ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪೊಲೀಸರು ಬಹಳಷ್ಟು ಯೋಜನೆಗಳನ್ನ ಮಾಡ್ತಿದ್ದಾರೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ ಹಿನ್ನೆಲೆ ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ ಮಾಡಿದ್ದಾರೆ.
ಈಗಾಗಲೇ ಜನಜಂಗುಳಿ ಇರುವ ಸ್ಥಳಗಳಲ್ಲಿ 200 ಪುರುಷ ಪೊಲೀಸ್ ಮ್ಯಾನಿಕ್ಯೂ ನಿಲ್ಲಿಸಲಾಗಿದೆ. ಅದೇ ರೀತಿ ಮಹಿಳಾ ಮ್ಯಾನಿಕ್ಯೂ ಹೆಚ್ವಿಸಲು ನಿರ್ಧಾರ ಮಾಡಿದ್ದಾರೆ. ಮಹಿಳೆಯರ ಸಂಖ್ಯೆ ಹೆಚ್ವಿರುವ ಶಾಲೆ, ಗಾರ್ಮೆಂಟ್ಸ್, ಮಾಲ್, ಆಸ್ಪತ್ರೆ, ಪೊಲೀಸ್ ಠಾಣೆ, ಟ್ರಾಫಿಕ್ ಹೆಚ್ಚಿರುವ ಸ್ಥಳಗಳಲ್ಲಿ ಇದನ್ನ ನಿಲ್ಲಿಸಲಾಗುತ್ತೆ. ಇದು ನೋಡಲು ಸೇಮ್ ಪೊಲೀಸರ ರೀತಿನೇ ಇದೆ. ನವೆಂಬರ್ 2019 ರಂದು ಈ ಮ್ಯಾನಿಕ್ಯೂ ಪ್ಲಾನಿಂಗ್ನನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಈ ಗೊಂಬೆ ಬೆಲೆ ನಾಲ್ಕರಿಂದ ಐದು ಸಾವಿರ ಇದೆ.
ಸದ್ಯ 50 ರಿಂದ 100 ಗೊಂಬೆಗಳನ್ನ ತಯಾರಿ ಮಾಡಲು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಇನ್ನು ಇದರ ಕುರಿತು ನಗರ ಆಯುಕ್ತರು ಮಾತನಾಡಿ ಮಹಿಳೆಯರ ರಕ್ಷಣೆಗೆ ನಮ್ಮ ಮೊದಲ ಕೆಲಸ. ಸದ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ನಿರ್ಧಾರ ಮಾಡಿದ್ದೀವಿ. ಇದು ಸೇಮ್ ಮಹಿಳಾ ಕಾನ್ಸ್ಟೇಬಲ್ ರೀತಿನೇ ಇದ್ದು ಮಹಿಳೆಯರ ರಕ್ಷಣೆಗೆ ಇದನ್ನ ಮಾಡಲಾಗಿದೆ ಎಂದರು.