ETV Bharat / state

ಲೋಕಾಯುಕ್ತಕ್ಕೆ ದೂರು ನೀಡಿರೋದು ರಾಜಕೀಯ ಪಿತೂರಿ: ಸಚಿವ ಸುಧಾಕರ್

author img

By

Published : Aug 11, 2020, 7:54 AM IST

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಸಾನಿಟೈಸರ್ ಖರೀದಿ ಮಾಡಿಲ್ಲ. ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ನಾಲ್ವರು ಮಂತ್ರಿಗಳು ಇರುತ್ತಾರೆ. ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಲ್ಲಿ ಚರ್ಚಿಸಿಯೇ ಖರೀದಿ ಮಾಡಲಾಗಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

ಲೋಕಾಯುಕ್ತಕ್ಕೆ ನನ್ನ ವಿರುದ್ದ ದೂರು ನೀಡಿರೋದು ರಾಜಕೀಯ ಪಿತೂರಿ: ಸಚಿವ ಸುಧಾಕರ್

ಬೆಂಗಳೂರು: ಲೋಕಾಯುಕ್ತದಲ್ಲಿ ನನ್ನ ವಿರುದ್ಧ ದೂರುದಾಖಲಾಗಿರುವ ವಿಚಾರ ಬಹಳ ಸಂತೋಷ. ಈ ಮೂಲಕವಾದ್ರೂ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಮಾಜಿ ಶಾಸಕ ಸಾರ್ವಭೌಮ ಬಗಲಿ ಲೋಕಾಯುಕ್ತದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಆರೋಪ ಸಂಬಂಧ ಲೋಕಯುಕ್ತಕ್ಕೆ ದೂರು ನೀಡಿರುವುದಕ್ಕೆ ಸದಾಶಿವ ನಗರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿಲ್. ವೈದ್ಯಕೀಯ ಇಲಾಖೆ ಯಾವುದೇ ಉಪಕರಣ ಖರದಿ ಮಾಡಿಲ್ಲ. ಟಾಸ್ಕ್​​​ಫೋರ್ಸ್ ಸಮಿತಿಯಲ್ಲಿ ನಿರ್ಧರಿಸಿಯೇ ಉಪಕರಣಗಳ ಖರೀದಿ ಮಾಡಿದೆ ಎಂದರು.

ವೈದ್ಯಕೀಯ ಸಚಿವ ಸುಧಾಕರ್

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಸಾನಿಟೈಸರ್ ಖರೀದಿ ಮಾಡಿಲ್ಲ. ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ನಾಲ್ವರು ಮಂತ್ರಿಗಳು ಇರುತ್ತಾರೆ. ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಲ್ಲಿ ಚರ್ಚಿಸಿಯೇ ಖರೀದಿ ಮಾಡಲಾಗಿದೆ ಎಂದರು.

ಯಾರು ದೂರು ಕೊಟ್ಟಿದ್ದಾರೋ ಅವರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಯಲಿ ಎಂದು ಈಗಾಗಲೇ ಹೇಳಿದ್ದೇನೆ. ನಾವು ಎಲ್ಲಾ ರೀತಿಯ ತನಿಖೆಗೆ ಸಿದ್ದವಿದ್ದೇವೆ. ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಖರೀದಿಯಾಗಿದೆ, ಯಾವ ರೀತಿ ಖರೀದಿಸಲಾಗಿದೆ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ ಎಂದು ಸುಧಾಕರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.