ಬೆಂಗಳೂರು: ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಿದ 19 ಸಾವಿರ ಸಿಲಿಕಾನ್ ಸಿಟಿಯ ಪೊಲೀಸರಿಗೆ ಹಿಂದಿನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
![Commendation letter to 19,000 policemen](https://etvbharatimages.akamaized.net/etvbharat/prod-images/kn-bng-03-appristion-letter-7202806_09082020203217_0908f_1596985337_503.jpg)
ಕೊರೊನಾದಿಂದಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಿದ್ದರೂ ಪೊಲೀಸರು ಮಾತ್ರ ಕೆಲಸ ನಿರ್ವಹಿಸಬೇಕಾಗಿತ್ತು. ಪೊಲೀಸರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿಯಲ್ಲೂ, ಸೀಲ್ಡೌನ್, ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕೆಲಸ ಮಾಡಿ ನಿಜವಾದ ವಾರಿಯರ್ಸ್ ಆಗಿದ್ದಾರೆ. ಈ ಕೆಲಸಕ್ಕೆ ಅವರಿಗೆ ಹೆಚ್ಚಿನ ಸಂಬಳ ಕೊಟ್ಟಿರಲಿಲ್ಲ. ಹಾಗಂತ ಅವರೇನೂ ಸುಮ್ಮನೆ ಕೂರಲಿಲ್ಲ, ಬದಲಿಗೆ ಪ್ರಾಣದ ಹಂಗು ಬಿಟ್ಟು ಫೀಲ್ಡ್ಗಿಳಿದು ಕೆಲಸ ಮಾಡಿದ್ದಾರೆ ಎಂದು ಕೊಂಡಾಡಿದರು.
ಇಲ್ಲಿಯತನಕ ಸುಮಾರು 19 ಸಾವಿರ ಪ್ರಶಂಸನಾ ಪತ್ರಗಳನ್ನು ತಲುಪಿಸಿದ್ದು, ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ. 19 ಸಾವಿರ ಪೊಲೀಸ್ರಿಗೆ ಪ್ರಶಂಸನಾ ಪತ್ರ ನೀಡಿರುವುದು ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.