ಬೆಂಗಳೂರು: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವ ನಾಲ್ಕು ಅಂತಸ್ತಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 'ಚರಕ' ಹೆಸರಿನಲ್ಲಿ ಇಂದು ಉದ್ಘಾಟನೆಗೊಳ್ಳಲ್ಲಿದೆ.
ಬಿಬಿಎಂಪಿ, ಬೌರಿಂಗ್, ಲೇಡಿ ಕರ್ಜನ್ ಮಹಾವಿದ್ಯಾಲಯ ಮತ್ತು ವೈದ್ಯಕೀಯ ಸಂಸ್ಥೆ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಗಳ ಸಹಯೋಗದಲ್ಲಿ ಜಯಮಹಲ್ ವಾರ್ಡ್ನ ಬ್ರಾಡ್‍ವೇ ರಸ್ತೆಯಲ್ಲಿ ಚರಕ ಆಸ್ಪತ್ರೆ ನಿರ್ಮಾಣವಾಗಿದ್ದು, ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಆಸ್ಪತ್ರೆ ನಿರ್ಮಾಣಕ್ಕೆ 24.38 ಕೋಟಿ ರೂಪಾಯಿ ಖರ್ಚಾಗಿದ್ದು, ಇನ್ಫೋಸಿಸ್ ಸಂಸ್ಥೆ ಹಾಸಿಗೆ ವ್ಯವಸ್ಥೆ ಹಾಗೂ ಯಂತ್ರೋಪಕರಣಗಳಿಗೆ 11 ಕೋಟಿ ರೂ. ದೇಣಿಗೆ ನೀಡಿದೆ. ಆಸ್ಪತ್ರೆಯಲ್ಲಿ 130 ಹಾಸಿಗೆಗಳ ಸೌಲಭ್ಯ ಇದ್ದು, 60 ಪುರುಷರು, 50 ಮಹಿಳೆಯರು ಹಾಗೂ 20 ಮಕ್ಕಳಿಗೆ ಹಾಸಿಗೆ ಸೌಲಭ್ಯ ಮೀಸಲಿಡಲಾಗಿದೆ. ಹೊರ ರೋಗಿಗಳ ಸಾಮಾನ್ಯ ಹಾಗೂ ತುರ್ತು ಚಿಕಿತ್ಸೆ, ಡಯಾಲಿಸಿಸ್ ಸೌಲಭ್ಯ, ಶಸ್ತ್ರ ಚಿಕಿತ್ಸಾ ಕೊಠಡಿ, ಸಿಸಿಐ, ಐಸಿಯು ವ್ಯವಸ್ಥೆ ಕೂಡ ಇರಲಿದೆ.