ETV Bharat / state

ಶುಚಿತ್ವದ ಕೆಲಸವೂ ದೀರ್ಘಕಾಲಿಕವಾದದ್ದು, ಇಂಥ ಕಾರ್ಮಿಕರನ್ನು ಉದ್ಯೋಗಿಗಳೆಂದು ಪರಿಗಣಿಸಿ: ಹೈರ್ಕೋರ್ಟ್ - ಎಂಇಐಎಲ್

ಶುಚಿತ್ವ ಕೆಲಸದಲ್ಲಿ ತೊಡಗಿದ್ದ 60 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿರಿಗೆ ಉದ್ಯೋಗ ನೀಡುವಂತೆ ಕಾರ್ಮಿಕ ನ್ಯಾಯಮಂಡಳಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರದ ಅಧೀನ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್​​ವು ಹೈಕೋರ್ಟ್​ ಮೆಟ್ಟಲೇರಿದೆ.

high court
ಹೈಕೋರ್ಟ್​
author img

By

Published : Mar 3, 2023, 5:44 PM IST

ಬೆಂಗಳೂರು: ಶುಚಿತ್ವ ಕೆಲಸವೂ ದೀರ್ಘಕಾಲಿಕವಾಗಿದೆ.ಈ ಕಾರ್ಯದಲ್ಲಿರುವ ಕಾರ್ಮಿಕರನ್ನು ಉದ್ಯೋಗಿಗಳೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಶುಚಿತ್ವ ಕೆಲಸದಲ್ಲಿ ತೊಡಗಿದ್ದ 60 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿರಿಗೆ ಉದ್ಯೋಗವನ್ನು ನೀಡುವಂತೆ ಕಾರ್ಮಿಕ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರದ ಅಧೀನದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್(ಎಂಇಐಎಲ್) ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಶುಚಿತ್ವದ ಕೆಲಸ ಕೆಲ ಗಂಟೆಗಳ ಕಾಲ ಇರುತ್ತದೆಯಾದರೂ ದಿನ ನಿತ್ಯದ ಕೆಲಸವಾಗಿದ್ದು, ತಿಂಗಳಾಂತ್ಯದ ವರೆಗೂ ನಡೆಯುತ್ತಿರುತ್ತದೆ. ಜತೆಗೆ ದೀರ್ಘಕಾಲಿಕವಾಗಿದೆ. ಆದರೆ, ತಾತ್ಕಾಲಿಕವಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಉದ್ಯೋಗದಾತ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಕೇವಲ ನೆಪ ಮಾತ್ರವಾಗಿದೆ. ಕಾರ್ಮಿಕರು ಸುಧೀರ್ಘ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಗುತ್ತಿಗೆ ಕಾರ್ಮಿಕರು ಎಂದು ತಿಳಿಸಿ ಕಾರ್ಮಿಕರನ್ನು ವಂಚಿಸುವ ತಂತ್ರವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜತೆಗೆ, ಕಾರ್ಮಿಕರನ್ನು ನೌಕರರು ಎಂದು ಪರಿಗಣಿಸಿ ಮರು ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಬೇಕು. ಯಾವುದೇ ಹುದ್ದೆ ಖಾಲಿ ಇಲ್ಲದಿದ್ದಲ್ಲಿ ಹುದ್ದೆಗಳು ಖಾಲಿಯಾದಲ್ಲಿ ಬಳಿಕ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು ?: ಶಂಕರ್ ನರ್ಸರಿ ಮತ್ತು ಆಸೋಷಿಯೇಟೆಡ್ ಡಿಟೆಕ್ಟಿವ್ ಮತ್ತು ಸಕ್ಯೂರಿಟಿ ಸರ್ವೀಸ್ ಸಂಸ್ಥೆಯಿಂದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್(ಎಂಇಐಎಲ್) ಶುಚಿತ್ವ ಕೆಲಸ ಮಾಡುವುದಕ್ಕಾಗಿ 2000 ಇಸ್ವಿಯಲ್ಲಿ 66 ಮಂದಿ ಕಾರ್ಮಿಕರನ್ನು ಗುತ್ತಿಗೆಗೆ ಪಡೆದುಕೊಳ್ಳಲಾಗಿದೆ. ಅವಧಿ ಪೂರ್ಣಗೊಡ ಬಳಿಕ ಅರ್ಜಿದಾರರ ಸೇವೆ ಹಿಂಪಡೆದುಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಕಾರ್ಮಿಕರು ಕಾರ್ಮಿಕ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಎಲ್ಲ ಕಾರ್ಮಿಕರ ಸೇವೆಗೆ ಮರು ನೇಮಕ ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಂಇಐಎಲ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮರು ನೇಮಕಾತಿಗೆ ತಡೆಯಾಜ್ಞೆ ನೀಡಿ ಪ್ರಕರಣವನ್ನು ಮತ್ತೆ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಿತ್ತು. ಮತ್ತೆ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಎಲ್ಲ ಕಾರ್ಮಿಕರಿಗೆ ಮರು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಎಂಇಐಎಲ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಕಂಪನಿ ಪರ ವಾದ ಮಂಡಿಸಿದ್ದ ವಕೀಲರು, ಈ ಸಿಬ್ಬಂದಿ ತೋಟಗಾರಿಕೆ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರಾಗಿದ್ದು, ತೋಟಗಾರಿಕೆ, ಲೋಡಿಂಗ್, ಅನ್ಲೋಡಿಂಗ್ ಕೆಲಸದಲ್ಲಿ ತೊಡಗಿದ್ದರು. ಪ್ರತಿದಿನ ಕೇವಲ ಕೆಲವು ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತಾರೆ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಅವರಿಗೆ ಉದ್ಯೋಗವನ್ನು ನೀಡುವಂತೆ ನಿರ್ದೇಶನ ನೀಡಿ ಆದೇಶಿಸಿದೆ.
ಇದನ್ನೂಓದಿ:ಪೋಕ್ಸೋ ಸಂತ್ರಸ್ತೆಯ ಪಾಟಿ ಸವಾಲು ನಡೆಸಲು ಅವಕಾಶ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.