ETV Bharat / state

ಜೂನ್ 10 ರೊಳಗೆ ಮೋಡ ಬಿತ್ತನೆ ಕಾರ್ಯ : ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ - undefined

ಬರ ಪರಿಸ್ಥಿತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಕುಮಾರಸ್ವಾಮಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜೂನ್ 10 ರೊಳಗೆ ಮೋಡ ಬಿತ್ತನೆ ಕೆಲಸ ಆಗಬೇಕಿದೆ. 2 ವರ್ಷಕ್ಕೂ ಸೇರಿ 88 ಕೋಟಿ ರೂ. ವೆಚ್ಚದ ಯೋಜನೆಗೆ ಟೆಂಡರ್ ತಯಾರಿಸಲು ಸೂಚನೆ ನೀಡಲಾಗಿದೆ. ಮುಂಗಾರು ಆರಂಭದ ಜೊತೆಗೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ
author img

By

Published : May 15, 2019, 7:04 PM IST

ಬೆಂಗಳೂರು : ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಒಂದು ವಾರ ಅಥವಾ 10 ದಿನಗಳೊಳಗೆ ಟೆಂಡರ್ ಕರೆಯಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಕುಮಾರಸ್ವಾಮಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜೂನ್ 10 ರೊಳಗೆ ಮೋಡ ಬಿತ್ತನೆ ಕೆಲಸ ಆಗಬೇಕಿದೆ. 2 ವರ್ಷಕ್ಕೂ ಸೇರಿ 88 ಕೋಟಿ ರೂ. ವೆಚ್ಚದ ಯೋಜನೆಗೆ ಟೆಂಡರ್ ತಯಾರಿಸಲು ಸೂಚನೆ ನೀಡಲಾಗಿದೆ. ಮುಂಗಾರು ಆರಂಭದ ಜೊತೆಗೆ ಮೋಡ ಬಿತ್ತನೆ ಮಾಡಲಾಗುವುದು. ಮೋಡದ ಲಭ್ಯತೆ ಮತ್ತು ಮಳೆ ಲಭ್ಯತೆ ಆಧಾರದಲ್ಲಿ‌ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತದೆ. 2 ವಿಮಾನಗಳ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ. ಹುಬ್ಬಳ್ಳಿ ಮತ್ತು ಬೆಂಗಳೂರು 2 ಮೋಡ ಬಿತ್ತನೆ ಕೇಂದ್ರ ಸ್ಥಾಪನೆ ಮಾಡಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು.

ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ

ಜೂನ್ ತಿಂಗಳಿನಲ್ಲೇ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ಮಳೆ ಪ್ರಮಾಣ ಕಡಿಮೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೋಡ ಬಿತ್ತನೆ ಮಾಡಲು ತಯಾರಿ ನಡೆಸಲಾಗಿದೆ. ರಾಜ್ಯಾದ್ಯಂತ ಎಲ್ಲ ಕಡೆ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ರಾಜ್ಯದ 2,999 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ. 1,632 ಗ್ರಾಮಗಳಲ್ಲಿ 2,400 ಟ್ಯಾಂಕರ್ ಗಳಿಂದ ನೀರು ಸರಬರಾಜು ಮಾಡ್ತಿದ್ದೇವೆ. 6,424 ನಗರ ಪ್ರದೇಶದ ವಾರ್ಡ್ ಗಳ ಪೈಕಿ 432 ವಾರ್ಡ್ ಗಳಿಗೆ ಟ್ಯಾಂಕರ್ ನಿಂದ ನೀರು ಕೊಡುತ್ತಿದ್ದೇವೆ. ನಿಯಮಾವಳಿಗಳನ್ನು ಸಡಿಲ ಮಾಡಿ ಟ್ಯಾಂಕರ್ ಗಳಿಂದ ನೀರು ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರೈತರಿಂದ ಬೋರ್​ವೆಲ್ ಗಳನ್ನ ಬಾಡಿಗೆ ಪಡೆದು ನೀರು ಸರಬರಾಜು ಮಾಡುವಂತೆ ಸೂಚನೆ ಕೊಟ್ಟಿದ್ದೇವೆ. 15 ದಿನಕ್ಕೊಮ್ಮೆ ಟ್ಯಾಂಕರ್​ಗಳಿಗೆ ಹಾಗೂ ತಿಂಗಳಿಗೊಮ್ಮೆ ಬೋರ್​ವೆಲ್​ಗಳಿಗೆ ಹಣ ಪಾವತಿ ಮಾಡಲು ಸೂಚಿಸಿದ್ದು, ಇದಕ್ಕಾಗಿ 713 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪ್ರತಿ ತಾಲೂಕು ಹಾಗೂ ಜಿಲ್ಲೆಯಲ್ಲೂ ಕಾಲ್​ಸೆಂಟರ್ ತೆರೆಯಲಾಗಿದೆ. ಕಾಲ್​ಸೆಂಟರ್ ಚಾಲ್ತಿಯಲ್ಲಿಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಗುಳೆ ತಪ್ಪಿಸಲು ನರೇಗಾ ಯೋಜನೆಯಡಿ ಉದ್ಯೋಗಗಳನ್ನು ನೀಡುತ್ತಿದ್ದೇವೆ. ನರೇಗಾ ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರದಿಂದ 1,697 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಕೈಯಲ್ಲಿ ಉದ್ಯೋಗ ಕೊಡೋಕೆ ಆಗಲಿಲ್ಲ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ, ಮೇವು, ಜನ ಗುಳೆ ಹೋಗದಿರದಂತೆ ಕ್ರಮ ತೆಗೆದುಕೊಂಡಿದ್ದೇವೆ. 201 ಕೋಟಿ ರೂ. ಟಾಸ್ಕ್ ಫೋರ್ಸ್ ಗೆ ನೀಡಿದ್ದೇವೆ. ಟ್ಯಾಂಕರ್ ಗಳಿಗೆ 15 ದಿನದೊಳಗೆ ಪೇಮೆಂಟ್ ಮಾಡುವಂತೆ ನಿರ್ದೇಶನ ಕೊಟ್ಟಿದ್ದೇವೆ. ಪೂರ್ವ ಮುಂಗಾರು ಶೇ. 40 ರಷ್ಟು ಕಡಿಮೆ ಮಳೆ ಆಗಿದೆ. ಕೇವಲ 30 ಸಾವಿರ ಹೆಕ್ಟರ್ ನಲ್ಲಿ ಬಿತ್ತನೆ ಆಗಿದೆ ಅಷ್ಟೇ. ಮಲೆನಾಡು, ಕರಾವಳಿ ಭಾಗದಲ್ಲಿ ಅತಿವೃಷ್ಠಿ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಅದಕ್ಕಾಗಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಕೂಡ ರಚನೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕುಡಿಯವ ನೀರು ಸಮಸ್ಯೆ ಇರುವ ಕಡೆ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮೇವು ಕಡಿಮೆ ಇರುವ ಕಡೆಗಳಲ್ಲಿ ತಕ್ಷಣ ಪೂರೈಸಲು ಸೂಚಿಸಲಾಗಿದೆ. ಸರ್ಕಾರ ನಿದ್ದೆ ಮಾಡುತ್ತಿಲ್ಲ. ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಜನರು ಗುಳೆ ಹೋಗಬಾರದೆಂದು ಬರ ಪರಿಸ್ಥಿತಿ ನಿರ್ವಹಣೆಗೆ ಸುಮಾರು 700 ಕೋಟಿ ರೂ. ಹಣ ಮೀಸಲಿಡಲಾಗಿದೆ. ಎಲ್ಲೂ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Intro:ಬೆಂಗಳೂರು : ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಒಂದು ವಾರ ಅಥವಾ ಹತ್ತು ದಿನಗಳೊಳಗೆ ಟೆಂಡರ್ ಕರೆಯಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.Body:ಬರ ಪರಿಸ್ಥಿತಿ ಕುರಿತು ಗೃಹ ಕಚೇರಿ ಕೇಷ್ಣಾದಲ್ಲಿ ಇಂದು ಸಿಎಂ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜೂನ್ 10 ರೊಳಗೆ ಮೋಡ ಬಿತ್ತನೆ ಕೆಲಸ ಆಗಬೇಕಿದೆ. ಎರಡು ವರ್ಷಕ್ಕೂ ಸೇರಿ 88 ಕೋಟಿ ರೂ. ವೆಚ್ಚದ ಯೋಜನೆಗೆ ಟೆಂಡರ್ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.
ಮುಂಗಾರು ಆರಂಭದ ಜೊತೆ ಜೊತೆ ಜೊತೆಗೇ ಮೋಡ ಬಿತ್ತನೆ ಮಾಡಲಾಗುವುದು. ಮೋಡದ ಲಭ್ಯತೆ ಮತ್ತು ಮಳೆ ಲಭ್ಯತೆ ಆಧಾರದಲ್ಲಿ‌ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತದೆ.
ಎರಡು ವಿಮಾನಗಳ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ. ಹುಬ್ಬಳ್ಳಿ ಮತ್ತು ಬೆಂಗಳೂರು ಎರಡು ಮೋಡ ಬಿತ್ತನೆ ಕೇಂದ್ರ ಸ್ಥಾಪನೆ ಮಾಡಲು ನಿರ್ಧಾರಿಸಲಾಗಿದೆ.
ಜೂನ್ ತಿಂಗಳಿನಲ್ಲೇ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಮೊದಲು ವಿಳಂಬವಾಗುತ್ತಿತ್ತು, ಈಗ ಮೊದಲೇ ಬಿತ್ತನೆಗೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಈ ವರ್ಷ ಮತ್ತು ಮುಂದಿನವರ್ಷ ಮಳೆ ಪ್ರಮಾಣ ಕಡಿಮೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೋಡ ಬಿತ್ತನೆ ಮಾಡಲು ತಯಾರಿ ನಡೆಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರಾಜ್ಯಾಧ್ಯಂತ ಎಲ್ಲ ಕಡೆ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದ 2,999 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ. 1632 ಗ್ರಾಮಗಳಲ್ಲಿ 2400 ಟ್ಯಾಂಕರ್ ಗಳಿಂದ ನೀರು ಸರಬರಾಜು ಮಾಡ್ತಿದ್ದೇವೆ. 6424 ನಗರ ಪ್ರದೇಶದ ವಾರ್ಡ್ ಗಳ ಪೈಕಿ 432 ವಾರ್ಡ್ ಗಳಿಗೆ ಟ್ಯಾಂಕರ್ ನಿಂದ ನೀರು ಕೊಡುತ್ತಿದ್ದೇವೆ. ನಿಯಮಾವಳಿಗಳನ್ನು ಸಡಿಲ ಮಾಡಿ ಟ್ಯಾಂಕರ್ ಗಳಿಂದ ನೀರು ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರೈತರಿಂದ ಬೋರ್ ವೆಲ್ ಗಳನ್ನ ಬಾಡಿಗೆ ಪಡೆದು ನೀರು ಸರಬರಾಜು ಮಾಡುವಂತೆ ಸೂಚನೆ ಕೊಟ್ಟಿದ್ದೇವೆ. 15 ದಿನಕ್ಕೊಮ್ಮೆ ಟ್ಯಾಂಕರ್ ಗಳಿಗೆ ಹಾಗೂ ತಿಂಗಳಿಗೊಮ್ಮೆ ಬೋರ್ ವೆಲ್ ಗಳಿಗೆ ಹಣ ಪಾವತಿ ಮಾಡಲು ಸೂಚಿಸಿದ್ದು, ಇದಕ್ಕಾಗಿ 713 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಪ್ರತಿ ತಾಲೂಕು ಹಾಗೂ ಜಿಲ್ಲೆಯಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಕಾಲ್ ಸೆಂಟರ್ ಚಾಲ್ತಿಯಲ್ಲಿಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಗುಳೆ ತಪ್ಪಿಸಲು ನರೇಗಾದಡಿ ಉದ್ಯೋಗಗಳನ್ನು ನೀಡುತ್ತಿದ್ದೇವೆ. ನರೇಗಾದಡಿ ಕೇಂದ್ರ ಸರ್ಕಾರ ದಿಂದ ಹಣ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರದಿಂದ 1697 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ.
ಕೇಂದ್ರ ಸರ್ಕಾರದ ಕೈಯಲ್ಲಿ ಉದ್ಯೋಗ ಕೊಡೋಕೆ ಆಗಲಿಲ್ಲ
ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ, ಮೇವು, ಜನ ಗುಳೆ ಹೋಗದಿರದಂತೆ ಕ್ರಮ ತೆಗೆದುಕೊಂಡಿದ್ದೇವೆ. 201 ಕೋಟಿ ರೂ. ಟಾಸ್ಕ್ ಫೋರ್ಸ್ ಗೆ ನೀಡಿದ್ದೇವೆ. ಟ್ಯಾಂಕರ್ ಗಳಿಗೆ 15 ದಿನದೊಳಗೆ ಪೇಮೆಂಟ್ ಮಾಡುವಂತೆ ನಿರ್ದೇಶನ ಕೊಟ್ಟಿದ್ದೇವೆ ಎಂದರು.
ಪೂರ್ವ ಮುಂಗಾರು ಶೇ. 40 ರಷ್ಟು ಕಡಿಮೆ ಮಳೆ ಆಗಿದೆ. ಕೇವಲ 30 ಸಾವಿರ ಹೆಕ್ಟರ್ ನಲ್ಲಿ ಬಿತ್ತನೆ ಆಗಿದೆ ಅಷ್ಟೇ. ಮಲೆನಾಡು, ಕರಾವಳಿ ಭಾಗದಲ್ಲಿ ಅತಿವೃಷ್ಠಿ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಅದಕ್ಕಾಗಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಕೂಡ ರಚನೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕುಡಿಯವ ನೀರು ಸಮಸ್ಯೆ ಇರುವ ಕಡೆ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್ ಗಳ ಮೂಲಕ ನೀರು ಪೂರೈಸಲಾಗುತ್ತದೆ. ಮೇವು ಕಡಿಮೆ ಇರುವ ಕಡೆಗಳಲ್ಲಿ ತಕ್ಷಣ ಪೂರೈಸಲು ಸೂಚಿಸಲಾಗಿದೆ ಎಂದರು ಹೇಳಿದರು.
ಸರ್ಕಾರ ನಿದ್ದೆ ಮಾಡುತ್ತಿಲ್ಲ. ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಜನರು ಗುಳೆ ಹೋಗಬಾರದು. ಬರ ಪರಿಸ್ಥಿತಿ ನಿರ್ವಹಣೆಗೆ ಸುಮಾರು 700 ಕೋಟಿ ರೂ. ಹಣ ಮೀಸಲಿಡಲಾಗಿದೆ. ಎಲ್ಲೂ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Conclusion:ಮುನೇಗೌಡ, ಬೆಂಗಳೂರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.