ETV Bharat / state

ಮತ್ತೆ ಕೋವಿಡ್ ಆತಂಕ ಮರೆತ ಕಾಂಗ್ರೆಸ್; ಸೇರ್ಪಡೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು - ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು

ಸಮಾರಂಭ ಮುಕ್ತಾಯವಾಗುತ್ತಿದ್ದಂತೆ ಮಲ್ಲಿಕಾರ್ಜುನ ಅಕ್ಕಿ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಕೆಲ ಮುಖಂಡರು ವೇದಿಕೆ ಮೇಲೆ ತೆರಳಿದರೆ, ಕೆಲ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾರ್ಯಕ್ಕೆ ಮುಗಿಬಿದ್ದರು.

Congress
ಕಾಂಗ್ರೆಸ್
author img

By

Published : Oct 22, 2020, 3:21 PM IST

ಬೆಂಗಳೂರು: ಕೋವಿಡ್​​ ನಡುವೆಯೂ ಕಾಂಗ್ರೆಸ್​​ ಪದೇ ಪದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇಂದು ಕೂಡ ಜೆಡಿಎಸ್​​ ಮುಖಂಡರೋರ್ವರ ಕಾಂಗ್ರೆಸ್​ ಸೇರ್ಪಡೆ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು ಸಾಮಾನ್ಯವಾಗಿತ್ತು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಅಕ್ಕಿ ಹಾಗೂ ಅವರ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆಯಾದರು. ಈ ಸಂದರ್ಭ ಅಕ್ಕಿ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಮತ್ತೊಮ್ಮೆ ಕೆಪಿಸಿಸಿ ಕಚೇರಿಯ ಸಭಾಂಗಣ ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ಕಾರ್ಯಕರ್ತರಿಂದ ತುಂಬಿ ತುಳುಕಿತು.

ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು

ಸಮಾರಂಭ ಆರಂಭವಾಗುತ್ತಿದ್ದಂತೆ ವೇದಿಕೆಯ ಮುಂಭಾಗ ಹಾಗೂ ವೇದಿಕೆಯ ಅಕ್ಕಪಕ್ಕದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಕಾರ್ಯಕರ್ತರು ತುಂಬಿಕೊಂಡರು. ಸಾಕಷ್ಟು ಮಂದಿ ಕೂರಲು ಜಾಗವಿಲ್ಲದೆ ನಿಂತೇ ಕಾರ್ಯಕ್ರಮ ವೀಕ್ಷಿಸಿದರು. ಸಮಾರಂಭದಲ್ಲಿ ಮಲ್ಲಿಕಾರ್ಜುನ ಅಕ್ಕಿ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ, ಬಾವುಟ ನೀಡಿ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಇದಾದ ಬಳಿಕ ಪ್ರತಿಯೊಬ್ಬ ಕಾರ್ಯಕರ್ತರಿಗೂ ಕಾಂಗ್ರೆಸ್ ಮುಖಂಡರು ಶಾಲು ಹೊದೆಸಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.

ಸಮಾರಂಭ ಮುಕ್ತಾಯವಾಗುತ್ತಿದ್ದಂತೆ ಮಲ್ಲಿಕಾರ್ಜುನ ಅಕ್ಕಿ ಹಾಗೂ ಡಿಕೆಶಿ ಅವರನ್ನು ಅಭಿನಂದಿಸಲು ಕೆಲ ಮುಖಂಡರು ವೇದಿಕೆ ಮೇಲೆ ತೆರಳಿದರೆ, ಕೆಲ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾರ್ಯಕ್ಕೆ ಮುಗಿಬಿದ್ದರು.

ಮರೆತುಹೋದ ಕೋವಿಡ್ ನಿಯಮ:

ಸಾಮಾನ್ಯವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಕೋವಿಡ್ ಮುನ್ನೆಚ್ಚರಿಕೆ ಹಾಗೂ ನಿಯಮಾವಳಿಗಳ ಪಾಲನೆ ಆಗುವುದಿಲ್ಲ. ಅದು ಇಂದು ಸಹ ಪುನರಾವರ್ತನೆಗೊಂಡಿತು. ನೂರಾರು ಮಂದಿ ಸಮರ್ಪಕವಾಗಿ ಮಾಸ್ಕ್​ ಕೂಡ ಧರಿಸದೇ, ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದೇ ಒಬ್ಬರ ಮೇಲೆ ಮತ್ತೊಬ್ಬರು ಎದ್ದುಬಿದ್ದು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಕಂಡುಬಂತು. ಡಿ.ಕೆ.ಶಿವಕುಮಾರ್ ಮಾತ್ರವಲ್ಲ, ಕಾಂಗ್ರೆಸ್​ನ ಯಾವುದೇ ಕಾರ್ಯಕ್ರಮವಿದ್ದರೂ ಜನರನ್ನು ಸೇರಿಸುವುದು ವಾಡಿಕೆಯಾಗಿದೆ. ಕೋವಿಡ್ ಬರುವುದಕ್ಕಿಂತ ಮುನ್ನ ಯಾವ ಸ್ಥಿತಿ ಇತ್ತು ಅದೇ ಸ್ಥಿತಿ ಈಗಲೂ ಮುಂದುವರಿದಿದೆ. ಪಕ್ಷದ ಕಾರ್ಯಕ್ರಮದಲ್ಲಿ ಜನರಿಗೆ ಯಾವುದೇ ಕೊರೊನಾ ಆತಂಕ ಇಲ್ಲವೇನೋ ಎಂಬ ವಾತಾವರಣ ಗೋಚರಿಸುತ್ತದೆ. ಅದು ಇಂದು ಕೂಡ ಪುನರಾವರ್ತನೆಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.