ಬೆಂಗಳೂರು: ಚಾಮರಾಜನಗರ ಜಿಲ್ಲಾ ಲಾರಿ ಮಾಲೀಕರ ಸಂಘ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿದೆ.
ಲಾರಿ ಮಾಲೀಕರ ಸಂಘದ ಪರವಾಗಿ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಿಎಂಗೆ ಒಂದು ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು.
ಕೋವಿಡ್-19 ತುರ್ತು ಪರಿಹಾರ ನಿಧಿಗೆ ಸಂಘ, ಸಂಸ್ಥೆಗಳು ನೆರವು ಮುಂದುವರೆಸಿದ್ದು, ಚಾಮರಾಜನಗರ ಲಾರಿ ಮಾಲೀಕರ ಸಂಘ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಅಳಿಲು ಸೇವೆ ನೀಡಿದೆ. ದೇಣಿಗೆ ನೀಡಿದ್ದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರ ಬಳಿ ಲಾರಿ ಮಾಲೀಕರ ಸಂಘದವರು ಚೆಕ್ ನೀಡಿದ್ದಾರೆ. ಚೆಕ್ ಹಸ್ತಾಂತರದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಸುರೇಶ್ ಕುಮಾರ್ ಕೆಲಕಾಲ ಮಾತುಕತೆ ನಡೆಸಿದರು. ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ಸಂಬಂಧ ಚರ್ಚೆ ನಡೆಸಿ ಇಡೀ ವ್ಯವಸ್ಥೆ, ಸಿದ್ಧತೆ ಬಗ್ಗೆ ಸಿಎಂಗೆ ವಿವರ ನೀಡಿದರು.