ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸದಾಗಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹಾಗೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮತ್ತು ಬಲವರ್ಧನೆ ಮಾಡುವ ಉದ್ದೇಶದಿಂದ ಜಿಲ್ಲಾವಾರು ಅಧ್ಯಕ್ಷರ ನೇಮಕ ಹಾಗೂ ಬದಲಾವಣೆ ಕಾರ್ಯದಲ್ಲಿ ಡಿಕೆ ಶಿವಕುಮಾರ್ ನಿರತರಾಗಿದ್ದಾರೆ.
ಇದರ ಭಾಗವಾಗಿಯೇ ಐದು ಜಿಲ್ಲೆಗಳಲ್ಲಿ ನೂತನ ನೇಮಕ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚು ಒತ್ತು ಕೊಡುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ.
ಹೊಸ ಅಧ್ಯಕ್ಷರ ವಿವರ: ಸಿ.ಆರ್. ಗೌಡ - ಬೆಂಗಳೂರು ಗ್ರಾಮಾಂತರ, ಬಸರೆಡ್ಡಿ- ಯಾದಗಿರಿ, ಧರ್ಮಜ ಉತ್ತಪ್ಪ - ಕೊಡಗು, ಚಂದ್ರಶೇಖರ್ ಗೌಡ-ತುಮಕೂರು, ಈ.ಹೆಚ್. ಲಕ್ಷ್ಮಣ - ಹಾಸನ ಜಿಲ್ಲೆಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಹಣ ನೀಡಿದವರ ವಿರುದ್ಧ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ: ಸಿದ್ದರಾಮಯ್ಯ