ಬೆಂಗಳೂರು: ನಾನು ಕನ್ನಡಿಗನೇ. ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ನೌಕರಿ ಮಾಡುತ್ತೇನೆ ಮತ್ತು ಇಲ್ಲೇ ಸಾಯುತ್ತೇನೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಭಾಸ್ಕರ್ ರಾವ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಅವರು ಆರ್ಎಸ್ಎಸ್ ಸೇರಿಕೊಳ್ಳಲಿ, ಅವರು ಕನ್ನಡದವರೂ ಅಲ್ಲವೆಂದು ಆಕ್ರೋಶ ಹೊರಹಾಕಿದ್ದರು.
ಈ ಕುರಿತು ಇಂದು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತರು ಟಾಂಗ್ ಕೊಟ್ಟಿದ್ದಾರೆ. ನಾನಿರೋದು 1 ಕೋಟಿ 44 ಲಕ್ಷ ಜನ ಬೆಂಗಳೂರಿಗರ ರಕ್ಷಣೆಗೆ. ಕನ್ನಡ ಸಂಘಟನೆಗಳಿಂದ ನಾನು ಕನ್ನಡ ಕಲಿಯುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.