ಬೆಂಗಳೂರು: ನಿನ್ನೆ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿದ್ದು, ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ಮುಂದಿನ ಕಾರ್ಯವೂ ಸುಗಮವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಬಿಬಿಎಂಪಿ ಕೆಲಸ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಂತಿಮ ಸಂಸ್ಕಾರ ವೀಕ್ಷಣೆಗೆ ಕುಟುಂಬಸ್ಥರು ಮತ್ತು ಗಣ್ಯರಿಗೆ ಮಾತ್ರ ಅವಕಾಶ ಕೊಡಲಾಗುವುದು. ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಹೇಳಿದರು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಅವರ ಮಗಳು ದೆಹಲಿಗೆ ತಲುಪಿದ ನಂತರ ಕ್ಲಿಯರೆನ್ಸ್ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಇಂದೇ 'ಅಪ್ಪು' ಅಂತ್ಯಸಂಸ್ಕಾರ: ಸಚಿವ ಅಶ್ವತ್ಥ್ ನಾರಾಯಣ್
ಪುನೀತ್ ಪುತ್ರಿ ಮಧ್ಯಾಹ್ನ 12 ರಿಂದ 1:30 ರೊಳಗೆ ದೆಹಲಿಗೆ ಬರಲಿದ್ದಾರೆ. ಮಗಳು ಬರುವ ಸಮಯ ನೋಡಿಕೊಂಡು ಮುಂದಿನ ತೀರ್ಮಾನ ನೀಡಲಾಗುವುದು. ದಯವಿಟ್ಟು ಅವರನ್ನು ಅತ್ಯಂತ ಗೌರವ, ಶಾಂತಿಯಿಂದ ಕಳಿಸಿಕೊಡಬೇಕು. ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.