ETV Bharat / state

ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆ: ನಾಗರಿಕರಿಗೆ 220 ಪರೀಕ್ಷೆಗಳು ಒಂದೇ ಸ್ಥಳದಲ್ಲಿ ಲಭ್ಯ

author img

By

Published : Dec 24, 2022, 11:08 PM IST

ಸುಬೇದಾರ್ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಲಾದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ - ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆ- ಶಾಸಕ, ಸಚಿವರು ಭಾಗಿ

primary health centre inauguration
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಬೆಂಗಳೂರು: ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಬೇದಾರ್ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ಉದ್ಘಾಟಿಸಿದರು. ಜೊತೆಯಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು "ಒಬ್ಬ ಜನಪ್ರತಿನಿಧಿಗೆ ಮನಸ್ಸಿದ್ದರೆ ತಮ್ಮ ಕ್ಷೇತ್ರವನ್ನು ಹೇಗೆ ಮಾದರಿಯಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಅಶ್ವತ್ಥನಾರಾಯಣ ಉದಾಹರಣೆ ಆಗಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ, ನಾಗರಿಕ ಸೇವೆಗಳು ಸೇರಿದಂತೆ ಎಲ್ಲವೂ ಸುಗಮವಾಗಿ ನಡೆಯುತ್ತಿವೆ. ಇದು ಕೇವಲ ಹಣ ಮತ್ತು ಶ್ರೀಮಂತಿಕೆಯಿಂದ ಆಗುವುದಿಲ್ಲ.

ಇದಕ್ಕೆ ಜನಪರವಾದ ಕಳಕಳಿ ಬೇಕಾಗುತ್ತದೆ. ಇದು ಇಡೀ ಬೆಂಗಳೂರಿನ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಅಶ್ವತ್ಥ ನಾರಾಯಣ್ ವಹಿಸಿದ ಪಾತ್ರವು ಅನುಕರಣೀಯವಾಗಿದೆ ಎಂದು ಬಿಎಸ್​ವೈ ಮೆಚ್ಚುಗೆಯ ಮಾತುಗಳನ್ನಾಡಿದರು.

220 ಪರೀಕ್ಷೆಗಳು ಲಭ್ಯ: ಈ ಸಂದರ್ಭದಲ್ಲಿ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲೆಗಳ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ 220 ತರಹದ ಪರೀಕ್ಷೆಗಳು ಲಭ್ಯವಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ಅರ್ಹ ರೋಗಿಗಳಿಗೆ ಔಷಧ ಉಚಿತ: ಅರ್ಹ ರೋಗಿಗಳಿಗೆ ಔಷಧಿಗಳನ್ನು ಸಹ ಉಚಿತವಾಗಿ ಕೊಡಲಾಗುವುದು. ಇಲ್ಲದಿದ್ದರೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಿಂದ ಭಾರೀ ರಿಯಾಯಿತಿ ದರದಲ್ಲಿ ಪೂರೈಸಲಾಗುವುದು ಎಂದು ಮಾಹಿತಿಯನ್ನು ಸಚಿವರು ವಿವರಿಸಿದರು.

ಒಂದೇ ಸ್ಥಳದಲ್ಲಿ ಚಿಕಿತ್ಸೆಗಳು ಲಭ್ಯ: ಕ್ಷೇತ್ರದಲ್ಲಿ ಇರುವ ಕೆ.ಸಿ ಜನರಲ್ ಆಸ್ಪತ್ರೆ, ಗುಟ್ಟಹಳ್ಳಿ, ಮತ್ತೀಕೆರೆ ಸೇರಿದಂತೆ ಹಲವೆಡೆಗಳಲ್ಲಿ ಒಂದೇ ಸ್ಥಳದಲ್ಲಿ ಎಲ್ಲ ಚಿಕಿತ್ಸೆಗಳು ಸಿಗುವಂತೆ ಪರಿಪೂರ್ಣ ವ್ಯವಸ್ಥೆ ಮಾಡಲಾಗಿದೆ. ಉಳಿದ ವಾರ್ಡುಗಳಲ್ಲೂ ಮುಂದಿನ ಕೆಲವೇ ತಿಂಗಳಲ್ಲಿ ಇಂತಹ ಅನುಕೂಲ ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಆಯುಕ್ತ ಡಾ.ತ್ರಿಲೋಕಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್, ಮಲ್ಲೇಶ್ವರಂ ಆರೋಗ್ಯಾಧಿಕಾರಿಗಳಾದ ಡಾ.ಮನೋರಂಜನ್ ಹೆಗಡೆ, ಲೋಕೇಶ್, ಮಾಜಿ ಕಾರ್ಪೊರೇಟರ್​ಗಳಾದ ಜಯಪ್ರಕಾಶ್, ಜೈಪಾಲ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜನಾರ್ದನ್ ರೆಡ್ಡಿ ನಾಳೆ ಮಹತ್ವದ ಮಾಧ್ಯಮಗೋಷ್ಟಿ: ಹೊಸ ರಾಜಕೀಯ ಪಕ್ಷ ಘೋಷಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.