ಬೆಂಗಳೂರು: 10ರಿಂದ ಮೇ. 24ರವರೆಗೆ ಲಾಕ್ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದು, ಹೋಟೆಲ್, ಬಾರ್, ಪಬ್ ಸಂಪೂರ್ಣವಾಗಿ ಬಂದ್ ಆಗಿರಲಿವೆ. ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಬ್ಯಾನ್ ಮಾಡಲಾಗಿದೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ಗಂಟೆಯಿಂದ 10ಗಂಟೆವೆಗೆ ಅವಕಾಶ ನೀಡಲಾಗಿದೆ.
- ಅಳೆದು ತೂಗಿ ನಿರ್ಧಾರ ತೆಗೆದುಕೊಂಡ ಸಿಎಂ
- ಮೇ 10ರಿಂದ 24ರ ವರೆಗೆ ಲಾಕ್ಡೌನ್
- ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಅವಕಾಶ
- ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ
- ರಸ್ತೆ ಮತ್ತು ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ
- ವಿವಾಹ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
- ಹಾಲಿನ ಅಂಗಡಿ ಬೆಳಗ್ಗೆಯಿಂದ ಸಂಜೆ 6ರವರೆಗೆ ಓಪನ್
- ಸರ್ಕಾರಿ ಕಚೇರಿಗಳು ಭಾಗಶಃ ಕೆಲಸ ಮಾಡಲು ಅನುಮತಿ