ETV Bharat / state

ಸಂತೋಷ್​ ಜನರಲ್ ವಾರ್ಡ್​ಗೆ ಶಿಫ್ಟ್: ಇಂದು ಹೇಳಿಕೆ ಪಡೆಯಲು ಪೊಲೀಸರ ನಿರ್ಧಾರ

author img

By

Published : Nov 29, 2020, 8:51 AM IST

Updated : Nov 29, 2020, 9:38 AM IST

​ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರನ್ನು ಜನರಲ್​ ವಾರ್ಡ್​​ಗೆ ಶಿಫ್ಟ್​ ಮಾಡಲಾಗಿದ್ದು, ಇಂದು ಪೊಲೀಸರು ಅವರಿಂದ ಹೇಳಿಕೆ ಪಡೆಯುವ ಸಾಧ್ಯತೆ ಇದೆ.

cm political secretary santhosh shifted to general ward
ಸಂತೋಷ್​ ಜನರಲ್ ವಾರ್ಡ್​ಗೆ ಶಿಫ್ಟ್

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸಂತೋಷ್ ಅವರನ್ನು ಎಂ.ಎಸ್​. ರಾಮಯ್ಯ ಆಸ್ಪತ್ರೆಯ ಜನರಲ್ ವಾರ್ಡ್​ಗೆ ನಿನ್ನೆ ರಾತ್ರಿ ಶಿಫ್ಟ್ ಮಾಡಲಾಗಿದೆ‌. ಹೀಗಾಗಿ ಇಂದು ಸಂಜೆ ವೇಳೆಗೆ ಸಂತೋಷ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ಸಂತೋಷ್ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆಯಾಗಿದೆ. ಅವರು ಆತ್ಮಹತ್ಯೆಗೆ ಮುಂದಾಗಿದ್ದ ಹಿನ್ನೆಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆತ್ಮಹತ್ಯೆ ಹಿಂದೆ ಒಂದೊಂದು ವಿಚಾರ ಬಯಲಾಗ್ತಿರುವ ಕಾರಣ ಇಂದು ಸಂತೋಷ್ ಅವರಿಂದ ಸದಾಶಿವನಗರ ಪೊಲೀಸರು ಹೇಳಿಕೆ ಪಡೆಯುವ ಸಾಧ್ಯತೆ ಇದೆ.

ಆತ್ಮಹತ್ಯೆಗೆ ಯತ್ನ ಹಿನ್ನೆಲೆ ಐಪಿಸಿ 309ರ ಅಡಿ ಈಗಾಗಲೇ ಎಫ್​ಐಆರ್ ದಾಖಲಾಗಿದೆ. ಹೀಗಾಗಿ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದು ಎಂಬುದರ ಕುರಿತು ಸಂತೋಷ್ ಹೇಳಿಕೆ ನೀಡಬೇಕಿದೆ.

Last Updated : Nov 29, 2020, 9:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.