ETV Bharat / state

51 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳ ಅರೆಸ್ಟ್.. 300 ಕಿ.ಮೀ.ವರೆಗೆ ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರು - ಒಂದು ಕೆಜಿ ಚಿನ್ನಾಭರಣ ವಶ

ರಾಜ್ಯದ ವಿವಿಧ 51 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳನೊಬ್ಬನನ್ನು ಖಾಕಿ ಪಡೆ ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Chain snatcher arrest  police stations of Karnataka state  Police investigation over Chain snatcher  ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳ  ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರು  ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ  ಒಂದು ಕೆಜಿ ಚಿನ್ನಾಭರಣ ವಶ  ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ
ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳ ಅರೆಸ್ಟ್
author img

By

Published : Aug 26, 2022, 2:24 PM IST

ಬೆಂಗಳೂರು: ರಾಜ್ಯದ ವಿವಿಧ 51 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳನನನ್ನ ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ತಮಿಳುನಾಡು ಮೂಲದ ಸಂತೋಷ್ ಖತರ್ನಾಕ್ ಸರಗಳ್ಳನಾಗಿದ್ದು, ಸಂತೋಷ್​ಗೆ ಸಹಕರಿಸಿದ್ದ ಆರೋಪಿ ರವಿ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ

ಬಂಧಿತರಿಂದ ಸುಮಾರು ಒಂದು ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ. ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್​ನಲ್ಲಿ ಸುತ್ತಾಡ್ತಿದ್ದ. ಬೈಕ್​ಗೆ ನಕಲಿ ನಂಬರ್ ಪ್ಲೇಟ್ ಬಳಸ್ತಿದ್ದ ಆರೋಪಿ ಆರ್​ಟಿಒ ವೆಬ್​ಸೈಟ್​ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದ.

ತನ್ನ ಪಲ್ಸರ್ ಬೈಕ್ ಕಲರ್​ಗೆ ಯಾವ್ಯಾವ ನಂಬರ್ ಇದೆ ಎಂದು ಸರ್ಚ್ ಮಾಡಿ, ತನ್ನ ಬೈಕ್​ಗೆ ನಕಲಿ ನಂಬರ್ ಅಳವಡಿಸಿಕೊಳ್ಳುತ್ತಿದ್ದ. ಆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಸರ ಕದಿಯೋಕೆ ಫೀಲ್ಡಿಗಿಳಿಯುತ್ತಿದ್ದ. ಮನೆ ಬಿಡುವಾಗ ಹೆಲ್ಮೆಟ್ ಹಾಕಿದರೆ ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್​ನಲ್ಲಿ ಓಡಾಟ ನಡೆಸ್ತಿದ್ದ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿರುವುದು ಪೊಲೀಸರ ತನಿಖೆ ವೇಳೆ ತಿಳಿಬಂದಿದೆ.

ಓದಿ: ಕದ್ದ ಬೈಕ್​ನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ!

ಕಳೆದ ಎರಡು ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸರು ಚೈನ್ ಸ್ನಾಚರ್ ಸಂತೋಷ್ ಹಿಂದೆ ಬಿದ್ದಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಎರಡು ಕಡೆ ಸರಗಳ್ಳತನ ಮಾಡಿದ್ದ ಸಂತೋಷ್​ನ ಹಿಡಿಯಲು ಪೊಲೀಸರು ಸುಮಾರು 300 ಕಿಲೋ ಮೀಟರ್​ವರೆಗಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದರು‌. ಬೆಂಗಳೂರು ನಗರದ ಜೆ.ಪಿ.ನಗರ, ಪುಟ್ಟೇನಹಳ್ಳಿ, ಹೊಸಕೋಟೆ, ಜಯನಗರ, ಬನ್ನೇರಘಟ್ಟ, ಯಲಹಂಕ, ಕೊಡಗೇಹಳ್ಳಿ, ಅಮೃತಹಳ್ಳಿಯಲ್ಲಿ ಸರಗಳ್ಳತನ ಮಾಡಿದ್ದ. ಆರೋಪಿಯನ್ನ ಸೆರೆ ಹಿಡಿಯಲು ಬೆಂಗಳೂರು ನಗರ, ಗ್ರಾಮಾಂತರ ಪೊಲೀಸರು ತಲೆ ಕೆಡೆಸಿಕೊಂಡಿದ್ದರು. ಆದರೆ ಸಂತೋಷ್ ಕಳೆದ 4 ವರ್ಷದಿಂದ ಯಾರ ಕೈಗೂ ಸಿಕ್ಕಿರಲಿಲ್ಲ.

ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಸಂತೋಷ್ ಚಲನವಲನ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದರು. ಖಾಕಿ ಪಡೆ ರಾತ್ರಿ - ಹಗಲು ಎನ್ನದೇ ಆರೋಪಿ ಸಂತೋಷ್​​ಗಾಗಿ ಕಾಯುತ್ತಿದ್ದರು. ಪುಟ್ಟೇನಹಳ್ಳಿ ಇನ್ಸ್​ಪೆಕ್ಟರ್ ಮುನಿರೆಡ್ಡಿ, ಪಿಎಸ್​ಐ ಪ್ರಸನ್ನ ಕುಮಾರ್, ರಮೇಶ್ ಹೂಗಾರ್, ಮನು ಹಾಗೂ ಸಿಬ್ಬಂದಿಯರು ಹರಸಾಹಸ ಪಟ್ಟು ಅರೋಪಿ ಸಂತೋಷ್​ನನ್ನು ಪತ್ತೆ ಮಾಡಿದ್ದರು. ಸಿಸಿಟಿವಿ ಕೊಟ್ಟ ಸುಳಿವಿನ ಮೇಲೆ ಆರೋಪಿ ಸಂತೋಷ್​ನ ಜಾಡು ಬೆನ್ನತ್ತಿದ್ದು, ಕೊನೆಗೂ ಯಶಸ್ವಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಆರೋಪಿ ದೇಹದ ಮಾದರಿ, ಹೆಲ್ಮೆಟ್ ಹಾಗೂ ಬ್ಲೂ ಕಲರ್ ಶರ್ಟ್ ಸುಳಿವಿನಾಧರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ 51 ಕೇಸ್ ಪತ್ತೆ ಮಾಡಿರುವ ಪುಟ್ಟೇನಹಳ್ಳಿ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಿಕಾಂ ಓದಿದ್ದ ಸಂತೋಷ್ ಇಂಟಿರಿಯರ್ ಕೆಲಸ ಮಾಡುತ್ತಿದ್ದ. ಆತನಿಗೆ ಇಂಟಿರಿಯರ್ ಕೆಲಸದಿಂದ ಬರುವ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಸರಗಳ್ಳತನವನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಓದಿ: ಹೊಸಕೋಟೆ: ಪೊಲೀಸರು ಅರೆಸ್ಟ್ ಮಾಡಲು ತೆರಳಿದಾಗ ಸೈನೇಡ್ ತಿಂದು ಸರಗಳ್ಳ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.