ಬೆಂಗಳೂರು : ಯಾರೂ ಯಾವುದೇ ಖಾತೆಗೆ ಪಟ್ಟು ಹಿಡಿದಿಲ್ಲ, ಇನ್ನೊಂದು ಗಂಟೆಯಲ್ಲಿ ಖಾತೆ ಹಂಚಿಕೆ ಪ್ರಕಟವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇವತ್ತು ಖಾತೆ ಹಂಚಿಕೆ ಪ್ರಕಟ ಮಾಡುತ್ತೇನೆ. ಯಾರೂ ಯಾವುದೇ ಖಾತೆಗೆ ಪಟ್ಟು ಹಿಡಿದಿಲ್ಲ. ಯಾರೂ ಒತ್ತಡ ಹಾಕಿಲ್ಲ ಮತ್ತು ನನ್ನ ಮೇಲೆ ಪ್ರಭಾವ ಬೀರಿಲ್ಲ. ಇನ್ನೊಂದು ಗಂಟೆಯಲ್ಲಿ ರಾಜಭವನದಿಂದಲೇ ಖಾತೆ ಹಂಚಿಕೆ ಪ್ರಕಟವಾಗಲಿದೆ ಎಂದು ಹೇಳಿದರು.
ನಿನ್ನೆ ಸಿದ್ದಗಂಗಾ ಮಠಕ್ಕೆ ಹೋಗಿ ಬರುವಷ್ಟರಲ್ಲಿ ತಡವಾಯ್ತು. ಹಾಗಾಗಿ, ಖಾತೆ ಹಂಚಿಕೆ ಮಾಡಿಲ್ಲ. ಇಂದು ಖಾತೆ ಹಂಚಿಕೆ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ತರಳುಬಾಳು ಮಠಕ್ಕೆ ಭೇಟಿ : ಬಳಿಕ ಸಿಎಂ ಆರ್.ಟಿ ನಗರದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಬೆಂಗಳೂರು ಶಾಖೆಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.