ETV Bharat / state

ಕೈ ಶಾಸಕರ ಅಸಮಾಧಾನ ತಗ್ಗಿಸಲು ಸಿಎಂ ಕಸರತ್ತು: ಮಂಗಳವಾರವೂ ಆರು ಜಿಲ್ಲೆ ಶಾಸಕರು, ಸಚಿವರ ಜೊತೆ ಸಭೆ

ಕೈ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳ ಜೊತೆ ಸಿಎಂ ಸಭೆ ನಡೆಸಿದರು. ಇಂದು ಸಹ ಈ ಸಭೆ ಮುಂದುವರಿಸಲಿದ್ದಾರೆ.

ಸಂಗ್ರಹ ಚಿತ್ರ (ಫೋಟೋ ಕೃಪೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್​)
ಸಂಗ್ರಹ ಚಿತ್ರ (ಫೋಟೋ ಕೃಪೆ: ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್​)
author img

By

Published : Aug 8, 2023, 6:59 AM IST

Updated : Aug 8, 2023, 12:51 PM IST

ಶಾಸಕ ವಿಜಯಾನಂದ ಕಾಶಪ್ಪನವರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಆರು ಜಿಲ್ಲೆಯ ಶಾಸಕರು ಹಾಗೂ ಸಚಿವರ ಜೊತೆ ಸಭೆ ನಡೆಸಿ, ಅಸಮಾಧಾನಕ್ಕೆ ತಗ್ಗಿಸುವ ಕಸರತ್ತು ನಡೆಸಿದರು.‌ ಮಂಗಳವಾರವಾದ ಇಂದು ಮತ್ತೆ ಇತರ ಆರು ಜಿಲ್ಲೆಗಳ ಕೈ ಶಾಸಕರು ಮತ್ತು ಸಚಿವರ ಜೊತೆ ಸಭೆ ಮುಂದುವರಿಸಲಿದ್ದಾರೆ.

ಸೋಮವಾರ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಚಿವರು ಹಾಗೂ ಕೈ ಶಾಸಕರು, ಸಂಜೆ ಬಳಿಕ ಬಾಗಲಕೋಟೆ, ಬಳ್ಳಾರಿ ಮತ್ತು ಧಾರವಾಡ ಶಾಸಕರು ಹಾಗೂ ಉಸ್ತುವಾರಿ ಸಚಿವರ ಜೊತೆ ಸರಣಿ ಸಭೆ ನಡೆಸಿ ಸಮಸ್ಯೆ ಆಲಿಸಿದರು.

ಸಂಜೆ ನಡೆದ ಮೂರು ಜಿಲ್ಲೆಗಳ ಕೈ ಶಾಸಕರು ಹಾಗೂ ಸಚಿವರ ಜೊತೆಗಿನ ಸಭೆಯಲ್ಲೂ ಶಾಸಕರು ಅನುದಾನ ಬಿಡುಗಡೆ, ಕ್ಷೇತ್ರ ನಿರ್ದಿಷ್ಟ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದರು. ಜೊತೆಗೆ ಸಚಿವರು ಸಮರ್ಪಕವಾಗಿ ಸ್ಪಂದಿಸದೇ ಇರುವುದು, ವರ್ಗಾವಣೆ ಶಿಫಾರಸಿಗೆ ಸೊಪ್ಪು ಹಾಕದೇ ಇರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಫಲಾನುಭವಿಗಳಿಗೆ ತಲುಪುವಂತೆ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳಿಗೆ ಸಿಎಂ ಸೂಚನೆ ನೀಡಿದರು. ಬಜೆಟ್​ನಲ್ಲಿ ಹಂಚಿಕೆಯಾದ ಅನುದಾನ ನೀಡಲಾಗುವುದು. ಅದರ ಹೊರತು ಹೆಚ್ಚಿನ ಅನುದಾನ ಈ ವರ್ಷ ಕೇಳಬೇಡಿ ಎಂದು ಶಾಸಕರುಗಳಿಗೆ ತಿಳಿಸಿದರು.

ಇದರ ಜೊತೆಗೆ ಉಸ್ತುವಾರಿ ಸಚಿವರುಗಳು ಶಾಸಕರ ಜೊತೆ ಸಮನ್ವಯತೆ ಸಾಧಿಸಬೇಕು. ಶಾಸಕರ ಸಮಸ್ಯೆ ಆಲಿಸಿ ಕ್ಷೇತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಎಂ ಇದೇ ವೇಳೆ ಸೂಚನೆ ನೀಡಿದರು. ಲೋಕಸಭೆ ಚುನಾವಣೆ ಹಿನ್ನೆಲೆ ತಯಾರಿ ನಡೆಸಬೇಕು. ಪಂಚ ಗ್ಯಾರಂಟಿಗಳನ್ನು ಜನರ ಮನೆಗಳಿಗೆ ತಲುಪಿಸಬೇಕು ಎಂದು ಕೈ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳಿಗೆ ಸಿಎಂ ಸೂಚನೆ ನೀಡಿದರು.

ಸಭೆ ಬಳಿಕ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ''ಬಾಗಲಕೋಟೆ ಅಭಿವೃದ್ಧಿ ಕುರಿತು ಸಿಎಂ, ತಿಮ್ಮಾಪುರ್ ನೇತೃತ್ವದಲ್ಲಿ ಸಭೆ ನಡೆದಿದೆ. ನಮ್ಮ‌ ಜಿಲ್ಲೆ ಅಭಿವೃದ್ಧಿಯಲ್ಲಿ ಕುಂಠಿತ ಆಗಿದೆ. ಮಳೆಯಾಗದ ಕಾರಣ ರೈತರಿಗೆ ನೆರವು ನೀಡಬೇಕು ಅಂತ ಹೇಳಿದ್ದೇವೆ. ಆಲಮಟ್ಟಿ, ಕೃಷ್ಣ, ಮಲಪ್ರಭ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕೆಂದು ಮನವಿ ಮಾಡಿದ್ದೇವೆ. ನಮ್ಮ ಜಿಲ್ಲೆಯ ಶಾಸಕರು ಸಚಿವರಲ್ಲಿ ಯಾವ ಗೊಂದಲ ಇಲ್ಲ. ಸಿಎಲ್‌ಪಿ ತೀರ್ಮಾನಕ್ಕೂ ಈ ಸಭೆಗೂ ಸಂಬಂಧವಿಲ್ಲ. ಇದು ಕೇವಲ ಅಭಿವೃದ್ಧಿ ಕುರಿತಂತೆ ನಡೆದ ಸಭೆ'' ಎಂದರು.

ಇಂದೂ ಆರು ಜಿಲ್ಲೆಗಳ ಕೈ ಶಾಸಕರು, ಸಚಿವರು ಸಭೆ: ಸಿಎಂ ಸಿದ್ದರಾಮಯ್ಯ ಮಂಗಳವಾರವೂ ಇತರ ಆರು ಜಿಲ್ಲೆಗಳ ಕೈ ಶಾಸಕರು ಹಾಗೂ ಉಸ್ತುವಾರಿ ಸಚಿವರ ಜೊತೆ ಸಭೆ ಮುಂದುವರಿಸಲಿದ್ದಾರೆ. ಇಂದು ಬೆಳಗ್ಗೆ ರಾಯಚೂರು, ವಿಜಯಪುರ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈ ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಸಂಜೆ ಬೆಳಗಾವಿ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳ ಕೈ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳ ಜೊತೆ ಸಭೆ ನಡೆಸಿ ಅಸಮಾಧಾನಕ್ಕೆ ಮದ್ದು ಅರೆಯುವ ಕಸರತ್ತು ನಡೆಸಲಿದ್ದಾರೆ.

ಇದನ್ನೂ ಓದಿ: ಸಚಿವರ ವಿರುದ್ಧದ ನಕಲಿ ಪತ್ರದ ಸೃಷ್ಟಿಕರ್ತರು ಬಿಜೆಪಿಯವರೋ ಅಥವಾ ನಿಮ್ಮ 'ಬ್ರದರ್ರೋ': ಸಿಎಂ

Last Updated : Aug 8, 2023, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.