ETV Bharat / state

ಕೋವಿಡ್​ನಿಂದ ತಬ್ಬಲಿಗಳಾದ ಮಕ್ಕಳು.. ಅನಾಥರಿಗೆ ಆಸರೆಯಾದ ಬಾಲಸೇವಾ ಯೋಜನೆಯ ಸ್ಥಿತಿಗತಿ ಹೇಗಿದೆ? - ಬಾಲ ಸೇವಾ ಯೋಜನೆ ಸುದ್ದಿ

ಕೋವಿಡ್ ಅಟ್ಟಹಾಸಕ್ಕೆ ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲಸೇವಾ ಯೋಜನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತಿದೆ. ರಾಜ್ಯ ಸರ್ಕಾರ ಅನಾಥ ಮಕ್ಕಳನ್ನು ಸಾಕಿ ಸಲುಹಿ, ಒಳ್ಳೆಯ ವಿದ್ಯಾಭ್ಯಾಸ ನೀಡಿ ಓರ್ವ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಪೋಷಕರ ಪಾತ್ರವನ್ನು ನಿಭಾಯಿಸಲಿದೆ.

Balaseva project status
ಬಾಲಸೇವಾ ಯೋಜನೆ
author img

By

Published : Sep 9, 2021, 7:34 PM IST

ಬೆಂಗಳೂರು: ಕೋವಿಡ್ ಕ್ರೌರ್ಯತೆ ಇಡೀ‌ ಕರುನಾಡನ್ನು‌ ನಲುಗಿಸಿತ್ತು‌. ಕೊರೊನಾ ಮಹಾಮಾರಿ ತಂದೆ, ತಾಯಿಯ ಪ್ರಾಣ ಕಸಿಯುವ ಮೂಲಕ ಅದೆಷ್ಟೋ ಮಕ್ಕಳನ್ನು ತಬ್ಬಲಿಯಾಗಿಸಿದೆ. ತಬ್ಬಲಿ ಮಕ್ಕಳ ಆಸರೆಗಾಗಿ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆಯನ್ನು ಜಾರಿಗೆ ತಂದಿದೆ. ಬಾಲಸೇವಾ ಯೋಜನೆಯಡಿ ಸರ್ಕಾರ ಈವರೆಗೆ ಕೈ ಹಿಡಿದ ತಬ್ಬಲಿಗಳೆಷ್ಟು ಎಂಬ ವರದಿ ಇಲ್ಲಿದೆ.

ಕೋವಿಡ್‌ ಮಹಾಮಾರಿ ಜನಜೀವನವನ್ನೇ ನರಕಕ್ಕೆ ತಳ್ಳಿದೆ. ಅದೆಷ್ಟೋ ಪ್ರೀತಿಪಾತ್ರರನ್ನು ಈ ಮಹಾಮಾರಿ ಕಸಿದುಕೊಂಡಿದೆ. ತಂದೆ ತಾಯಿಯನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಕೋವಿಡ್ ಅಟ್ಟಹಾಸಕ್ಕೆ ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲಸೇವಾ ಯೋಜನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತಿದೆ. ರಾಜ್ಯ ಸರ್ಕಾರ ಅನಾಥ ಮಕ್ಕಳನ್ನು ಸಾಕಿ ಸಲುಹಿ, ಒಳ್ಳೆಯ ವಿದ್ಯಾಭ್ಯಾಸ ನೀಡಿ ಓರ್ವ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಪೋಷಕರ ಪಾತ್ರವನ್ನು ನಿಭಾಯಿಸಲಿದೆ.

Balaseva project status
ಬಾಲಸೇವಾ ಯೋಜನೆ ಅಂಕಿ ಅಂಶ

ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ರಾಜ್ಯ ಸರ್ಕಾರ ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಪ್ರಕಟಿಸಿದೆ. ಈ ಮೂಲಕ ಪ್ರತೀ ತಿಂಗಳು 3,500 ರೂ. ಸಹಾಯಧನ ನೀಡಲಾಗುತ್ತದೆ.

ಬಾಲಸೇವಾ ಯೋಜನೆಯ ವಿಶೇಷತೆ ಏನು?:

  • ಹೆತ್ತವರನ್ನು ಕಳೆದುಕೊಂಡ 10 ವರ್ಷದ ಒಳಗಿನ ಮಕ್ಕಳ ಪಾಲನೆಗೆ ಕುಟುಂಬ ಸದಸ್ಯರು ಇಲ್ಲದಿದ್ದರೆ ನೋಂದಾಯಿತ ಮಕ್ಕಳ ಪಾಲನೆ ಸಂಸ್ಥೆಗಳಲ್ಲಿ ದಾಖಲಿಸಿ ಆರೈಕೆ ಮಾಡಲಾಗುತ್ತದೆ.
  • ಜೊತೆಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾ ಕೌಶಲ ಅಭಿವೃದ್ಧಿಗೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ ನೀಡಲಾಗುತ್ತದೆ. 21 ವರ್ಷ ಪೂರೈಸಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ, ಮದುವೆ, ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.
  • ಅನಾಥ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ಒದಗಿಸಿ, ಅವರ ಮೂಲಕ ಸಹಾಯ ಮಾರ್ಗದರ್ಶನ ಒದಗಿಸಲಾಗುತ್ತದೆ. ಪ್ರತೀ ಅನಾಥ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ‌ ಇಡಲಾಗುತ್ತದೆ. ಈ ಮಕ್ಕಳು 18 ವರ್ಷ ಪೂರೈಸಿದ ಮೇಲೆ 23 ವರ್ಷದ ತನಕ ಪ್ರತೀ ತಿಂಗಳು ಮಾಸಿಕ ಸ್ಟೈಫ‌ಂಡ್‌ ನೀಡಲಾಗುತ್ತದೆ. ಇದನ್ನು ಅವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. 23 ವರ್ಷವಾದ ಮೇಲೆ ಒಂದೇ ಬಾರಿಗೆ 10 ಲಕ್ಷ ರೂ. ನೀಡಲಾಗುತ್ತದೆ.

ಕೋವಿಡ್​ನಿಂದ ಅನಾಥರಾದ ಮಕ್ಕಳ ಸಂಖ್ಯೆ: ಕೋವಿಡ್​ಗೆ ಈವರೆಗೆ ರಾಜ್ಯಾದ್ಯಂತ 128 ಮಕ್ಕಳು ಅನಾಥರಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರದಲ್ಲಿ 16 ಮಕ್ಕಳು ತಬ್ಬಲಿಗಳಾಗಿರುವುದು ವರದಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ 12, ಬೆಳಗಾವಿ, ಕೋಲಾರದಲ್ಲಿ ತಲಾ 7 ಮಕ್ಕಳು, ಯಾದಗಿರಿ, ಹಾಸನ, ಬಳ್ಳಾರಿ, ಬೀದರ್​ನಲ್ಲಿ ತಲಾ 6 ಮಕ್ಕಳು, ಬಾಗಲಕೋಟೆ, ಚಿಕ್ಕಮಗಳೂರು, ದ.ಕನ್ನಡ, ಗದಗ, ಶಿವಮೊಗ್ಗ, ತುಮಕೂರಿನಲ್ಲಿ ತಲಾ 5 ಮಕ್ಕಳು, ಧಾರವಾಡ, ಮೈಸೂರು, ರಾಮನಗರ, ಕೊಡಗಿನಲ್ಲಿ ತಲಾ 4 ಮಕ್ಕಳು ಅನಾಥರಾಗಿರುವುದು ಈವರೆಗೆ ವರದಿಯಾಗಿದೆ.

ಬಾಲಸೇವಾ ಯೋಜನೆಯಡಿ ಪಾವತಿಯಾಗಿದ್ದೆಷ್ಟು?: ಕೋವಿಡ್​ನಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪೈಕಿ ಬಾಲಸೇವಾ ಯೋಜನೆಗೆ 126 ಮಕ್ಕಳು ಅರ್ಹರಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಮೋಹನ್ ರಾಜ್ ಅಂಕಿ-ಅಂಶ ನೀಡಿದ್ದಾರೆ.

ಈ ಪೈಕಿ 115 ಮಕ್ಕಳಿಗೆ ಆರ್​ಟಿಜಿಎಸ್ ಮೂಲಕ ಪರಿಹಾರ ಹಣ ಸಂದಾಯ‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಕ್ಕಳನ್ನು ಮಾನಸಿಕ ಆಘಾತದಿಂದ ಹೊರತರುವ ನಿಟ್ಟಿನಲ್ಲಿ ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬಾಲ ಹಿತೈಷಿ ಯೋಜನೆಯನ್ನು ಜಾರಿಗೆ ತಂದಿದೆ.

ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಅನುಕೂಲವಾಗುವಂತೆ ಅವರಿಗೆ ಮಾರ್ಗದರ್ಶನ ನೀಡಲು ಬಾಲ ಹಿತೈಷಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಿದಾಗ ಕೆಲವರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಹಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆಯೇ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.