ETV Bharat / state

ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಲು ಮುಖ್ಯಮಂತ್ರಿ ಸೂಚನೆ - congress government five guarantees

ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿಕೊಂಡ ಬಳಿಕ ಇಂದು ಎರಡನೇ ದಿನ ಸಿದ್ದರಾಮಯ್ಯ ಅವರು ಜನತಾ ದರ್ಶನ ಮಾಡಿದ್ದಾರೆ.

chief-minister-instructed-to-solve-the-problem-of-millet-growers-immediately
ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಲು ಮುಖ್ಯಮಂತ್ರಿ ಸೂಚನೆ
author img

By

Published : May 31, 2023, 3:36 PM IST

ಬೆಂಗಳೂರು: ರಾಗಿ ಬೆಳೆಗಾರರಿಗೆ ಬೆಂಬಲ ಬೆಲೆ ಯೋಜನೆ ಅಡಿ ಸಮರ್ಪಕವಾಗಿ ಹಣ ಪಾವತಿಯಾಗದೇ ಇರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗೃಹ ಕಚೇರಿ ಕೃಷ್ಣದಲ್ಲಿ ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಅವರು ಅಹವಾಲುಗಳನ್ನು ಸ್ವೀಕರಿಸಿದರು. ರಾಗಿ ಬೆಳೆಗಾರರಿಗೆ ಹಣ ಪಾವತಿಸುವಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ ರೈತರಿಗೆ ಅನಾನುಕೂಲ ಆಗದಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ
ರೈತರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಜನತಾ ದರ್ಶನ: ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ ಆರಂಭಿಸಿದ ಬೆನ್ನಲ್ಲೇ ಜನತಾ ದರ್ಶನ ಸಹ ಮರು ಆರಂಭಿಸಿದ್ದಾರೆ. ನಿತ್ಯ ನೂರಾರು ಮಂದಿ ಸಿದ್ದರಾಮಯ್ಯರ ಭೇಟಿಗೆ ಆಗಮಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿಕೊಂಡ ಬಳಿಕ ಇಂದು ಎರಡನೇ ದಿನ ಸಿದ್ದರಾಮಯ್ಯ ಜನತಾ ದರ್ಶನ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಅವರು ಮೊದಲ ಜನತಾ ದರ್ಶನ ನಡೆಸಿದ್ದರು.

ಜನರ ಸಮಸ್ಯೆಗೆ ಮುಖ್ಯಮಂತ್ರಿಯಾಗಿ ಸ್ಪಂಧಿಸಲು ಈ ಕಾರ್ಯಕ್ರಮ ಮಾತ್ರ ಸೂಕ್ತ ಎಂಬ ಅಭಿಪ್ರಾಯ ಅವರದ್ದಾಗಿದ್ದು, ಪ್ರತಿದಿನ ಕೃಷ್ಣಾಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಕಾರ್ಯದೊತ್ತಡದ ಮಧ್ಯೆ ಜನರ ಅಹವಾಲು ಸ್ವೀಕರಿಸಲು ಆಗದ ದಿನ ಮುಂಚಿತವಾಗಿಯೇ ಅಧಿಕಾರಿಗಳು ಜನರಿಗೆ ಮಾಹಿತಿ ತಲುಪಿಸುವಂತೆ ಅವರು ಸೂಚಿಸಿದ್ದಾರೆ. ಮೊದಲ ದಿನ ಜನತಾದರ್ಶನ ನಡೆಸಿದ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ, ನಾನಾ ಕಾರಣಗಳಿಂದ ಜನತಾ ದರ್ಶನವನ್ನು ಈ ರೀತಿ ನಡೆಸಲು ಸಾಧ್ಯವಾಗಿರಲ್ಲ.

ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಲು ಮುಖ್ಯಮಂತ್ರಿ ಸೂಚನೆ
ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಲು ಮುಖ್ಯಮಂತ್ರಿ ಸೂಚನೆ

ಹಾಗಂಥ ನಾನು ಜನರಿಂದ ದೂರ ಉಳಿದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಚಿವರು, ಶಾಸಕರ ನೇತೃತ್ವದಲ್ಲಿ ಜನತಾ ದರ್ಶನ ನಡೆಸುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.80ರಷ್ಟು ಇತ್ಯರ್ಥವಾಗಿದೆ ಎಂದಿದ್ದರು. ಜನಸ್ಪಂದನ ಕಾರ್ಯಕ್ರಮಗಳ ವೇಳೆ ಬರುವ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೃಷಿ ಸಚಿವರ ಸಭೆ: ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಮಂಗಳವಾರ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಕೃಷಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ವಿಧಾನಸೌಧದಲ್ಲಿ ಮೊದಲ ಬಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.

ಈ ವೇಳೆ ಇಲಾಖೆಯ ಯೋಜನೆಗಳು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಪೂರ್ವ ಮುಂಗಾರಿನಲ್ಲಿ ವಾಡಿಕೆಯಾಗಿ 108 ಮಿಲಿ ಮೀಟರ್​ ಮಳೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 108 ಮಿಮೀ ಮಳೆಯಾಗಿದ್ದು, ಯಾವುದೇ ಕೊರತೆ ಆಗಿರುವುದಿಲ್ಲ. 2022-23ನೇ ಸಾಲಿನ ಮೂರನೇ ಮುಂಗಡ ಅಂದಾಜಿನಂತೆ 139.28 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಗ್ಯಾರಂಟಿಗಳ ಜಾರಿಗೆ ಎಸ್​ಸಿಪಿ/ಟಿಎಸ್​ಪಿ ಹಣ ಬಳಸಬಾರದು: ಗೋವಿಂದ ಕಾರಜೋಳ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.