ETV Bharat / state

ಎಂಟಿಬಿ, ಆನಂದ್ ಸಿಂಗ್ ರೆಬೆಲ್: ವಲಸಿಗರನ್ನೇ ದಾಳ ಮಾಡಿಕೊಂಡು ಅಸಮಾಧಾನ ಶಮನ ಮಾಡ್ತಾರಾ ಸಿಎಂ? - rebel mlas mtb and anand singh,

ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಖಾತೆ ಹಂಚಿಕೆ ಬಳಿಕ ಸಂಪುಟ ರಚನೆ ಮಾಡಿದ್ದಾರೆ. ಆದರೆ ಸಿಎಂ ಕೊಟ್ಟಿರುವ ಖಾತೆ ಬಗ್ಗೆ ರೆಬೆಲ್​ ನಾಯಕರಾದ ಎಂಟಿಬಿ ನಾಗರಾಜ್​ ಮತ್ತು ಆನಂದ್​ ಸಿಂಗ್​ ಅಸಮಾಧಾನ ಹೊರ ಹಾಕಿದ್ದು, ಬೇರೆ ಖಾತೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಇದು ಸಿಎಂ ಬೊಮ್ಮಾಯಿಗೆ ತಲೆನೋವಾಗಿ ಪರಿಣಮಿಸಿದ್ದು, ಯಾವ ರೀತಿ ಶಮನ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

CM Basavaraj Bommai will tried to solve MTB and Anand singh problem
ವಸಲಿಗರನ್ನೆ ದಾಳ ಮಾಡಿಕೊಂಡು ಅಸಮಾಧಾನ ಶಮನ ಮಾಡ್ತಾರಾ ಸಿಎಂ..?
author img

By

Published : Aug 9, 2021, 5:08 PM IST

ಬೆಂಗಳೂರು: ಸಚಿವ ಸಂಪುಟ ರಚನೆ ಬೆನ್ನಲ್ಲೇ ಖಾತೆಗಳ ಕ್ಯಾತೆ ಆರಂಭಗೊಂಡಿದ್ದು, ರೆಬೆಲ್​ ಶಾಸಕರಾದ ಎಂಟಿಬಿ ನಾಗರಾಜ್, ಆನಂದ್ ಸಿಂಗ್ ಅವರ ಅಸಮಾಧಾನ ಸಿಎಂ ಬಸವರಾಜ ಬೊಮ್ಮಾಯಿಗೆ ಬಿಸಿ ತುಪ್ಪವಾಗಿದೆ. ವಲಸಿಗ ಸಚಿವರ ರೆಬಲ್​ ನಡೆಗೆ ಬೆಸ್ತು ಬಿದ್ದಿರುವ ಸಿಎಂ, ಯಡಿಯೂರಪ್ಪನವರ ಮೊರೆ ಹೋಗಿದ್ದಾರೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಸಂಪುಟ ರಚನೆ ವಿಚಾರದಲ್ಲಿ ಆಗದ ಅಸಮಾಧಾನ ಖಾತೆಗಳ ಹಂಚಿಕೆ ವಿಚಾರದಲ್ಲಿ ಕಾಣಿಸಿಕೊಂಡಿದೆ. ಎಂಟಿಬಿ ನಾಗರಾಜ್, ಆನಂದ್ ಸಿಂಗ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಶ್ರೀರಾಮುಲು ಮಾತ್ರ ಮೌನವಾಗಿಯೇ ಪ್ರತಿಬಿಂಬಿಸುತ್ತಿದ್ದಾರೆ.

ಟಾಪ್​ 5 ಖಾತೆ ನೀಡುವಂತೆ ಆಗ್ರಹ:

ಖಾತೆ ಹಂಚಿಕೆ ಬೆನ್ನಲ್ಲೇ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಎಂಟಿಬಿ, ಪೌರಾಡಳಿತ ಖಾತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಎ ಗ್ರೇಡ್ ಸಚಿವನಾಗಿದ್ದ ನನ್ನನ್ನು ಬಿ ಗ್ರೇಡ್​ಗೆ ತಳ್ಳಿದ್ದೀರಾ, ನನಗೆ ಟಾಪ್ 5 ಖಾತೆಗಳಲ್ಲಿ ಯಾವುದಾದರೂ ಒಂದು ನೀಡಬೇಕು ಎನ್ನುವ ಬೇಡಿಕೆ ಇಟ್ಟು ಎರಡು ದಿನದ ಗಡುವು ಸಹ ಕೊಟ್ಟಿದ್ದಾರೆ.

ಗಡುವು ನೀಡಿದ ಆನಂದ್​:

ಇದರ ಬೆನ್ನಲ್ಲೇ ಸಚಿವ ಆನಂದ್ ಸಿಂಗ್ ಕೂಡ ಆರ್​​​ಟಿ ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಖಾತೆ ಬದಲಾವಣೆ ಬೇಡಿಕೆ ಇರಿಸಿದ್ದಾರೆ. ಟಾಪ್ 5 ಖಾತೆಗಳಲ್ಲಿ ಒಂದನ್ನು ನೀಡಬೇಕು ಎನ್ನುವ ಬೇಡಿಕೆ ಇರಿಸಿದ್ದಾರೆ. ಅರಣ್ಯ ಖಾತೆ ಇದ್ದ ತಮಗೆ ಈಗ ಪ್ರವಾಸೋದ್ಯಮ ಖಾತೆ ನೀಡಲಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ತನಗೂ ಪ್ರಮುಖ ಖಾತೆಯೇ ಬೇಕು ಎಂದು ಗಡುವು ನೀಡಿ ಹೋಗಿದ್ದಾರೆ.

ಶ್ರೀರಾಮುಲು ಬೇಸರ:

ಇನ್ನೊಂದೆಡೆ ಶ್ರೀರಾಮುಲು ಪ್ರಮೋಷನ್ ನಿರೀಕ್ಷೆ ಹುಸಿಯಾಗಿ ಬೇಸರದಲ್ಲಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಖಾತೆ ವಿಚಾರದಲ್ಲಿಯೂ ಅದೇ ರೀತಿ ಆಗಿದೆ. ಬಿಎಸ್​ವೈ ಸಂಪುಟದಲ್ಲಿ ಆರೋಗ್ಯ ಖಾತೆ ವಾಪಸ್ ಪಡೆದು ಸಮಾಜ ಕಲ್ಯಾಣ ನೀಡಲಾಗಿತ್ತು. ಆದರೆ ಈಗ ಸಮಾಜ ಕಲ್ಯಾಣವೂ ಕೈತಪ್ಪಿದ್ದು. ಕೇವಲ ಎಸ್ಟಿ ಕಲ್ಯಾಣ ಹಾಗೂ ಸಾರಿಗೆ ಖಾತೆ ನೀಡಲಾಗಿದೆ. ‌ಸಾರಿಗೆ ಮೇಲೆ ಒಲವಿಲ್ಲ, ಎಸ್ಟಿ ಕಲ್ಯಾಣ ಖಾತೆಗೆ ತೃಪ್ತಿ ಇಲ್ಲದೆ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ.

ಓದಿ: ನಾನು ಕೇಳಿದ ಖಾತೆ ಯಾಕೆ ನೀಡಲಿಲ್ಲ ಅನ್ನೋದಕ್ಕೆ ಸೂಕ್ತ ಉತ್ತರಬೇಕು: ಸಚಿವ ಆನಂದ ಸಿಂಗ್

ಕಾವೇರಿಯ ಕದ ತಟ್ಟಿದ ಸಿಎಂ:

ಖಾತೆ ಹಂಚಿಕೆ ನಂತರ ಪ್ರಮುಖವಾಗಿ ಮೂರು ಜನರ ಅಸಮಾಧಾನ ಸಿಎಂ ಬೊಮ್ಮಾಯಿಗೆ ಸಂಕಷ್ಟ ತಂದಿದೆ. ರೆಬೆಲ್ ಹೇಳಿಕೆಗಳಿಗೆ ಬೆಚ್ಚಿದ ಸಿಎಂ ಸಮಸ್ಯೆ ಜಟಿಲವಾಗುವ ಮೊದಲೇ ಕಾವೇರಿಯ ಕದ ತಟ್ಟಿದ್ದಾರೆ. ಮಾಜಿ ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಸಮಾಧಾನಿತರಿಗೆ ತಿಳಿ ಹೇಳಿ ಸಹಕರಿಸಿಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಆಡಳಿತ ನಡೆಸುವಾಗ ಇಂತಹ ಸಮಸ್ಯೆಗಳು ಸಹಜ. ಅದನ್ನೆಲ್ಲ ನಿಭಾಯಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿ ಕಳಿಸಿದ್ದಾರೆ.

ಹೊಸ ದಾಳ ಉರುಳಿಸಿದ ಬೊಮ್ಮಾಯಿ:

ಯಡಿಯೂರಪ್ಪ ಸಲಹೆಯಂತೆ ವಲಸಿಗ ಸಚಿವರ ಮೂಲಕವೇ ಅಸಮಾಧಾನಿತ ಸಚಿವರನ್ನು ದಾರಿಗೆ ತರಲು ಪ್ಲಾನ್ ಮಾಡಿದ್ದಾರೆ. ಮುನಿರತ್ನ, ಬಿ ಸಿ ಪಾಟೀಲ್ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗಾಗಿಯೇ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ. ಸಿಕ್ಕ ಖಾತೆ ನಿಭಾಯಿಸಬೇಕು ಎನ್ನುವ ಮಾತುಗಳನ್ನು ವಲಸಿಗ ಸಚಿವರ ಮೂಲಕವೇ ಹೇಳಿಸಿ ಹೊಸ ದಾಳ ಉರುಳಿಸಿದ್ದಾರೆ. ಆದರೆ ಇದಕ್ಕೆಲ್ಲ ಸೊಪ್ಪು ಹಾಕದ ಎಂಟಿಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಖಾತೆ ಬದಲಾವಣೆ ಬೇಡಿಕೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.

ಓದಿ: ಖಾತೆ ಹಂಚಿಕೆ ಬಗ್ಗೆ ನನಗೆ ಅಸಮಾಧಾನವಿದೆ ; ಮುಂದಿನ 2-3 ದಿನಗಳಲ್ಲಿ ನಿರ್ಧಾರ ತಿಳಿಸುವೆ - ಸಚಿವ ಎಂಟಿಬಿ ಟ್ವೀಟ್‌

ಪ್ರಮುಖ ಖಾತೆಗಳನ್ನು ಆರ್​​ಎಸ್ಎಸ್ ಮತ್ತು ಬಿಎಸ್​​ವೈ ಶಿಫಾರಸು ಮಾಡಿದಂತೆಯೇ ಹಂಚಿಕೆ ಮಾಡಲಾಗಿದೆ. ಹೀಗಾಗಿ ಈಗ ಪ್ರಮುಖ ಖಾತೆಗಳನ್ನು ವಾಪಸ್ ಪಡೆಯುವುದು ಕಷ್ಟ ಸಾಧ್ಯ. ಈಗ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡಬೇಕು ಅಂದರೂ ಹೈಕಮಾಂಡ್ ಅನುಮತಿ ಬೇಕು. ಯಡಿಯೂರಪ್ಪ ಒಪ್ಪಿಗೆಯೂ ಬೇಕಿದೆ. ಹಾಗಾಗಿ ಸಿಎಂ ಬೊಮ್ಮಾಯಿ ಅಸಮಾಧಾನಿತ ಸಚಿವರ ಖಾತೆ ಬದಲಾವಣೆ ವಿಚಾರದಲ್ಲಿ ಯಾವ ನಡೆ ಅನುಸರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.