ETV Bharat / state

ಸಿಲಿಕಾನ್ ಸಿಟಿಯಲ್ಲಿ ಸಮುದ್ರ ಸುರಂಗ ಮಾರ್ಗ: ಕಾಣಸಿಗುತ್ತಿವೆ ಕಲರ್‌ಫುಲ್ ಮೀನುಗಳು..

ಬೆಂಗಳೂರು ನಗರದಲ್ಲಿ ಸಮುದ್ರ ಸುರಂಗ ಮಾರ್ಗ ಮೀನುಗಳ ಪ್ರದರ್ಶನ - ರಾಷ್ಟ್ರೀಯ ಗ್ರಾಹಕ ಮೇಳದ ನಿರ್ದೇಶಕ ಗೌತಮ್ ಮಾಹಿತಿ.

ಸಿಲಿಕಾನ್ ಸಿಟಿಯಲ್ಲಿ ಸಮುದ್ರ ಸುರಂಗ ಮಾರ್ಗ
ಸಿಲಿಕಾನ್ ಸಿಟಿಯಲ್ಲಿ ಸಮುದ್ರ ಸುರಂಗ ಮಾರ್ಗ
author img

By

Published : Jan 27, 2023, 10:00 PM IST

ಬೆಂಗಳೂರು : ಏಂಜೆಲ್, ಕೋಯಿ, ಸ್ಕಾರ್ಪಿಯನ್ ಕ್ಲೌನ್ ಸೇರಿದಂತೆ ನಾನಾ ವಿವಿಧ ಕಲರ್‌ಫುಲ್ ಮೀನುಗಳನ್ನು ಒಂದೆಡೆ ನೋಡಲು ವಿದೇಶಗಳಿಗೆ ಅಥವಾ ಸಮುದ್ರಗಳಿಗೆ ತೆರಳಿ ಸ್ಕೂಬಾ ಡೈವ್ ಮಾಡಲು ಹೋಗುತ್ತಾರೆ. ಈಗ ರಾಜಧಾನಿಯಲ್ಲಿಯೇ ಹಲವಾರು ಜಾತಿಯ ಮೀನುಗಳನ್ನು ಕಾಣಬಹುದಾಗಿದೆ. ರಾಜಧಾನಿಯ ಮೈಸೂರು ರಸ್ತೆಯಲ್ಲಿರುವ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿಯ ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಜೆ.ಪಿ ನಗರ 8ನೇ ಹಂತದಲ್ಲಿರುವ ಜಂಬೂಸವಾರಿ ದಿನ್ನೆ ಮುಖ್ಯರಸ್ತೆಗೆ ತೆರಳಿದರೆ ಕಲರ್‌ಫುಲ್ ಮೀನುಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಗ್ರಾಹಕರ ಮೇಳದ ಬೆಂಬಲದಿಂದ ಆಯೋಜನೆ: ನಗರದಲ್ಲಿ ಇದೇ ಮೊದಲಬಾರಿಗೆ 20,000 ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಸಮುದ್ರ ಸುರಂಗ ಮಾರ್ಗ ಮೀನುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಪ್ರದರ್ಶನವನ್ನು ರಾಷ್ಟ್ರೀಯ ಗ್ರಾಹಕರ ಮೇಳದ ಬೆಂಬಲದಿಂದ ಆಯೋಜಿಸಲಾಗಿದೆ. ಇಲ್ಲಿ ಸಿಂಗಾಪುರ, ಜಪಾನ್, ಇಂಡೋನೇಷಿಯಾ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿನ ಏಂಜೆಲ್ ಫಿಶ್, ಕೋಯಿ, ಸ್ಕಾರ್ಪಿಯನ್ ಫಿಶ್, ಕ್ಲೌನ್ ಫಿಶ್, ಸಮುದ್ರ ಕುದುರೆ, ಮೊಸಳೆ ಮೀನು, ಬಾಕ್ಸ್​ ಫಿಶ್, ಕೌಫಿಶ್, ಮಹ್‌ಸೀರ್ ಒಳಗೊಂಡಂತೆ 500ಕ್ಕೂ ಹೆಚ್ಚು ವಿವಿಧ ಜಾತಿಯ ಮೀನುಗಳನ್ನು ಪ್ರದರ್ಶಿಸಲಾಗುತ್ತಿದೆ.

ಇದನ್ನೂ ಓದಿ : ಕಾಶ್ಮೀರದ ಟೀಟ್ವಾಲ್‌ನಲ್ಲಿ ಶಾರದಾಂಬೆಯ ಮೂರ್ತಿ ಪ್ರತಿಷ್ಠಾಪನೆ: ಸೇವ್ ಶಾರದಾ ಕಮಿಟಿಯ ಅಧ್ಯಕ್ಷ ರವೀಂದ್ರ ಪಂಡಿತ್..

ಅತಿದೊಡ್ಡ ಅಂತರ್ಜಲ ಅಕ್ಟೇರಿಯಂ ನಿರ್ಮಾಣ : 24 ಸೆಕ್ಷನ್ ಗಳನ್ನು ಹೊಂದಿರುವ ಅತಿದೊಡ್ಡ ಅಂತರ್ಜಲ ಅಕ್ಟೇರಿಯಂ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 1 ಮಧ್ಯಮ ಗಾತ್ರದ, 13 ಸಣ್ಣ ಗುಹೆಗಳು ಮತ್ತು ಎರಡು ದೊಡ್ಡ ಗುಹೆಗಳನ್ನು ಹೊಂದಿದೆ. 1 ಲಕ್ಷ ಲೀಟರ್ ಸಿಹಿನೀರು ಮತ್ತು ಉಪ್ಪು ನೀರು ಎರಡರಲ್ಲೂ ವಿಶೇಷ ಪ್ರಬೇಧದ ಮೀನುಗಳನ್ನು ಕಾಣಬಹುದಾಗಿದೆ. ಸಮುದ್ರ ಜೀವಿಗಳನ್ನು ಹೇಗೆ ಸಂರಕ್ಷಿಸಬೇಕು ಹಾಗೂ ಸಾಗರದ ಜೀವಿಗಳಿಗೂ ಮನುಷ್ಯನಿಗೂ ಇರುವ ಸಂಬಂಧವೇನು? ಎಂಬುದನ್ನೂ ಸಹ ಈ ಪ್ರದರ್ಶನದಲ್ಲಿ ತಿಳಿಸಲಾಗುತ್ತಿದೆ ಎಂದು ರಾಷ್ಟ್ರೀಯ ಗ್ರಾಹಕ ಮೇಳದ ನಿರ್ದೇಶಕ ಗೌತಮ್ ಹೇಳಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಅರಳಿದ ಹೂವಿನ ಲೋಕದಲ್ಲಿ ಕಣ್ಮನ ಸೆಳೆದ ಪವರ್ ಸ್ಟಾರ್ ಅಪ್ಪು.. ಪುಷ್ಪ ವಿಮಾನ

3 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ : ಈ ಪ್ರದರ್ಶನವು ನಗರದ ಎರಡು ಭಾಗಗಳಲ್ಲಿ ಇಂದಿನಿಂದ ಫೆಬ್ರವರಿ 2ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 9ರವರೆಗೆ ಕಲರ್‌ಫುಲ್ ಮೀನುಗಳನ್ನು ವೀಕ್ಷಿಸಬಹುದಾಗಿದೆ. 3 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ ಎಂದಿದ್ದಾರೆ.

500ಕ್ಕೂ ಹೆಚ್ಚು ಜಾತಿಯ ಮೀನುಗಳ ಪ್ರದರ್ಶನ : ಸಿಂಗಾಪುರ, ದುಬೈನಲ್ಲಿರುವ ಸುರಂಗ ಅಕ್ವೇರಿಯಂ ಮಾದರಿಯಲ್ಲಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸಿದ್ಧಪಡಿಸಲಾಗಿದೆ. ಇಲ್ಲಿ ನಾನಾ ದೇಶಗಳಿಂದ ತಂದಿರುವ 500ಕ್ಕೂ ಹೆಚ್ಚು ಜಾತಿಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರ ಜತೆಗೆ ವಿವಿಧ ಮೀನುಗಳ ಮಾಹಿತಿಯನ್ನೂ ಇಲ್ಲಿ ನೀಡಲಾಗುತ್ತಿದೆ ಎಂದು ಗೌತಮ್ ವಿವರಿಸಿದ್ದಾರೆ.

ಇದನ್ನೂ ಓದಿ : ಆಹಾರ ಅರಸಿ ಜಮೀನಿಗೆ ಬಂದು ಮರದಲ್ಲಿ ಸಿಲುಕಿಕೊಂಡ ಕರಡಿ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.