ETV Bharat / state

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದವನಿಂದ ಟೆಕ್ಕಿ ಯುವತಿಗೆ ಲಕ್ಷ ಲಕ್ಷ ರೂ. ವಂಚನೆ!

author img

By

Published : Oct 30, 2020, 8:05 AM IST

ಹ್ಯಾಂಡ್ಸಮ್ ಆಗಿದ್ದಾನೆ, ಮದುವೆ ಆಗೋಣ ಎಂದು ಯುವಕನನ್ನು ನಂಬಿದ ಟೆಕ್ಕಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

dsd
ಟೆಕ್ಕಿ ಯುವತಿಗೆ ಮೋಸ

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ 3.07 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಟೆಕ್ಕಿ ಯುವತಿಗೆ ಕಬೀರ್ ಆನಂದ್ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿ ನಂತರ ಪರಸ್ಪರ ನಂಬರ್ ಎಕ್ಸ್​ಚೇಂಜ್ ಆಗಿ ಇಬ್ಬರ ನಡುವೆ ಮಾತುಕತೆಯಾಗಿದೆ. ನಾನು ‌ಲಂಡನ್​ನಿಂದ ಅಕ್ಟೋಬರ್ 18ರಂದು ಭಾರತಕ್ಕೆ ಬರುತ್ತೇನೆ ಎಂದು ಯುವತಿಗೆ ಪುಂಗಿ ಬಿಟ್ಟಿದ್ದಾನೆ. ಅದೇ ದಿನ ಕಸ್ಟಂ ಅಧಿಕಾರಿಯ ಸೋಗಿನಲ್ಲಿ ಅಪರಿಚಿತ ಮಹಿಳೆ ಕರೆ ಮಾಡಿ ಕಬೀರ್ ಆನಂದ್ ಲಂಡನ್​ನಿಂದ ದೆಹಲಿಗೆ ಬಂದಿದ್ದಾರೆ. ಅಲ್ಲಿಂದ 1.70 ಲಕ್ಷ ಯುರೋ ಕರೆನ್ಸಿ ತಂದಿದ್ದಾರೆ‌. ಇದನ್ನು ರೂಪಾಯಿಗೆ ಪರಿವರ್ತಿಸಲು ಹಣ ಟ್ರಾನ್ಸ್​ಫರ್ ಮಾಡಿ ಎಂದು ಯುವತಿಯಿಂದ 3.07 ಲಕ್ಷ ವರ್ಗಾಯಿಸಿಕೊಂಡಿದ್ದಾರೆ.

ನಂತರ ಅಪರಿಚಿತ ಮಹಿಳೆ ಮೊಬೈಲ್ ಹಾಗೂ ವಂಚಕ ಕಬೀರ್ ಆನಂದ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಮೋಸ ಹೋದ ಯುವತಿ ವೈಟ್ ​ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.