ETV Bharat / state

ಮಾಜಿ ಪ್ರಧಾನಿ ಹೆಚ್‌ಡಿಡಿಗೆ ಸಿಎಂ ಬಿಎಸ್‌ವೈ ಪತ್ರ.. ಕೃಷಿ ಬಿಕ್ಕಟ್ಟಿನ ಕುರಿತ ಕ್ರಮಗಳ ಕುರಿತಂತೆ ಮನವರಿಕೆ!! - ದೇವೇಗೌಡರಿಗೆ ಯಡಿಯೂರಪ್ಪ ಪತ್ರ

ರಾಜ್ಯರ ರೈತರು ಮತ್ತು ಕೃಷಿ ಕಾರ್ಮಿಕರ ಮೇಲಿರುವ ತಮ್ಮ ಕಾಳಜಿಗೆ ಹಾಗೂ ನೀಡಿರುವ ಸಲಹೆಗಳಿಗೆ ಧನ್ಯವಾದಗಳು. ತಮ್ಮ ಪತ್ರದಲ್ಲಿ ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈ ಮೂಲಕ ತಮಗೆ ತಿಳಿಸಲಿಚ್ಚಿಸುತ್ತೇನೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

cm yadiyurappa letter to devegowda during corona pandamic
ಹೆಚ್​.ಡಿ. ದೇವೇಗೌಡ ಪತ್ರ
author img

By

Published : Apr 12, 2020, 1:45 PM IST

ಬೆಂಗಳೂರು : ಲಾಕ್​​ಡೌನ್‌ನಿಂದಾಗಿ ರಾಜ್ಯದ ರೈತರು ಮತ್ತು ಕೃಷಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

cm yadiyurappa letter to devegowda during corona pandamic
ಸಿಎಂ ಬಿಎಸ್​​ವೈ ಪತ್ರ
ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ರಾಜ್ಯದ ಹಾಗೂ ದೇಶದ ರೈತರು, ಕೃಷಿ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ಆಗುತ್ತಿರುವ ಅನಾನುಕೂಲತೆಗಳು ಹಾಗೂ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಏಪ್ರಿಲ್ 9ರಂದು ಬರೆದಿರುವ ಪತ್ರವನ್ನು ಅವಗಾಹಿಸಿದ್ದೇನೆ. ರಾಜ್ಯರ ರೈತರು ಮತ್ತು ಕೃಷಿ ಕಾರ್ಮಿಕರ ಮೇಲಿರುವ ತಮ್ಮ ಕಾಳಜಿಗೆ ಹಾಗೂ ನೀಡಿರುವ ಸಲಹೆಗಳಿಗೆ ಧನ್ಯವಾದಗಳು. ತಮ್ಮ ಪತ್ರದಲ್ಲಿ ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈ ಮೂಲಕ ತಮಗೆ ತಿಳಿಸಲಿಚ್ಚಿಸುತ್ತೇನೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ನಾನು ತೆಗೆದುಕೊಳ್ಳುತ್ತಿರುವ ಒಂದೊಂದು ನಿರ್ಧಾರವೂ ಏಕಪಕ್ಷೀಯವಾಗಿರದೇ ವಿರೋಧ ಪಕ್ಷದ ನಾಯಕರು ಸೇರಿದಂತೆ ಸರ್ವ ಪಕ್ಷಗಳ ನಾಯಕರ, ಅನುಭವಿ ಹಿರಿಯ ಅಧಿಕಾರಿಗಳ, ವೈದ್ಯರ ಹಾಗೂ ಕೇಂದ್ರ ಸರ್ಕಾರದ, ರಾಜ್ಯದ ತಮ್ಮಂತಹ ಗಣ್ಯಮಾನ್ಯರ, ಹಿತಚಿಂತಕರ ಇತ್ಯಾದಿಗಳ ಸಲಹೆಗಳಿಂದ ಕೂಡಿರುತ್ತವೆಂಬುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬಯಸುತ್ತೇನೆ. ದೇಶ ಮತ್ತು ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಬಹಳಷ್ಟು ತೊಂದರೆಯುಂಟಾಗಿದೆ.

ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಲು, ಕೊರೊನಾ ಶಂಕಿತರಿಗೆ ಪರೀಕ್ಷೆಗಳನ್ನು ಮಾಡಿಸುವುದು ಮತ್ತು ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡುವುದು, ಸ್ವಚ್ಛತೆ ಕಾಪಾಡುವುದು ಮತ್ತು ಲಾಕ್‌ಡೌನ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರವು ಪ್ರಾಮಾಣಿಕವಾಗಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಈ ಪತ್ರದಲ್ಲಿ ವಿವರಿಸಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ (ಕೋವಿಡ್-19)ಗೆ ತಾವು ನೀಡಿರುವ ಒಂದು ಲಕ್ಷ ರೂ. ಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ನೆರವಾಗಲೆಂದು ತಾವು ಸ್ಪಂದಿಸಿರುವುದು ಹಾಗೂ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಎಲ್ಲಾ ಸದಸ್ಯರಿಗೂ ಸರ್ಕಾರಕ್ಕೆ ಎಲ್ಲಾ ರೀತಿಯಿಂದಲೂ ಬೆಂಬಲಿಸುವಂತೆ ಸೂಚನೆ ನೀಡಿರುವುದು ಮಾನವೀಯ ಔದಾರ್ಯ ಎಂದು ನಾನು ಭಾವಿಸಿದ್ದೇನೆ. ಮಾನವೀಯ ನೆಲೆಯಲ್ಲಿ ತಾವು ನೀಡಿರುವ ಸಹಕಾರ ನಿರಂತರವಾಗಿ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತಾ ತಮ್ಮ ಈ ಉದಾರವಾದ ದೇಣಿಗೆಗಾಗಿ ಸರ್ಕಾರದ ಪರವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಬರೆದ ಪತ್ರದಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.