ETV Bharat / state

2023: ಸವಾಲುಗಳ ಮಧ್ಯೆ ಪಂಚ ಗ್ಯಾರಂಟಿ ಜಾರಿ - Freebees

ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬಳಿಕ ಯೋಜನೆಗಳನ್ನು ಜಾರಿಗೊಳಿಸಲು ಹತ್ತು ಹಲವು ಸವಾಲುಗಳನ್ನು ಎದುರಿಸಿತು. ಈ ಕುರಿತು ಒಂದು ವರದಿ.

ಪಂಚ ಗ್ಯಾರಂಟಿ ಯೋಜನೆ
ಪಂಚ ಗ್ಯಾರಂಟಿ ಯೋಜನೆ
author img

By ETV Bharat Karnataka Team

Published : Dec 31, 2023, 10:12 PM IST

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2023 ಕಾಂಗ್ರೆಸ್​​ಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ತಂದುಕೊಟ್ಟ ಶುಭ ವರ್ಷ. ಬಹುಮತದೊಂದಿಗೆ ರಾಜ್ಯದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ ಆಗಿದ್ದು ಪಂಚ ಗ್ಯಾರಂಟಿಗಳ ಅನುಷ್ಠಾನ.‌ ಏಳು ತಿಂಗಳ ಅಧಿಕಾರಾವಧಿಯಲ್ಲಿ ಕಠಿಣ ಸವಾಲುಗಳ ಮಧ್ಯೆ ಸರ್ಕಾರಕ್ಕೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಗೂ ಮೊದಲು ಆಶ್ವಾಸನೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಯಿತು. ಸರ್ಕಾರ ಅಧಿಕಾರಕ್ಕೆ ಬಂದ ಮೂರು ವಾರಗಳಲ್ಲಿಯೇ ಒಂದೊಂದಾಗಿ ಗ್ಯಾರಂಟಿ ಯೋಜನೆಗಳ ಜಾರಿ ಪ್ರಾರಂಭಿಸಲಾಯಿತು. ಆದರೆ ಈ ಮಧ್ಯೆ ತೀವ್ರ ಬರ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು.

ಅನುದಾನ ಹೊಂದಾಣಿಕೆಯ ಬೃಹತ್ ಸವಾಲು: ಪಂಚ ಗ್ಯಾರಂಟಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಎದುರಾಗಿದ್ದು ಅನುದಾನ. ಪಂಚ ಗ್ಯಾರಂಟಿಗಳಿಗೆ ವಾರ್ಷಿಕ 40,000 ಕೋಟಿ ರೂ. ಅನುದಾನ ಬೇಕಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ಅನುದಾನ ಸಂಗ್ರಹ ಸರ್ಕಾರಕ್ಕೆ ಸವಾಲಾಗಿತ್ತು. ಆದರೂ ಕಸರತ್ತು ನಡೆಸಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಶಕ್ತಿ ಯೋಜನೆ ವೆಚ್ಚ: ಸಿಎಂ ಸಿದ್ದರಾಮಯ್ಯ ಅವರು ಜೂನ್ 11ಕ್ಕೆ ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲಿಗೆ ಅನುಷ್ಠಾನ‌ ಮಾಡಿದರು. ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ, ಅನುದಾನ ಕೊರತೆಯ ಸವಾಲಿನ ಮಧ್ಯೆ ಯೋಜನೆ ಜಾರಿಗೊಳಿಸಲಾಯಿತು.‌ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆ ಪ್ರತಿದಿನ ಸರಾಸರಿ
50 ರಿಂದ 60 ಲಕ್ಷ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಡಿಸೆಂಬರ್ 22ರವರೆಗೆ ವರೆಗೆ ಸುಮಾರು 119.64 ಕೋಟಿ ಮಹಿಳೆಯರು ಉಚಿತವಾಗಿ ಶಕ್ತಿಯಡಿ ಪ್ರಯಾಣಿಸಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಡಿಸೆಂಬರ್ 22ರವರೆಗೆ ಸುಮಾರು 2,853.60 ಕೋಟಿ ರೂ. ಉಚಿತ ಟಿಕೆಟ್ ಪ್ರಯಾಣ ಮೌಲ್ಯದ ವೆಚ್ಚ ಆಗಿದೆ. 2023-24ಸಾಲಿನ ಆರ್ಥಿಕ ವರ್ಷಕ್ಕೆ ಶಕ್ತಿ ಯೋಜನೆಗಾಗಿ 2,800 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಒಟ್ಟು ವೆಚ್ಚ ಬಜೆಟ್ ಅನುದಾನವಾದ 2,800 ಕೋಟಿಯ ಗಡಿ ದಾಟಿದೆ.

ಗೃಹ ಜ್ಯೋತಿ ಯೋಜನೆ ಜಾರಿ: 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1 ರ ಬಿಲ್‍ನಿಂದ ಗ್ರಾಹಕರಿಗೆ ಸೌಲಭ್ಯ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಿದೆ. ಐದು ಎಸ್ಕಾಂಗಳು ತನ್ನ ಗೃಹ ಬಳಕೆಯ ಗ್ರಾಹಕರುಗಳಿಗೆ ಗೃಹ ಜ್ಯೋತಿ ಉಚಿತ ವಿದ್ಯುತ್ ಪೂರೈಸುತ್ತಿದೆ. ಸರಾಸರಿ ಆಧಾರದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೂರು ತಿಂಗಳಲ್ಲಿ ಗೃಹ ಜ್ಯೋತಿಯಡಿ ಒಟ್ಟು 2,125 ಕೋಟಿ ರೂ. ರಷ್ಟು ಉಚಿತ ವಿದ್ಯುತ್ ಬಳಸಿದ್ದಾರೆ. ಸುಮಾರು 4.12 ಕೋಟಿ ಗೃಹ ಬಳಕೆಯ ವಿದ್ಯುತ್ ಬಳಕೆದಾರರು ಗೃಹ ಜ್ಯೋತಿಯಡಿ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಒಟ್ಟು 747 ಕೋಟಿ ರೂ.‌ದಷ್ಟು ಉಚಿತ ವಿದ್ಯುತ್ ನೀಡಲಾಗಿದೆ. ಗೃಹ ಜ್ಯೋತಿಗಾಗಿ 2023-24ರಲ್ಲಿ 9,000 ಕೋಟಿ ರೂ.ಗಳಷ್ಟು ಅನುದಾನ ಮೀಸಲಿಡಲಾಗಿದೆ.

ಅನ್ನಭಾಗ್ಯಕ್ಕೆ ಅಕ್ಕಿ ಕೊರತೆಯ ಕಂಟಕ: ಕಾಂಗ್ರೆಸ್ ಸರ್ಕಾರದ ಜಾರಿಗೊಳಿಸಿರುವ ಮತ್ತೊಂದು ಗ್ಯಾರಂಟಿ ಯೋಜನೆ 'ಅನ್ನ ಭಾಗ್ಯʼ. ಈ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ಅಕ್ಕಿ ಕೊರತೆಯಾದ ಹಿನ್ನೆಲೆಯಲ್ಲಿ ಐದು ಕೆಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿಗೆ ಪ್ರತಿ ಕೆಜಿಗೆ 34 ರೂನಂತೆ 170 ರೂ ಹಣವನ್ನು ಜನರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ.

ಗೃಹ ಲಕ್ಷ್ಮಿ ಯೋಜನೆಗೂ ಹತ್ತು ಹಲವು ಸವಾಲು: ಒಂದೆಡೆ ಫಲಾನುಭವಿಗಳ ನೋಂದಣಿ ಗೊಂದಲ, ಕುಟುಂಬದಲ್ಲಿ ಯಜಮಾನಿಯನ್ನು ಪರಿಗಣಿಸುವ ಗೊಂದಲದಿಂದಾಗಿ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಜಾರಿ ವಿಳಂಬವಾಯಿತು. ಆ.30ಕ್ಕೆ ಷರತ್ತುಗಳೊಂದಿಗೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಮಹಿಳೆಯರ ಖಾತೆಗೆ ಮಾಸಿಕ 2000 ರೂ ಜಮೆ ಮಾಡುವ ಈ ಯೋಜನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 17,500 ಕೋಟಿ ರೂ. ಒದಗಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಹೊಂದಾಣಿಕೆಯೇ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ‌. ನವೆಂಬರ್ ವರೆಗೆ ಈ ಯೋಜನೆಗೆ 5,372 ಕೋಟಿ ರೂ. ಅನುದಾನ ಖರ್ಚಾಗಿದೆ.

2023ರಲ್ಲಿ ಕಾರ್ಯರೂಪಕ್ಕೆ ಬಾರದ ಯುವನಿಧಿ: ಯುವನಿಧಿ ಯೋಜನೆಯಡಿ ಪದವಿ, ಡಿಪ್ಲೊಮಾ ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದಿದ್ದರೆ, ಗರಿಷ್ಠ ಎರಡು ವರ್ಷದವರೆಗೆ ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈ ಯೋಜನೆ 2023 ವರ್ಷದಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಆದರೆ, ಯೋಜನೆಯ ನೋಂದಣಿ ಪ್ರಕ್ರಿಯೆಗೆ ಡಿ.26ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಈಗಾಗಲೇ 14,071 ನಿರುದ್ಯೋಗಿಗಳು ಸೇವಾಸಿಂಧು ಮೂಲಕ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಗೆ ಪ್ರಸಕ್ತ ವರ್ಷ 250 ಕೋಟಿ ರೂ. ಅನುದಾನ ಇರಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 1,250 ಕೋಟಿ ರೂ. ಅನುದಾನ ಬೇಕಾಗಲಿದೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಸವಾಲುಗಳ ಮಧ್ಯೆಯೂ 2023ರಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಇದನ್ನೂ ಓದಿ: 2023 ರಾಜ್ಯ ಕಾಂಗ್ರೆಸ್ ಪಾಲಿಗೆ ದಿಗ್ವಿಜಯದ ಅದೃಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.