ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಕಾಸ ಗ್ರಾಮ ಯೋಜನೆ ಅಡಿಯಲ್ಲಿ ಡಾಬಸ್ ಪೇಟೆ ಹೋಬಳಿಯ ನಾಲ್ಕು ಪಂಚಾಯತಿಗಳಿಂದ 16 ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ದೊರೆಯಿತು.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ, ಶಿವಗಂಗೆ, ಹೊನ್ನೇನಹಳ್ಳಿ, ಅಗಳಕುಪ್ಪೆ, ಪಂಚಾಯತಿ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕಾಸ ಗ್ರಾಮ ಯೋಜನೆಯಡಿಯಲ್ಲಿ ಒಟ್ಟು 7 ಕೋಟಿ ವೆಚ್ಚದಲ್ಲಿ ಇಂದು ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವುದು ನಮ್ಮ ಗುರಿಯಾಗಿದ್ದು, ರಾಜ್ಯದ ಹೆಚ್.ಡಿ. ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇಂತಹ ಕಾಂಕ್ರೀಟ್ ಕಾಮಗಾರಿಗಳು ಗ್ರಾಮಗಳಿಗೆ ಅನುಕೂಲಕರವಾದದ್ದು. ಗ್ರಾಮಗಳಲ್ಲಿ ವೈಮನಸ್ಸು ಬಿಟ್ಟು ಕಾಮಗಾರಿಯ ಗುಣಮಟ್ಟದ ಕಡೆಗೆ ಎಲ್ಲರೂ ಗಮನಹರಿಸಬೇಕು, ಆಗ ಮಾತ್ರ ಮಹಾತ್ಮ ಗಾಂಧೀಜಿ ಕಂಡ ರಾಮಮರಾಜ್ಯದ ಅಭಿವೃದ್ಧಿ ಕನಸು ನನಸಾಗುತ್ತದೆ ಎಂದರು.