ETV Bharat / state

ಮೋದಿಯಿಂದ ರಾಜ್ಯಕ್ಕೆ 5,495 ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಬೇಕಾಗಿದೆ ನೂತನ ಸಿಎಂ ಸಿದ್ದರಾಮಯ್ಯ ಹೇಳಿದರು.

cm siddaramaiah
ಸಿಎಂ ಸಿದ್ದರಾಮಯ್ಯ
author img

By

Published : May 21, 2023, 8:38 AM IST

ಬೆಂಗಳೂರು : ಕರ್ನಾಟಕ ರಾಜ್ಯಕ್ಕೆ 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವ 5,495 ಕೋಟಿ ರೂ.ಗಳ ನ್ಯಾಯಸಮ್ಮತ ವಿಶೇಷ ಅನುದಾನವನ್ನು ನೀಡದೇ ಇರುವುದರಿಂದ ರಾಜ್ಯವು ನಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆರೋಪಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಅದನ್ನು ಈ ಹಿಂದಿನ ಬಿಜೆಪಿ ಸರ್ಕಾರವು ಪಡೆದುಕೊಂಡಿಲ್ಲ, ಹಣ ಪಡೆಯುವ ಪ್ರಯತ್ನವನ್ನೇ ನಡೆಸಿಲ್ಲ. ರಾಜ್ಯಕ್ಕೆ ಇದಕ್ಕಿಂತ ಹೆಚ್ಚು ಹಾನಿ ಮಾಡಿದ ಸರ್ಕಾರ ಇದೆಯಾ?" ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ : ಮಾಜಿ ಸಿಎಂ ಬೊಮ್ಮಾಯಿ‌..!

"ಕೇಂದ್ರ ಹಣಕಾಸು ಸಚಿವೆ ಹಾಗೂ ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಈ ವಿಶೇಷ ಅನುದಾನವನ್ನು ಅಂತಿಮ ವರದಿಯಿಂದ ತೆಗೆದು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯವು ಭಾರಿ ನಷ್ಟ ಅನುಭವಿಸಿತು" ಅವರು ದೂರಿದರು.

ಇದನ್ನೂ ಓದಿ : ಜುಲೈ ತಿಂಗಳಲ್ಲಿ 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದೇವೆ : ಸಿಎಂ ಸಿದ್ದರಾಮಯ್ಯ

"ಕೇಂದ್ರ ತೆರಿಗೆಗೆ ಕರ್ನಾಟಕದ ಕೊಡುಗೆ ಸುಮಾರು 4 ಲಕ್ಷ ಕೋಟಿ ರೂ. ಇದೆ. ನಾವು 5,495 ಕೋಟಿ ರೂ. ಗಳ ಮಧ್ಯಂತರ ಪರಿಹಾರಕ್ಕೆ ನ್ಯಾಯಸಮ್ಮತವಾಗಿ ಅರ್ಹರಾಗಿದ್ದೇವೆ, ಇದೇನೂ ಸಣ್ಣ ಮೊತ್ತವಲ್ಲ. ನಮಗೆ ಭಾರಿ ನಷ್ಟವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ 25 ಬಿಜೆಪಿ ಸಂಸದರು ಕೇಂದ್ರ ಸರ್ಕಾರವನ್ನು ಯಾಕೆ ಕೇಳಲಿಲ್ಲ." ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ : ಎರಡನೇ ಬಾರಿಗೆ ರಾಜ್ಯದ ಗದ್ದುಗೆ ಏರಿದ ಅಹಿಂದಾ ರಾಜಕಾರಣಿ : ಪಂಚ ಭರವಸೆ ಈಡೇರಿಸುವತ್ತ ಕಾಂಗ್ರೆಸ್​ ನೂತನ ಸಿಎಂ ಚಿತ್ತ..

ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯ ಹಣಕಾಸು ಸಂಬಂಧಗಳು, ಅನುದಾನದ ಮಾನದಂಡಗಳು, ತೆರಿಗೆಗಳ ವಿಕೇಂದ್ರಿಕರಣ ಸೇರಿದಂತೆ ಇತರೆ ಸಲಹೆಗಳನ್ನು ನೀಡಲು ರಾಷ್ಟ್ರಪತಿಗಳಿಂದ ರಚಿಸಲ್ಪಟ್ಟ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. 2021 ರಿಂದ 26 ವರ್ಷಗಳ ವರದಿಯ ಶಿಫಾರಸುಗಳನ್ನು 2021 ರ ಫೆಬ್ರವರಿಯಲ್ಲಿ 15 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಎನ್.ಕೆ.ಸಿಂಗ್ ಅವರು ಸಂಸತ್ತಿನಲ್ಲಿ ಮಂಡಿಸಿದ್ದರು.

ಇದನ್ನೂ ಓದಿ : ವಿಡಿಯೋ ಸಂದೇಶದ ಮೂಲಕ ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ ಸೋನಿಯಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.