ಬೆಂಗಳೂರು: ಕನ್ನಡಿಗರ ಸ್ವಾಭಿಮಾನ, ಗೌರವ ಮತ್ತು ಉದ್ಯೋಗಾವಕಾಶಗಳಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಲು ನಾವು ಬರುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಗೆ ಆಶ್ವಾಸನೆ ನೀಡಿದ್ದಾರೆ. ಜೊತೆಗೆ ಇತರರಿಗೂ ಅವಕಾಶಗಳನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಡಗರ ಸಂಭ್ರಮದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರು.ಧ್ವಜರೋಹಣ ವೇಳೆ ಹೆಲಿಕಾಪ್ಟರ್ ನಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು.ನಂತರ ತೆರೆದ ವಾಹನದಲ್ಲಿ ಪೊಲೀಸ್ ಹಾಗೂ ಸೇನಾ ಪಡೆಗಳಿಂದ ಸಿಎಂ ಗೌರವ ವಂದನೆ ಸ್ವೀಕರಿಸಿದರು.
ನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ, ಹೊರ ರಾಜ್ಯ ಹೊರ ದೇಶಗಳಿಂದ ಬಂದು ರಾಜ್ಯದಲ್ಲಿ ನೆಲೆಸಿರುವ ಜನ ಇಲ್ಲಿನ ಭಾಷೆ ಸಂಸ್ಕೃತಿ ಮತ್ತು ಜೀವನ ವಿಧಾನಗಳಿಗೆ ಹೊಂದಿಕೊಂಡು ಕನ್ನಡತನವನ್ನು ಗೌರವಿಸುವ ದಲ್ಲದೆ ತಮ್ಮತನವನ್ನು ವಹಿಸಿಕೊಳ್ಳಿ ಎಂದು ಕರೆ ನೀಡಿದರು. ಈ ವಿಚಾರದಲ್ಲಿ ಕನ್ನಡಿಗರು ಇತರರಿಗೆ ಮಾದರಿಯಾಗಿದ್ದಾರೆ ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜತೆ ಹೊಂದಿಕೊಂಡು ಬಾಳುತ್ತಿದ್ದಾರೆ ಇದು ಎಲ್ಲರಿಗೂ ಅನುಕರಣೀಯ ಮಾದರಿಯಾಗಿದೆ.
ಕರ್ನಾಟಕ ರಾಜ್ಯ ಅತಿವೃಷ್ಟಿ-ಅನಾವೃಷ್ಟಿ ಗಳ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಎರಡು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಲವತ್ತೈದು ವರ್ಷಗಳಲ್ಲಿ ಕಂಡರಿಯದ ಪ್ರಕೃತಿ ವಿಕೋಪ ಎದುರಾಗಿದ್ದು, 22 ಜಿಲ್ಲೆಗಳ ವ್ಯಾಪ್ತಿಯಲ್ಲಿ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಿಂದ 61 ಮಂದಿ ಈವರೆಗೂ ಸಾವನ್ನಪ್ಪಿದ್ದಾರೆ ಮೃತಪಟ್ಟವರ ಕುಟುಂಬಗಳಿಗೆ 48 ಗಂಟೆಗಳ ಒಳಗಾಗಿ 5ಲಕ್ಷ ರೂ.ಗಳಂತೆ ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರಿಗೆ ತಕ್ಷಣಕ್ಕೆ 10 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆ ದುರಸ್ತಿಗೆ 1 ಲಕ್ಷ ನೆರವು ಘೋಷಣೆ ಮಾಡಿದ್ದೇನೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇನೆ ವೈಮಾನಿಕ ಸಮೀಕ್ಷೆ ಹಾಗೂ ಸ್ಥಳ ಪರೀಕ್ಷೆಗಳನ್ನು ಮಾಡಿ ಸಂತ್ರಸ್ತರಿಗೆ ವಿಳಂಬ ಮಾಡದೆ ಪರಿಹಾರ ಒದಗಿಸಲು ಪ್ರಯತ್ನಿಸಿದ್ದೇನೆ ಎಂದು ನೆರೆಹಾನಿ ಪರಿಹಾರದ ಕುರಿತು ವಿವರಿಸಿದರು.
ನಾನು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಮೂರು ವಾರವಾಗಿದೆ, ರಾಜ್ಯ ಬರ ಮತ್ತು ಭಾರೀ ಪ್ರವಾಹದಿಂದ ತತ್ತರಿಸಿದೆ,ನಾನು ನೀವೆಲ್ಲರೂ ಜೊತೆಗೂಡಿ ಸಂತ್ರಸ್ತರ ನೆರವಿಗೆ ನಿಲ್ಲೋಣ ಎಂದು ಕರೆ ನೀಡಿದರು.
ನೆರೆಹಾನಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ಸೇನೆ,ವಿಪತ್ತು ನಿರ್ವಹಣಾ ಪಡೆ,ಸೇನಾ ಹೆಲಿಕಾಪ್ಟರ್, ರಕ್ಷಣಾ ದೋಣಿಗಳ ಸೌಲಭ್ಯ ಒದಗಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ, ನಿರ್ಮಲಾ ಸೀತಾಉರಾಮನ್, ಸದಾನಂದಗೌಡ, ಪ್ರಹ್ಲಾದ್ ಜೋಷಿ ಭೇಟಿ ನೀಡಿ ಹೆಚ್ಚಿನ ಪರಿಹಾರದ ಭರವಸೆ ನೀಡಿದ್ದಾರೆ.ನೆರೆಹಾನಿ ವರದಿ ಪಡೆದು ಹೆಚ್ಚಿನ ನೆರವಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಅನ್ನದಾತ ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಅತಿವೃಷ್ಟಿ-ಅನಾವೃಷ್ಟಿ ಮಾರುಕಟ್ಟೆ ಸಮಸ್ಯೆ ಮತ್ತಿತರ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಕಂಗಾಲಾಗಿರುವ ರೈತರಲ್ಲಿ ನವ ಚೈತನ್ಯ ತುಂಬುವ ಆಶ್ರಯ ನನ್ನ ಸರ್ಕಾರದ ಎಂದು ರೈತ ಸಮುದಾಯಕ್ಕೆ ಅಭಯ ನೀಡಿದರು.
ಸಂಕಷ್ಟದಲ್ಲಿರುವ ನೇಕಾರರ ಮತ್ತು ಮೀನುಗಾರರ ಸಾಲ ಮನ್ನಾ ಮಾಡುವ ಮೂಲಕ ಅವರ ಬದುಕಿನಲ್ಲಿ ಸಂಕಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.
ಬಹುಜನ ಹಿತಾಯ ಬಹುಜನ ಸುಖಾಯ ಎಂಬಂತೆ ಜನರ ಹಿತಕ್ಕಾಗಿ ಸಮೃದ್ಧಿ ಶಾಂತಿಗಾಗಿ ನಿಮ್ಮ ಸರ್ಕಾರ ಶ್ರಮಿಸಲಿದೆ ಸರ್ಕಾರದ ಅಧ್ಯತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಿದೆ,ಪ್ರಧಾನಿ ಮೋದಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಕನಸನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ರೈತರಿಗೆ ಅಗತ್ಯ ಬೆಂವಲ,ಮಾರ್ಗದರ್ಶನ ನೀಡಲಿದೆ,ಗ್ರಾಮೀಣ ಭಾಗದಲಿ ಶುದ್ಧ ಕುಡಿಯುವ ನೀರ,ತ್ಯಾಜ್ಯ ವಿಲೇವಾರಿಗೆ, ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುವುದಾಗಿ ಸಿಎಂ ಪ್ರಕಟಿಸಿದರು.
2019 ರ ಸೆಪ್ಟೆಂಬರ್ಗೆ ಕೈಗಾರಿಕಾ ನೀತಿ ಮುಕ್ತಾಯಗೊಳ್ಳಲಿದ್ದು ಎರಡು ಮತ್ತು ಮೂರನೇ ಹಂತದ ಕೇಂದ್ಗಳಿಗೆ ಬಂಡವಾಳ ಆಕರ್ಷಣೆ ಮಾಡುವ ವಿನೂತನ ತಂತ್ರಜ್ಞಾನ ,ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿರುವಂತೆ ನೂತನ ಕೈಗೊಳ್ಳುವ ನೀತಿ ರೂಪಿಸುವ ಭರವಸೆ ನೀಡಿದರು.
ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮಾಡುವುದು ನನ್ನ ಉದ್ದೇಶ ಕ್ಯಾಲಿಫೋರ್ನಿಯ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸಿಲಿಕಾನ್ ವ್ಯಾಲಿಗಳಂತೆ ಬೆಂಗಳೂರು ಅಭಿವೃದ್ಧಿಯಾಗಬೇಕು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಐಟಿ-ಬಿಟಿ ವಲಯ ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ್ದು, ಈ ವಲಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಂಗಳೂರಿನ ಹೊರಗೂ ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಆಧ್ಯತೆ ನೀಡಲಿದೆ ಎಂದರು.
ದುರ್ಬಲ ವರ್ಗದವರಿಗೂ ಸ್ವಾಭಿಮಾನದ ಬದುಕುಕಟ್ಟಿಕೊಡುವ ಮಹದಾಶಯವನ್ನು ನಮ್ಮ ಸರ್ಕಾರ ಹೊಂದಿದೆ, ಪರಿಶಿಷ್ಟ ಜಾತಿ,ಪಂಗಡ, ಅಲ್ಪಸಂಖ್ಯಾತ, ಮಹಿಳೆ,ಮಕ್ಕಳು,ವಿಕಲಚೇತನರು,ಹಿರಿಯ ನಾಗರಿಕರು,ಎಲ್ಲರಿಗೂ ಸುರಕ್ಷತೆಯ ಭಾವ ಮೂಡಿಸುವುದರೊಂದಿಗೆ ಗೌರವಯುತ ಬದುಕು ನಡೆಸಲು ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಿದೆ ಎಂದರು.
ಕಾಶ್ಮೀರ ವಿಚಾರದಲ್ಲಿ ಮೋದಿ ಕೈಗೊಂಡ ಚರಿತ್ರಾರ್ಹ ನಿರ್ಧಾರದಿಂದ ಭಾರತೀಯ ಇತಿಹಾಸದಲ್ಲಿ ಮೋದಿ ಹೆಸರು ಸುವರ್ಣಾಕ್ಷರದಲ್ಲಿ ದಾಖಲಾಗುವಂತೆ ಮಾಡಿದೆ. ಶ್ಯಾಮ್ ಪ್ರಶದ್ ಮುಖರ್ಜಿ,ವಾಜಪೇಯಿ ಅವರಂತಹ ಧೀಮಂತ ನಾಯಕರ ಕನಸು ಮತ್ತು ಅಸಂಖ್ಯಾತ ರಾಷ್ಟ್ರಾಭಿಮಾನಿಗಳ ಆಸೆ ನೆರವೇರಿದೆ.ಅಖಂಡ ಭಾರತದ ಪರಿಕಲ್ಪನೆ ಪರಿಪುರ್ಣಗೊಂಡಂತಾಗಿದೆ ಎಂದರು.