ETV Bharat / state

ಮುಖ್ಯ ಕಾರ್ಯದರ್ಶಿ ಜೊತೆಗಿನ ಸಂಧಾನ ಸಭೆ ಸಫಲ: ಅಂಗನವಾಡಿ ಕಾರ್ಯಕರ್ತೆಯರ ‘ಬೆಂಗಳೂರು ಚಲೋ’ ಅಂತ್ಯ

ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಊರುಗಳಿಗೆ ಮರಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಸಂಧಾನ ಫಲ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಎರಡೂ ಸಂಘಟನೆಯ ಕಾರ್ಯಕರ್ತೆಯರು ಊರುಗಳಿಗೆ ತೆರಳಿದ್ದಾರೆ.

ಬೆಂಗಳೂರು ಚಲೋ’ ಅಂತ್ಯ
author img

By

Published : Mar 2, 2021, 9:59 PM IST

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಎರಡು ಸಂಘಟನೆಗಳು ಪ್ರತ್ಯೇಕವಾಗಿ ನಡೆಸಿದ್ದ ‘ಬೆಂಗಳೂರು ಚಲೋ’ ಪ್ರತಿಭಟನೆ ಕೈಬಿಟ್ಟು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ವಿಧಾನಸೌಧದಲ್ಲಿ ಸಂಘಟನೆ ಪ್ರಮುಖರೊಂದಿಗೆ ಮುಖ್ಯ ಕಾರ್ಯದರ್ಶಿ ನಡೆಸಿದ ಸಭೆಯ ನಂತರ ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಇಲಾಖೆ ಅಯುಕ್ತರಾದ ಪೆದ್ದಪ್ಪಯ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಮನವಿಗಳನ್ನು ಈಗಾಗಲೇ ಬಜೆಟ್​​ನಲ್ಲಿ ಪರಿಗಣಿಸುವಂತೆ ಕೇಳಿಕೊಳ್ಳಲಾಗಿದೆ ಎಂದಿದ್ದರು.

ಎಂಪಿಎಫ್ ಲೈಟ್ 2012 ರಿಂದ 2015ರ ವರೆಗೆ ಇತ್ತು. 2015ರಲ್ಲಿ ಯೋಜನೆ ಕೊನೆಗೊಂಡಿದೆ. ವಿಮೆ ನೀಡಲು 47 ಕೋಟಿ ರೂ. ಅಗತ್ಯವಿದೆ. ಈಗಾಗಲೇ ಸಿಎಂಗೆ ಅನುಮೋದನೆಗಾಗಿ ಮನವಿ ಮಾಡಿದ್ದೇವೆ. ಕಾರ್ಯಕರ್ತೆಯರ ಇಡಿಗಂಟು ( ನೌಕರ ಮೃತಪಟ್ಟಾಗ ನೀಡುವ ಪರಿಹಾರ ಧನ) ಮೊತ್ತ ಹೆಚ್ಚಳ ಮಾಡಿ 1ಲಕ್ಷ ರೂ.ಗೆ ಏರಿಸಲು, ಹಾಗೂ ಸಹಾಯಕರಿಗೆ 50 ಸಾವಿರ ರೂ. ನೀಡುವಂತೆ ಕೇಳಿದ್ದೇವೆ. ಸೇವಾ ಹಿರಿತನದ ಬಗ್ಗೆ ಆರ್ಥಿಕ ಅಧಿಕಾರಿಗಳು, ಸಿಎಂ ಹಾಗೂ ಸಚಿವರ ಜೊತೆ ಚರ್ಚಿಸಲಾಗಿದೆ ಎಂದರು.

ಇನ್ನು ರಾಜ್ಯದಲ್ಲಿ 3,361 ಮಿನಿ ಅಂಗನವಾಡಿಗಳಿವೆ. ಇಲ್ಲಿ ಸಹಾಯಕಿಯರಿಲ್ಲದೆ ಕಾರ್ಯಕರ್ತೆಯರೆ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಕ್ಕೆ ಈ ವಿಚಾರವಾಗಿ ಮನವಿ ಸಲ್ಲಿಸಲಾಗಿದೆ. ಕೊರೊನಾದಿಂದ ಮೃತಪಟ್ವರಿಗೆ 30 ಲಕ್ಷ ಪರಿಹಾರ ನೀಡುತ್ತೇವೆ. ದಾಖಲೆ ಪಡೆದು ಅವರಿಗೆ ಪರಿಹಾರ ನೀಡಲಾಗುವುದು ಎಂದರು.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ರಾಜ್ಯ ಸಚಿವರ ಸಿಡಿ ಪ್ರಕರಣ; ಪೊಲೀಸರಿಗೆ ದೂರು ನೀಡಲು ಮುಂದಾದ RTI ಕಾರ್ಯಕರ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.