ETV Bharat / state

Congress Guarantee: ಮಹದೇವಪ್ಪನಿಗೂ ಕೊಡಬೇಕು, ಕಾಕ ಪಾಟೀಲನಿಗೂ ಕೊಡಬೇಕು - ಯತ್ನಾಳ್ ಕಿಡಿ - ಕಾಂಗ್ರೆಸ್​ ವಿರುದ್ಧ ದಾಳಿ

ಕಾಂಗ್ರೆಸ್​ ಆಗ ಹೇಳಿದ್ದೊಂದು, ಈಗ ಹೇಳ್ತಿರೋದು ಒಂದು ಎಂದು ವಿರೋಧ ಪಕ್ಷಗಳು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

MLA Basanagowda patil yathnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​
author img

By

Published : Jun 10, 2023, 12:40 PM IST

Updated : Jun 10, 2023, 1:19 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಷರತ್ತಿನ ಗ್ಯಾರಂಟಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಷರತ್ತಿನ ಬಗ್ಗೆ ಹೇಳದೇ "ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ" ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ ಎಂದು ಕಿಡಿ ಕಾರಿದ್ದಾರೆ.

  • ಸಾರ್ವಜನಿಕರಲ್ಲಿ ವಿನಂತಿ.

    ಯಾವುದೇ ಷರತ್ತಿನಬಗ್ಗೆ ಹೇಳದೆ "ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ" ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ.

    1. ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ, 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಾಪಸ್…

    — Basanagouda R Patil (Yatnal) (@BasanagoudaBJP) June 10, 2023 " class="align-text-top noRightClick twitterSection" data=" ">

ಈ ಸಂಬಂಧ ಸಾರ್ವಜನಿಕರಲ್ಲಿ ಕೆಲ ಮನವಿಗಳನ್ನು ಮಾಡಿದ್ದಾರೆ. ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ, 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಿನಮ್ರತೆಯಿಂದ ವಾಪಸ್ ಕಳುಹಿಸಿ ಎಂದು ಕರೆ ನೀಡಿದ್ದಾರೆ. ಮಹಿಳೆಯರು ಎಲ್ಲ ಬಸ್​​​ಗಳಲ್ಲೂ ಟಿಕೆಟ್ ತೆಗೆದುಕೊಳ್ಳಬೇಡಿ, ಕಂಡೆಕ್ಟರ್ ಹಾಗೂ ಸಿಬ್ಬಂದಿಗೆ ಸಿದ್ದರಾಮಯ್ಯರನ್ನು ಕೇಳಿ ಎಂದು ಹೇಳಿ. ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ. 2000 ರೂ ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿ ಎಂದು ಟ್ವೀಟ್​ ಮೂಲಕ ಕರೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದೆ, ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹದೇವಪ್ಪನಿಗೂ ಕೊಡಬೇಕು, ಕಾಕ ಪಾಟೀಲನಿಗೂ ಕೊಡಬೇಕು, ಎಲ್ಲರಿಗೂ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಎಲ್ಲ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕಾರ್ಯಗಳನ್ನು ಮಾಡಿದ್ದವು. ಬಿಜೆಪಿ ಪಕ್ಷ ಕೇಂದ್ರದ ನಾಯಕರನ್ನು ಕರೆಸಿ ಅದ್ಧೂರಿಯಾಗಿ ರೋಡ್​ ಶೋಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರನ್ನು ಆಕರ್ಷಿಸುವ ಕಾರ್ಯ ಮಾಡಿತ್ತು.

ಅದರ ಜೊತೆಗೆ ಅದೆಷ್ಟೋ ಸಿನಿ ತಾರೆಗಳನ್ನು ಕೂಡ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡು ಜನರನ್ನು ಒಲಿಸಿಕೊಳ್ಳುವ ಕಾರ್ಯ ಮಾಡಿತ್ತು. ಹಾಗೆಯೇ ಕಾಂಗ್ರೆಸ್​ ಕೂಡ ರೋಡ್​ ಶೋಗಳನ್ನು ಮಾಡುವ್ ಮೂಲಕ ಚುನಾವಣ ಪ್ರಚಾರ ಕೈಗೊಂಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್​, ಏನೇ ಆಗಲಿ ಬಿಜೆಪಿಯನ್ನು ಸೋಲಿಸಿ ಗದ್ದುಗೆ ಏರಲೇಬೇಕು ಎಂದು ಎಲ್ಲಾ ರೀತಿಯಲ್ಲೂ ಚುನಾವಣಾ ಪ್ರಚಾರ ತಯಾರಿ ಮಾಡಿಕೊಂಡಿತ್ತು.

ಅದರ ಭಾಗವಾಗಿಯೇ ಕಾಂಗ್ರೆಸ್​, ಬಿಜೆಪಿ ಪಕ್ಷದಂತೆ ಅದ್ಧೂರಿಯಾಗಿ ಕೇಂದ್ರದ ನಾಯಕರ ರೋಡ್​ ಶೋ ಮಾಡದೆ, ನೇರವಾಗಿ ಜನರನ್ನು ಕೇಂದ್ರವಾಗಿಸಿಕೊಂಡು ಪ್ರಚಾರ ಕೈಗೊಂಡಿತ್ತು. ಸ್ಟಾರ್​ ಪ್ರಚಾರಕರ ಮೂಲಕ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡರೆ, ಇನ್ನೊಂದೆಡೆ ಕೇಂದ್ರದ ನಾಯಕರ ಮೂಲಕ ಐದು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.

ಮಹಿಳೆಯರಿಗೆ, ಯುವಕರಿಗೆ, ಸಾಮಾನ್ಯ ಜನರಿಗೆ ಅನ್ವಯವಾಗುವಂತಹ, ಅಂದರೆ ಎಲ್ಲ ವಯೋಮಿತಿಯ ಜನರನ್ನೂ ಓಲೈಸುವಂತಹ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಜೊತೆಗೆ ಬಿಜೆಪಿ ವಿರುದ್ಧ 40 ಪರ್ಸೆಂಟ್​ ಭ್ರಷ್ಟಾಚಾರದ ಆರೋಪದ ದಾಳವನ್ನೂ ಕಾಂಗ್ರೆಸ್​ ಚೆನ್ನಾಗಿಯೇ ಬಳಸಿಕೊಂಡಿತ್ತು. ಬಿಜೆಪಿಯೇ ಊಹಿಸಿರದ ರೀತಿಯಲ್ಲಿ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್​ ಗದ್ದುಗೆ ಏರಿದೆ. ಆದರೆ, ಈಗ ಕಾಂಗ್ರೆಸ್​, ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ವಿಧಿಸುತ್ತಿರುವುದನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ.

ಇದನ್ನೂ ಓದಿ: ಹಲವು ಕಂಡಿಷನ್ ಹಾಕಿ ಯಾರಿಗೂ ಗ್ಯಾರಂಟಿ ಯೋಜನೆಗಳು ಸಿಗದಂತೆ ಮಾಡುವ ಹುನ್ನಾರ: ಪ್ರಲ್ಹಾದ್​ ಜೋಶಿ

Last Updated : Jun 10, 2023, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.