ETV Bharat / state

ಜೆಡಿಎಸ್ ಮುಖಂಡನ ವಿರುದ್ಧ ದೂರು: ಎಫ್ಐಆರ್​ಗೆ ಹೈಕೋರ್ಟ್ ತಡೆ - JDS leader Dr Charan Gowda

ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಎಫ್ಐಆರ್​ಗಳನ್ನು ರದ್ದುಪಡಿಸುವಂತೆ ಕೋರಿ ಜೆಡಿಎಸ್ ಮುಖಂಡ ಡಾ ಚರಣ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

High Court obstruct FIR
ಜೆಡಿಎಸ್ ಮುಖಂಡನ ವಿರುದ್ಧ ದೂರು: ಎಫ್ಐಆರ್​ಗೆ ಹೈಕೋರ್ಟ್ ತಡೆ
author img

By

Published : May 27, 2020, 10:00 PM IST

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್. ಮುನಿರಾಜು ಹಾಗೂ ಮತ್ತಿತರರು ನೀಡಿದ್ದ ದೂರು ಆಧರಿಸಿ ಸ್ಥಳೀಯ ಜೆಡಿಎಸ್ ಮುಖಂಡ ಡಾ. ಚರಣ್ ಗೌಡ ವಿರುದ್ಧ ಪೊಲೀಸರು ದಾಖಲಿಸಿರುವ 3 ಎಫ್ಐಆರ್​ಗಳಿಗೆ ಹೈಕೋರ್ಟ್ ತಡೆ ನೀಡಿದೆ.

ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಎಫ್ಐಆರ್​ಗಳನ್ನು ರದ್ದುಪಡಿಸುವಂತೆ ಕೋರಿ ಜೆಡಿಎಸ್ ಮುಖಂಡ ಡಾ ಚರಣ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ದೂರುದಾರರಾದ ಎಸ್. ಮುನಿರಾಜು ಮತ್ತವರ ಬೆಂಬಲಿಗರು ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ದ್ವೇಷದಿಂದ ದೂರು ಸಲ್ಲಿಸಿದ್ದಾರೆ. ಹೀಗಾಗಿ ಎಫ್ಐಆರ್​ಗಳಿಗೆ ತಡೆ ನೀಡಬೇಕು ಮತ್ತು ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ವಕೀಲರ ವಾದ ಪುರಸ್ಕರಿಸಿದ ಪೀಠ ಎಫ್ಐಆರ್ ಗಳಿಗೆ ತಡೆ ನೀಡಿ ಆದೇಶಿಸಿತು.

ಬಿಜೆಪಿ ಮಾಜಿ ಶಾಸಕ ಎಸ್. ಮುನಿರಾಜು, ಯುವ ಮೋರ್ಚಾ ಅಧ್ಯಕ್ಷ ಬಿ ಆರ್ ಸತೀಶ್ ಹಾಗೂ ಚಿಕ್ಕ ಬೈಲಪ್ಪ ಎಂಬುವವರು ದಾಸರಹಳ್ಳಿ ಜೆಡಿಎಸ್ ಮುಖಂಡ ಡಾ. ಚರಣ್ ರೆಡ್ಡಿ ವಿರುದ್ಧ ಮೇ 5ರಂದು ಸೈಬರ್ ಪೊಲೀಸರಿಗೆ 3 ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು. ದೂರಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ದೂರುಗಳ ಮೇರೆಗೆ ವ್ಯವಹಾರಗಳನ್ನು ದಾಖಲಿಸಿಕೊಂಡಿದ್ದ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಚರಣ್ ಗೌಡ ಅವರನ್ನು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.