ETV Bharat / state

ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೆ ಸೋಂಕು: ವರ್ಕ್‌ ಫ್ರಂ ಹೋಂ ಮೊರೆ ಹೋದ ಸಿಎಂ - ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೆ ಕೊರೊನಾ

ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಸಿ.ಟಿ.ರವಿ ಹೋಮ್​​ ಕ್ವಾರಂಟೈನ್ ಮುಗಿಸಿ ಬಂದಿದ್ದಾರೆ. ಇದೀಗ ಸಿಎಂ ಕೂಡ ಹೋಮ್​​ ಕ್ವಾರಂಟೈನ್ ಆಗಿದ್ದು ವರ್ಕ್ ಫ್ರಂ ಹೋಮ್​​​ ಮಾಡುತ್ತಿದ್ದಾರೆ.

chief minister Yeddyurappa goes into home quarantine
ಕೊರೊನಾ ಭೀತಿಯಲ್ಲಿ ಸಿಎಂ ಬಿಎಸ್​ವೈ
author img

By

Published : Jul 10, 2020, 2:13 PM IST

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೆ ಸೋಂಕು ತಗುಲಿದ್ದು ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಂ​​​ ಕ್ವಾರಂಟೈನ್ ಆಗಿದ್ದು, ಐದು ದಿನಗಳ ಕಾಲ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್ ಸೇರಿ ಕೆಲ ಸಿಬ್ಬಂದಿ ಹಾಗೂ ಕಾರು ಚಾಲಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇವರ ಜೊತೆ ಪ್ರಾಥಮಿಕ ಸಂಪರ್ಕವಿಲ್ಲದೇ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಸಿಎಂ 5 ದಿನ ಸ್ವಯಂ ಹೋಮ್​​ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ಸದ್ಯ ಅಧಿಕೃತ ನಿವಾಸ ಕಾವೇರಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ತವ್ಯ ನಿರ್ವಹಿಸಲಿದ್ದೇನೆ. ಯಾರೂ ಆತಂಕಪಡುವುದು ಬೇಡ, ನಾನು ಆರೋಗ್ಯವಾಗಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇತ್ತೀಚೆಗೆ ಸೋಂಕಿತರಾಗಿರುವ ಸುಮಲತಾ ಅಂಬರೀಶ್, ಸಿಎಂ ಅವರನ್ನು ಭೇಟಿಯಾಗಿದ್ದರು. ಈ ನಿಟ್ಟಿನಲ್ಲೂ ಮುಂಜಾಗ್ರತೆ ವಹಿಸಿ ಕ್ವಾರಂಟೈನ್ ಆಗಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.