ETV Bharat / state

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನ ಪರಿಷತ್​ನಲ್ಲಿ ಸಂತಾಪ

ನಾಲ್ಕನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ವಿಧಾನಪರಿಷತ್​ನಲ್ಲಿ ಸಂತಾಪ ಸೂಚನೆ
ವಿಧಾನಪರಿಷತ್​ನಲ್ಲಿ ಸಂತಾಪ ಸೂಚನೆ
author img

By

Published : Sep 24, 2020, 12:41 PM IST

ಬೆಂಗಳೂರು: ನಾಲ್ಕನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸಂತಾಪ ಸೂಚನೆ ಬಳಿಕ ಮಾತನಾಡಿದ ಸಚಿವ ಸಿ.ಟಿ ರವಿ, ಸುರೇಶ್​ ಅಂಗಡಿಯವರು ಕೇಂದ್ರ ಸಚಿವರಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ದೊಡ್ಡ ವ್ಯಕ್ತಿತ್ವ ಹೊಂದಿದ್ದ ರಾಜಕಾರಣಿಯಾಗಿದ್ದರು. ಚಿಕ್ಕಮಗಳೂರು-ಹಾಸನ ರೈಲು ಮಾರ್ಗ ವಿಚಾರ ಚರ್ಚೆಗೆ ಬಂದರೆ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅಗಲಿಕೆಯಿಂದ ಪಕ್ಷಕ್ಕೆ ದೊಡ್ಡ ಮಟ್ಟದ್ದ ನಷ್ಟ ಉಂಟಾಗಿದೆ ಎಂದರು.

ಇನ್ನು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಿದೆ. ಅವರ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಸಜ್ಜನ ರಾಜಕಾರಣಿ, ಸ್ನೇಹ ಜೀವಿಯಾಗಿದ್ದರು ಎಂದು ಸ್ಮರಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂಭಾವಿತ ರಾಜಕಾರಣಿ, ಮಂತ್ರಿಯಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದರು. ಕರೆ ಮಾಡಿ ಪಾಸಿಟಿವ್ ಬಂದ ಮಾಹಿತಿ ನೀಡಿದ್ದರು. ರಾಜಕಾರಣಿ ಹೇಗೆ ಇರಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ರಾಜಕೀಯ ಕಲುಷಿತ ವಾತಾವರಣದಲ್ಲಿ ನಾವಿದ್ದರೂ ಪಕ್ಷಾತೀತವಾಗಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿದ್ದರು. ತೆರೆಮರೆಯಲ್ಲೇ ಕೆಲಸ ಮಾಡಿಕೊಂಡಿದ್ದರು. ಸಾವು ಎಷ್ಟೊಂದು ಘೋರ, ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಆದರ್ಶ ಕುಟುಂಬ ಅವರದ್ದಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ,‌ ಸರಳ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ. ನಾನು ಎಂಪಿ ಆದಾಗ ಅವರು ಹೋಂ ಅಲಾಟ್​ಮೆಂಟ್ ಸಮಿತಿಯಲ್ಲಿದ್ದರು. ನನಗೆ ಕೋರಿಕೆ ಮೇರೆಗೆ ಬಂಗಲೆ ಕೊಟ್ಟರು. ಆದರೆ ಶಾರ್ಟ್ ಸರ್ಕ್ಯೂಟ್​ನಿಂದ ಬಂಗಲೆ‌ ಸುಟ್ಟಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಆಗ ಗಾಯ ಮಾಡಿಕೊಂಡಿದ್ದರು. ಆರು ತಿಂಗಳು ಅವರ ಮನೆಯಲ್ಲೇ ಇರಲು ಅವಕಾಶ ಕೊಟ್ಟಿದ್ದರು. ರಾಜ್ಯಕ್ಕೆ ರೈಲ್ವೆ ಇಲಾಖೆಯಿಂದ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಸಜ್ಜನ‌ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರ ಕೊಡುಗೆ ಸ್ಮರಿಸಿದರು.

ಬಿಜೆಪಿ ಸದಸ್ಯ ಅರುಣ್ ಶಹಾಪುರ್ ಮಾತನಾಡಿ, ಬೆಳಗಾವಿಯಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಸುರೇಶ್ ಅಂಗಡಿ. ನಾನು ಇಂದು ಇಲ್ಲಿ ಬಂದಿದ್ದೇನೆ ಎಂದರೆ ಅದಕ್ಕೆ ಅವರು ಕಾರಣ. ಅವರ ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾ ಭಾವುಕರಾದರು.

ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಅಂಗಡಿ ಅವರಿಗೆ ಪಕ್ಷ ಇರಲಿಲ್ಲ. ಶೇ. 40ರಷ್ಟು ಮುಸ್ಲಿಂ ಮತ ಪಡೆದ ರಾಜಕಾರಣಿ. ಅವರ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ನಡೆಸುತ್ತಿದ್ದದ್ದು ಮುಸಲ್ಮಾನರು. ನಗುನಗುತ್ತಾ ರಾಜಕಾರಣ ಮಾಡುತ್ತಿದ್ದರು. ರಾಜ್ಯ ದೊಡ್ಡ ಶಕ್ತಿಯನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಹುಟ್ಟಿದಾಗ ಉಸಿರು ಇರಲಿದೆ, ಹೆಸರು ಇರಲ್ಲ. ಸತ್ತಾಗ ಹೆಸರು ಇರಲಿದೆ, ಉಸಿರು ಇರಲ್ಲ ಎನ್ನುವ ಮಾತು ಅಂಗಡಿ ವಿಚಾರದಲ್ಲಿ ಸತ್ಯವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅಂಗಡಿಯವರದ್ದು. ಗುಣಮುಖರಾಗಲಿದ್ದಾರೆ ಎನ್ನುವ ನಂಬಿಕೆ ಹುಸಿಯಾಯಿತು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದರು.

ನಂತರ ಸುರೇಶ್ ಅಂಗಡಿ ನಿಧನಕ್ಕೆ ಒಂದು ನಿಮಿಷ ಮೌನಾಚರಿಸುವ ಮೂಲಕ ವಿಧಾನ ಪರಿಷತ್​ನಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಅರ್ಧ ಗಂಟೆ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.