ETV Bharat / state

ಕೋವಿಡ್ ವಾರ್ ರೂಂ ಪರಿಶೀಲನೆ ನಡೆಸಿದ ಸಿಎಂ ಬಿಎಸ್​ವೈ!

ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದರು. ಆರೋಗ್ಯ ಸೌಧದಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆ ಮಾಡಿದ್ದು, ವಾರ್ ರೂಂ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಸಿಎಂ ಬಿಎಸ್​ವೈ ಪರಿಶೀಲನೆ ನಡೆಸಿದರು.

CM BSY visited covid war room in magadi road of bangalore
ಕೋವಿಡ್ ವಾರ್ ರೂಂ ಪರಿಶೀಲನೆ ನಡೆಸಿದ ಸಿಎಂ ಬಿಎಸ್​ವೈ!
author img

By

Published : May 11, 2021, 1:00 PM IST

ಬೆಂಗಳೂರು: ಸರಣಿ ಸಭೆಗಳ ಮೂಲಕ ಕೋವಿಡ್ ನಿಯಂತ್ರಣ ಕುರಿತು ಕಾರ್ಯಗಳ ಅವಲೋಕನ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಫೀಲ್ಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ನೀಡುವ ನೆರವಿನ ಕುರಿತು ಖುದ್ದು ಅವಲೋಕನ ಮಾಡಿದರು.

ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದರು. ಆರೋಗ್ಯ ಸೌಧದಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆ ಮಾಡಿದ್ದು, ವಾರ್ ರೂಂ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಸಿಎಂ ಬಿಎಸ್​ವೈ ಪರಿಶೀಲನೆ ನಡೆಸಿದರು.

ಕೋವಿಡ್ ವಾರ್ ರೂಂ ಪರಿಶೀಲನೆ ನಡೆಸಿದ ಸಿಎಂ

ಬಿಯು ಸಂಖ್ಯೆ ಹಂಚಿಕೆ, ಬೆಡ್ ಹಂಚಿಕೆ, ಸಹಾಯವಾಣಿಯಿಂದ ಬರುವ ಕೋರಿಕೆಗಳು, ಅಧಿಕಾರಿಗಳಿಂದ ಸ್ಪಂದನೆ ಸೇರಿದಂತೆ ಕೋವಿಡ್ ವಾರ್ ರೂಂನ ಸಿಬ್ಬಂದಿ ಕಾರ್ಯವನ್ನು ಸಿಎಂ ಖುದ್ದು ವೀಕ್ಷಿಸಿದರು.

ಇದನ್ನೂ ಓದಿ: ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಘೋಷಿಸುವ ಚಿಂತನೆ ಇಲ್ಲ: ಸಿಎಂ

ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ಕೋವಿಡ್ ವಾರ್ ರೂಂನಲ್ಲಿನ ವ್ಯವಸ್ಥೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಕೋವಿಡ್ ವಾರ್ ರೂಂನಲ್ಲೇ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆ ಸಮಗ್ರ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.