿದಾಯದ ನುಡಿಗಳನ್ನಾಡಿದ್ದರು. ಭಾಷಣದ ವೇಳೆ ಭಾವುಕರಾದ ಸದಸ್ಯರು ತಮ್ಮ ಪರಿಷತ್​ ಅನುಭವ, ಇಲ್ಲಿನ ಸದಸ್ಯರ ಜತೆ ಒಡನಾಟ, ಸಿಎಂ, ಪ್ರತಿಪಕ್ಷ, ಸಭಾನಾಯಕರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು. 2017ರಲ್ಲಿ ವಿಧಾನಸಭೆಯಿಂದ ನಾಮನಿರ್ದೇಶನಗೊಂಡಿದ್ದ ಈ ಸದಸ್ಯರು ಈಗ ತಮ್ಮ ಆರು ವರ್ಷದ ಕಾಲಾವಧಿ ಪೂರೈಸಿದ್ದಾರೆ.

ಸಚಿವ ಮಾಧುಸ್ವಾಮಿ ಮಾತನಾಡಿ, ಇಂದು ಪರಿಷತ್​​ನಲ್ಲಿ ಮೂವರು ವಿದಾಯ ಭಾಷಣ ಮಾಡ್ತಿದ್ದಾರೆ. ನನಗೂ ಲಿಂಗಪ್ಪನವರಿಗೂ ಸಾಮ್ಯತೆ ಇದೆ. ನಾನು, ಅವರು ಒಂದೇ ಬಾರಿ ಬೈ ಎಲೆಕ್ಷನ್​​ನಲ್ಲಿ ಗೆದ್ದು ಬಂದು ಸದನದೊಳಗೆ ಪ್ರಮಾಣ ವಚನ ಸ್ವೀಕರಿಸಿದ್ದೆವು. ಮೋಹನ್ ಕೊಂಡಜ್ಜಿ ಮತ್ತು ನಾನು ಸ್ನೇಹಿತರು. ನಿಮಗ್ಯಾರಿಗೂ ಗೊತ್ತಿಲ್ಲ, ನಾವಿಬ್ಬರು ಕಲಾವಿದರು. ಮುಕ್ತ ಧಾರವಾಹಿಯಲ್ಲಿ ಸೀತಾರಾಮ್ ನಮ್ಮಿಬ್ಬರಿಗೂ ಸಚಿವರ ಪಾತ್ರ ಕೊಟ್ಟಿದ್ರು. ಅದರಲ್ಲಿ ನಟಿಸಿದ್ದೇವೆ. ರಮೇಶ್ ಅಧ್ಯಯನಶೀಲ ಶಾಸಕ, ಯಾವುದೇ ವಿಚಾರ ಆದ್ರೂ ಕಾನೂನಿನ ಅಧ್ಯಯನ ಮಾಡಿ ಸಲಹೆ ನೀಡ್ತಿದ್ರು. ಈ ಮೂವರು ಇಂದು ವಿದಾಯ ಭಾಷಣ ಮಾಡ್ತಿದ್ದಾರೆ. ಮುಂದೆಯೂ ಅವರು ಪರಿಷತ್​ಗೆ ಬರಲಿ ಎಂದು ಆಶಿಸಿದರು.

ಪರಿಷತ್ತಿನಲ್ಲಿ ಇಂಧನ ಸಚಿವರಿಗೆ ಶಾಕ್ ಹೊಡೆಯಿತು. ಸದನದಲ್ಲಿ ಬಿಲ್ ಮಂಡಿಸಲು ಎದ್ದು ಮೈಕ್ ಸ್ವಿಚ್ ಆನ್ ಮಾಡಲು ಮುಂದಾದ ಸುನೀಲ್ ಕುಮಾರ್ ಶಾಕ್ ಹೊಡೆಸಿಕೊಂಡು ಬೆಚ್ಚಿದರು. ಪವರ್ ಮಿನಿಸ್ಟರ್​ಗೆ ಶಾಕ್ ಹೊಡೆಯಿತು ಎಂದು ಹಾಸ್ಯ ಚಟಾಕಿ ಹಾರಿಸಿದ ಕಾನೂನು ಸಚಿವ ಮಾಧುಸ್ವಾಮಿ ಸದನವನ್ನು ನಗೆಗಡಲಲ್ಲಿ ತೇಲಿಸಿದರು.

ಸಚಿವ ಮಾಧುಸ್ವಾಮಿ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸಚಿವ ಸುನೀಲ್​ ಕುಮಾರ್ ಪರಿಷತ್​ನಲ್ಲಿ ಮಂಡಿಸಿದರು. ಸರ್ವಾನುಮತದಿಂದ ವಿಧೇಯಕ ಅಂಗೀಕಾರ ಪಡೆಯಿತು. ಇದಾದ ಬಳಿಕ ಬಿಎಂಎಸ್ ಖಾಸಗಿ ವಿಶ್ವವಿದ್ಯಾಲಯ ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್​ ಮಂಡಿಸಿದರು. ಈ ವಿಧೇಯಕದ ಮೇಲೆ ಜೆಡಿಎಸ್‌ನ ಉಪನಾಯಕ ಶರವಣ ಮಾತನಾಡಿ, ಬಿಎಂಎಸ್ ಟ್ರಸ್ಟ್ ಅವ್ಯವಹಾರ ದ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ವಿ. ಇದರ ಅವ್ಯವಹಾರದ ಬಗ್ಗೆ ಪ್ರಧಾನಿ ಅವರಿಗೂ ಪತ್ರ ಬರೆಯಲಾಗಿತ್ತು. ಸಚಿವರಿಗೆ ಈ ಬಿಲ್ ಪಾಸ್ ಮಾಡಲು ಯಾಕೆ ಇಷ್ಟು ಆತುರವೊ ಗೊತ್ತಿಲ್ಲ? ಈ ಬಿಲ್ ಅಂಗೀಕಾರ ಮಾಡಬಾರದು. ಈ ಟ್ರಸ್ಟ್ ಬಗ್ಗೆ ಸಾಕಷ್ಟು ಅವ್ಯವಹಾರದ ಆರೋಪ ಇದೆ ಎಂದರು.

ಬಿಎಂಎಸ್ ವಿಶ್ವವಿದ್ಯಾಲಯ ವಿಧೇಯಕಕ್ಕೆ ಜೆಡಿಎಸ್ ವಿರೋಧಿಸಿತು. ಬಿಎಂಎಸ್ ಟ್ರಸ್ಟ್ ಈವರೆಗೆ ಸರ್ಕಾರದಿಂದ 1 ಸಾವಿರ ಕೋಟಿ ರೂ. ಅನುದಾನ ಪಡೆದಿದೆ. ಹಣದ ದುರುಪಯೋಗ ಆಗಿ ಭ್ರಷ್ಟಾಚಾರವಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ಆಗಬೇಕಿದೆ. ಹೀಗಾಗಿ ತರಾತುರಿಯಲ್ಲಿ ವಿಧೇಯಕ ಅಂಗೀಕಾರ ಬೇಡ ಎಂದು ಆಗ್ರಹಿಸಿದ ಜೆಡಿಎಸ್ ಸದಸ್ಯ ಟಿ ಎ ಶರವಣ ಆರೋಪಿಸಿದರು. ಆದರೆ ಗದ್ದಲದ ನಡುವೆಯೇ ವಿಧೇಯಕ ಅನುಮೋದನೆ ಪಡೆಯಿತು.

ಕಾಂಗ್ರೆಸ್​ ಸದಸ್ಯ ಸಿಎಂ ಲಿಂಗಪ್ಪ ವಿದಾಯ ಭಾಷಣ

ಪ್ರಸ್ತುತ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಚುನಾವಣಾ ರಾಜಕೀಯಕ್ಕೆ ವಿದಾಯದ ಭಾಷಣ ಮಾಡಿದ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕ ಹಾಗು ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿರುವ ಎಸ್.ಎಂ.ಕೃಷ್ಣ ಸ್ವಾಗತ ಮಾಡಿದ್ದಾರೆ. ನಾಲ್ಕು ದಶಕದ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡ ರೈತಾಪಿ ವರ್ಗದ ಪರವಾಗಿ ಅಹರ್ನಿಶಿ ಹೋರಾಟ ನಡೆಸಿದ ತಾವು ಚುನಾವಣಾ ರಾಜಕೀಯದಿಂದ ದೂರ ಸರಿದು ಯುವ ಸಮೂಹಕ್ಕೆ ಮಾರ್ಗದರ್ಶಕರಾಗಲು ನಿಶ್ಚಯಿಸಿರುವ ತಮ್ಮ ನಿರ್ಧಾರವನ್ನು
ಸ್ವಾಗತಿಸುತ್ತೇನೆ.

1983 ರಿಂದ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಸಿದ್ಧಾಂತಕ್ಕೆ ಬದ್ಧರಾಗಿ ಹಗಲಿರುಳು ಹೋರಾಡಿ ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ನಿಮ್ಮ ಪಾತ್ರ ಹಿರಿದಾದ್ದು, ನಾಲ್ಕು ಭಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರತಿ ಹಂತದಲ್ಲೂ ಹೋರಾಟವೇ ನಿಮ್ಮ ಜೀವನದ ಮಂತ್ರವನ್ನಾಗಿಸಿಕೊಂಡು ರಾಜ್ಯದ ಎಲ್ಲ ಸಮುದಾಯಗಳ ಏಳಿಗೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಅಜರಾಮರಾಗಿದ್ದೀರಿ ಎಂದು ಪತ್ರದ ಮೂಲಕ ಕೃಷ್ಣ ತಿಳಿಸಿದ್ದಾರೆ.

ಬಿಎಸ್​ವೈ ನಿರ್ಧಾರ ಸ್ವಾಗತಿಸಿದ ಎಸ್ ಎಂ ಕೃಷ್ಣ

“ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು" ಎನ್ನುವ ಮಟ್ಟಿಗೆ ನಿಮ್ಮ ಧ್ವನಿ ವಿಧಾನಸೌಧದಲ್ಲಿ ಮೊಳಗಿದೆ. ನಾವಿಬ್ಬರೂ ಒಂದೇ ಜಿಲ್ಲೆಯಿಂದ ಬಂದವರಾದರೂ ತಾವು ಶಿವಮೊಗ್ಗದ ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ರಾಜ್ಯದ ಸರ್ವವ್ಯಾಪಿ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ಏರಿಸಿ ಜನನಾಯಕರಾಗಿ ರೂಪುಗೊಂಡು ಹಲವು ಯುವನಾಯಕರನ್ನು ಸೃಷ್ಟಿಸಿ ಯಶಸ್ವಿ ನಾಯಕರಾಗಿ ಸಾರ್ವಜನಿಕ ಜೀವನ ಸವೆಸಿ ಇಂದು ಚುನಾವಣಾ ರಾಜಕೀಯದಿಂದ ವಿರಮಿಸುತ್ತಿರುವ ತಮಗೆ ಭಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಸೇವೆ ಬೇರೆ ರೂಪದಲ್ಲಿ ರಾಜ್ಯದ ಜನರಿಗೆ ದೊರೆತು ಸಮಾಜದ ಶ್ರೇಯೋಭಿವೃದ್ಧಿಗೆ ಅನುವಾಗಲಿ. ತಮ್ಮ ಮುಂದಿನ ನಡೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿ ಶುಭ ಕೋರಿದ್ದಾರೆ.

ಇದನ್ನೂ ಓದಿ: 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ. ಎಸ್‌. ಯಡಿಯೂರಪ್ಪ

Last Updated : Feb 24, 2023, 8:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.