ಬೆಂಗಳೂರು: ಕೇರಳ-ಕರ್ನಾಟಕ ಗಡಿ ದಿಗ್ಬಂಧನ ತೆರವು ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಬರೆದ ಪತ್ರಕ್ಕೆ ಪ್ರತಿಯಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಸುದೀರ್ಘ ಉತ್ತರ ನೀಡಿದ್ದಾರೆ.
ಕೇರಳ - ಕರ್ನಾಟಕ ಗಡಿ ದಿಗ್ಬಂಧನ ತೆರವು ಅಸಾಧ್ಯ: ದೇವೇಗೌಡರಿಗೆ ಸಿಎಂ ಪತ್ರ ದೇವೇಗೌಡರಿಗೆ ಪತ್ರ ಬರೆದು ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಕೇರಳ-ಕರ್ನಾಟಕ ಗಡಿ ನಿರ್ಬಂಧ ತೆರವು ಮಾಡಲ್ಲ. ಗಡಿ ನಿರ್ಬಂಧ ತೆರವು ಮಾಡಿದರೆ ರಾಜ್ಯಕ್ಕೆ ಕೊರೊನಾ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ನಿಮ್ಮ ಅಭಿಪ್ರಾಯಕ್ಕೆ ಗೌರವ ಇದೆ. ಆದರೆ ನಿಮ್ಮ ಒತ್ತಾಯ ಜಾರಿ ಮಾಡುವುದು ಸದ್ಯ ಕಷ್ಟ. ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ 21 ದಿನ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಕೇರಳ ಕರ್ನಾಟಕ ಗಡಿ ಮುಚ್ಚುವುದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಕೇರಳದಲ್ಲಿ ವ್ಯಾಪಕವಾಗಿ ಕೊರೊನಾ ಹಬ್ಬಿದೆ. ಕರ್ನಾಟಕದ ಪ್ರತಿಯೊಬ್ಬರ ಹೊಣೆ ನನ್ನ ಸರ್ಕಾರದ್ದು, ಆ ಹೊಣೆಯಿಂದ ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.ಐಎಂಎ ಶಾಖೆ ಸೇರಿದಂತೆ ಹಲವರ ಸಲಹೆ ಸೂಚನೆಯಂತೆ ಗಡಿ ಬಂದ್ ಮಾಡಲಾಗಿದೆ. ಕರ್ನಾಟಕದ ಸಾವಿರಾರು ಮುಗ್ದ ಜನರ ಆರೋಗ್ಯ ಹಿತದೃಷ್ಟಿಯಿಂದ ಗಡಿ ದಿಗ್ಬಂಧನ ತೆರವುಗೊಳಿಸುವುದು ಅಸಾಧ್ಯ. ಮಾನವೀಯತೆ ದೃಷ್ಟಿಯಿಂದ ರೋಗಿಗಳಿಗೆ ಅವಕಾಶ ನೀಡುವಂತೆ ಹೇಳಿದ್ದೀರಿ. ಆದ್ರೆ ಕೊರೊನಾ ಪೀಡಿತರು ಯಾರು, ಕೊರೊನಾ ಪೀಡಿತರಲ್ಲದವರು ಯಾರು ಎಂದು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗಲ್ಲ. ಒಂದು ವೇಳೆ ದಿಗ್ಬಂಧನ ತೆರವುಗೊಳಿಸಿದರೆ ಪಂಡೋರಾ ಬಾಕ್ಸ್ ತೆರೆದು ಮನುಕುಲ ಆಹ್ವಾನಿಸಿಕೊಂಡ ಆಪತ್ತಿನಂತಾಗುತ್ತದೆ ಎಂದು ವಿವರಿಸಿದ್ದಾರೆ.ಕೇರಳ - ಕರ್ನಾಟಕ ಗಡಿ ದಿಗ್ಬಂಧನ ತೆರವು ಅಸಾಧ್ಯ: ದೇವೇಗೌಡರಿಗೆ ಸಿಎಂ ಪತ್ರ ಕೇರಳ - ಕರ್ನಾಟಕ ಗಡಿ ದಿಗ್ಬಂಧನ ತೆರವು ಅಸಾಧ್ಯ: ದೇವೇಗೌಡರಿಗೆ ಸಿಎಂ ಪತ್ರ ಕರ್ನಾಟಕ ಜನರ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರವೇ ಹೊರತು, ಇದರ ಹಿಂದೆ ಪೂರ್ವಗ್ರಹ, ರಾಜಕೀಯ ಉದ್ದೇಶವಿಲ್ಲ. ಗಡಿ ತೆರವುಗೊಳಿಸಬೇಕೆಂಬ ನಿಮ್ಮ ಹಾಗೂ ಸಿದ್ದರಾಮಯ್ಯ ಸಲಹೆಯನ್ನು ಗೌರವಿಸುತ್ತೇನೆ. ಆದ್ರೆ ಕರ್ನಾಟಕ ಜನರ ಆರೋಗ್ಯವೇ ಪರಮೊಚ್ಛ. ಹೀಗಾಗಿ ಗಡಿ ತೆರವು ಸಾಧ್ಯವೇ ಇಲ್ಲ. ಕೊರೊನಾ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್ ನೀಡುತ್ತಿರುವ ಸಹಕಾರ ಗಮನಾರ್ಹ. ಮುಂದೆಯೂ ಇದೇ ರೀತಿಯ ಸಹಕಾರ ಬಯಸುತ್ತೇನೆ. ನೀವು ಮತ್ತು ಸಿದ್ದರಾಮಯ್ಯ ಸರ್ಕಾರದ ಕಳಕಳಿ ಅರ್ಥ ಮಾಡಿಕೊಳ್ಳುತ್ತೀರಾ ಎಂದು ಭರವಸೆ ಇದೆ ಎಂದು ಉತ್ತರ ನೀಡಿದ್ದಾರೆ