ಬೆಂಗಳೂರು: 2020ನೇ ಸಾಲಿನ ಎಂಜಿನಿಯರಿಂಗ್, ಆರ್ಕಿಟೆಕ್ಟರ್, ಕೃಷಿ ವಿಜ್ಞಾನ, ವೆಟರ್ನರಿ ಮುಂತಾದ ಕೋರ್ಸುಗಳ ಪ್ರವೇಶಕ್ಕಾಗಿ ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಿಲಾಗಿದೆ. ಸೀಟ್ ಮ್ಯಾಟ್ರಿಕ್ಸ್ ಹಾಗೂ ಶುಲ್ಕದ ವಿವರಗಳನ್ನು ಪ್ರಾಧಿಕಾರದ ವೆಬ್ಸೈಟ್ http://kea.kar.nic.inನಲ್ಲಿ ವಿದ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವೇಳಾಪಟ್ಟಿಯ ಪ್ರಕಾರ ಇಚ್ಛೆ / ಆಯ್ಕೆಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದಾಗಿದೆ.
ವೇಳಾಪಟ್ಟಿ ಹೀಗಿದೆ..
1) ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳ ಪ್ರಕಟಣೆ- 19-11-2020
2) ಆಯ್ಕೆಗಳನ್ನು ದಾಖಲಿಸುವುದು. (ಆದ್ಯತಾ ಕ್ರಮದಲ್ಲಿ (ಎಂಜಿನಿಯರಿಂಗ್, ಪಶುಸಂಗೋಪನೆ, ವಾಸ್ತುಶಿಲ್ಪ ಶಾಸ್ತ್ರ, ಕೃಷಿ ವಿಜ್ಞಾನ ಕೋರ್ಸುಗಳು. ಬಿ.ಫಾರ್ಮ) 2.00 pm on 22-11-2020 To 25-11-2020 Up to 11.00 am
3)ಅಣುಕು ಸೀಟು ಹಂಚಿಕೆಯ ಫಲಿತಾಂಶ 26-11-2020 after 2.00 pm
4) ಆಯ್ಕೆಗಳನ್ನು ಬದಲಾಯಿಸಲು ಅವಕಾಶ (ಅಭ್ಯರ್ಥಿಗಳು ಅಣುಕು ಸೀಟು ಹಂಚಿಕೆಯ ಫಲಿಂತಾಂಶವನ್ನು ಪರಿಶೀಲಿಸಿದ ನಂತರ ಇಚ್ಛೆ/ ಆಯ್ಕೆಗಳನ್ನು ಆವಶ್ಯವಿದ್ದಲ್ಲಿ ಬದಲಾಯಿಸಬಹುದಾಗಿದೆ/ ಸೇರಿಸಬಹುದಾಗಿದೆ -From 4.00 pm 26-11-2020 To 28-11-2020 upto 11.00 am
5) ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ 29-11-2020 after 4.00 pm
6) ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ CHOICEಯನ್ನು ಆಯ್ಕೆ ಮಾಡಿಕೊಳ್ಳಲು 30-11-2020 to 01-12-2020
7) Choice 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು-30-11-2020 to 02-12-2020
8)ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ (ಎಲ್ಲಾ ಮೂಲ ದಾಖಲಾತಿಗಳೊಂದಿಗೆ - Verification slipನಲ್ಲಿ ನಮೂದಿಸಿರುವಂತೆ)02-12-2020 before 5.30 pm
ಅಭ್ಯರ್ಥಿಗಳು ದಾಖಲಿಸುವ ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯನ್ನು ಮಾಡುವುದರಿಂದ ಅಭ್ಯರ್ಥಿಗಳು ನೇರವಾಗಿ Options ದಾಖಲಿಸದೆ, ತಮಗೆ ಇಷ್ಟವಿರುವ ಕೋರ್ಸು / ಕಾಲೇಜುಗಳ ಒಂದು ಪಟ್ಟಿಯನ್ನು ಮಾಡಿಕೊಂಡು ಪೋಷಕರೊಡನೆ ಚರ್ಚಿಸಿ, ನಂತರ Options ಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್‌ನಲ್ಲಿ ದಾಖಲಿಸಲು ಸೂಚಿಸಿದೆ ಹಾಗೂ ಇಚ್ಛೆಯನ್ನು (Options) ನಮೂದಿಸುವಾಗ ಆದ್ಯತಾ ಕ್ರಮ (prioritization) ಅನುಸರಿಸಲು ಸಹ ಸೂಚಿಸಿದೆ. ಸೀಟು ಹಂಚಿಕೆಗೆ ಅಭ್ಯರ್ಥಿಗಳು ಇಚ್ಛಿಗಳನ್ನು ನಮೂದಿಸುವ ಬಗ್ಗೆ ವಿಶ್ಲೇಷಣೆ ಸಹಿತ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.