ETV Bharat / state

ಉದ್ದಿಮೆ ಏಳಿಗೆಯ ಹೆಸರಲ್ಲಿ ಲಾರಿ ಮಾಲೀಕರ ಮೇಲೆ ಶೋಷಣೆ: ಚೆನ್ನಾರೆಡ್ಡಿ ಆರೋಪ - break rules

ಸರ್ಕಾರವು ಉದ್ದಿಮೆಯ ಏಳಿಗೆಗೆ ಯೋಜನೆಗಳನ್ನು ರೂಪಿಸಿ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ಕೊಡದೆ ಉದ್ದಿಮೆಯ ಅಭಿವೃದ್ಧಿಯನ್ನು ನಿರ್ಬಂಧಿಸುತ್ತಿದೆ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಗೌರವ ಅಧ್ಯಕ್ಷರಾದ ಬಿ ಚೆನ್ನಾರೆಡ್ಡಿ ಆರೋಪಿಸಿದರು.

exploitation-of-lorry-owners-in-the-name-of-industrial-prosperity
ಉದ್ದಿಮೆ ಏಳಿಗೆಯ ಹೆಸರಲ್ಲಿ ಲಾರಿ ಮಾಲೀಕರ ಮೇಲೆ ಶೋಷಣೆ: ಚೆನ್ನಾರೆಡ್ಡಿ ಆರೋಪ
author img

By

Published : Dec 18, 2022, 6:42 PM IST

ಬೆಂಗಳೂರು: ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯು, ಸರಕು ಸಾಗಾಣಿಕೆ ವಾಹನಗಳ ಮಾಲೀಕರಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಉದ್ದಿಮೆ ಏಳಿಗೆಗೆ ಮಾರಕವಾಗಿದೆ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಆರೋಪಿಸಿದರು.

ಬಸವನಗುಡಿ ರಸ್ತೆಯಲ್ಲಿರುವ ಮರಾಠಾ ಹಾಸ್ಟೆಲ್​ನಲ್ಲಿ ನಡೆದ ದಿ ಬೆಂಗಳೂರು ಲೋಕಲ್‌ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಆಚರಣೆ ಹಾಗೂ ರಾಜ್ಯ ಲಾರಿ ಮಾಲೀಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬದಲಾದ ಕೆಲವು ವ್ಯವಸ್ಥೆಗಳಿಂದಾಗಿ, ಲಾರಿ ಮಾಲೀಕರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ರಸ್ತೆ ಸುರಕ್ಷತೆಯ ಹೆಸರಲ್ಲಿ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಕನಿಷ್ಠ 5000 ರೂಪಾಯಿಯಿಂದ 20000 ರೂ ಗೆ ಅವೈಜ್ಞಾನಿಕವಾಗಿ ಏರಿಸಿದೆ ಎಂದರು.

ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ: ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಡಿ ತನಿಖಾ ಠಾಣೆಗಳು ದಿನದ 24ಗಂಟೆ ಪ್ರತಿದಿನವೂ ನಿರಂತರವಾಗಿ ಕೆಲಸ ಮಾಡುತ್ತಿವೆ. ಇದು ಸಾಗಾಣಿಕೆ ಉದ್ಯಮಕ್ಕೆ ಹೊರೆಯಾಗಿ ಪರಿಣಮಿಸಿದೆಯೇ ಹೊರತು, ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವಾಸ್ತವವನ್ನು ಬಿಚ್ಚಿಟ್ಟರು.

ಗುಜರಿ ನೀತಿ ವಿಷಾದನೀಯ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಾಹನಗಳು ಸುವ್ಯವಸ್ಥೆಯಲ್ಲಿವೆಯೋ ಇಲ್ಲವೋ ಎಂದು ನಿರ್ಧಾರ ಮಾಡಬಹುದಾಗಿದೆ. ಸುವ್ಯವಸ್ಥೆಯಲ್ಲಿರುವ ವಾಹನಗಳಿಗೆ ಮಾತ್ರ ಅರ್ಹತಾ ಪತ್ರ, ನವೀಕರಣ ಪತ್ರ ನೀಡಬೇಕು. ಇಲ್ಲವಾದಲ್ಲಿ ನಿರಾಕರಿಸಬೇಕು. ಇಂಥದ್ದೊಂದು ವ್ಯವಸ್ಥೆ ಇರುವಾಗ ಕೇಂದ್ರ ಸರ್ಕಾರ 15 ವರ್ಷ ಹಳೆಯದಾದ ವಾಹನಗಳಿಗೆ ʼಗುಜರಿ ನೀತಿʼ ಜಾರಿ ಮಾಡಿರುವುದು ವಿಷಾದನೀಯ.

ವಾಹನ ಮಾಲೀಕರ ಸಂಘಗಳ ಜೊತೆಗೆ ಜಂಟಿ ಸಭೆ: ಹಳೆಯ ವಾಹನಗಳಿಗೆ ಗ್ರೀನ್‌ ಟ್ಯಾಕ್ಸ್‌ ಹೇರುವುದು, ಥರ್ಡ್‌ ಪಾರ್ಟಿ ಇನ್ಶುರೆನ್ಸ್‌ ಪ್ರೀಮಿಯಂ ಪ್ರತಿ ವರ್ಷ ಏರಿಸುತ್ತಿರುವುದು ಮುಂತಾದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರ ದೇಶಾದ್ಯಂತ ಇರುವ ವಾಹನ ಮಾಲೀಕರ ಸಂಘಗಳ ಜೊತೆಗೆ ಜಂಟಿಯಾಗಿ ಸಭೆ ಕರೆದು ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಪಡೆದು ಆ ನಂತರ ಹೊಸ ಬಗೆಯ ನೀತಿ ನಿಯಮಗಳ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು, ಶಾಸಕ ಉದಯ್ ಗರುಡಾಚಾರ್‌, ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಸಾರಿಗೆ ಆಯುಕ್ತ ಎಸ್.ಎನ್‌. ಸಿದ್ದರಾಮಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಹಣ ಪೀಕುತ್ತಿದ್ದ ಸುಂದರಿ ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.