ಬೆಂಗಳೂರು: ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್ ನೆಟ್‌ವರ್ಕಿಂಗ್ ಲ್ಯಾಬ್ ಐಐಎಸ್ಸಿಯ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಉದ್ಘಾಟನೆಗೊಂಡಿತು. ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ ಎಂಜಿನಿಯರಿಂಗ್ ಉಪಾಧ್ಯಕ್ಷ ಕೃಷ್ಣ ಸುಂದರೇಶನ್ ಲ್ಯಾಬ್ ಉದ್ಘಾಟಿಸಿದರು.
ಸಿಸ್ಕೊ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಲ್ಯಾಬ್, ನೆಟ್‌ವರ್ಕ್ ಟೆಸ್ಟ್‌ಬೆಡ್ ಹೊಂದಿದೆ. ಸಾಫ್ಟ್‌ವೇರ್ ಮತ್ತು ಡಿಫೈನ್ಡ್ ನೆಟ್‌ವರ್ಕಿಂಗ್, ನೆಟ್‌ವರ್ಕ್ ಫಂಕ್ಷನ್ ವರ್ಚುವಲೈಸೇಶನ್ ಮತ್ತು ನೆಟ್‌ವರ್ಕ್ ಸ್ಲೈಸಿಂಗ್‌ನಂತಹ ಸಂವಹನ ಮತ್ತು ಕಂಪ್ಯೂಟರ್ ನೆಟ್‌ವರ್ಕಿಂಗ್‌ನಲ್ಲಿ ಉದಯೋನ್ಮುಖ ಪ್ರದೇಶಗಳಲ್ಲಿ ಅಪ್ಲಿಕೇಷನ್‌ಗಳು, ಕ್ರಮಾವಳಿಗಳು ಮತ್ತು ಪ್ರಯೋಗಗಳನ್ನು ಅಭಿವೃದ್ಧಿಪಡಿಸಲು ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.
ಟೆಸ್ಟ್‌ಬೆಡ್‌ನಲ್ಲಿ ನೆಟ್‌ವರ್ಕ್ ನಿಯಂತ್ರಣ, ನಿರ್ವಹಣೆ ಮತ್ತು ವಿಶ್ಲೇಷಣಾ ವೇದಿಕೆಗಳು (ಸಿಸ್ಕೋ ಡಿಎನ್‌ಎಸಿ ಕೇಂದ್ರ), ವೈರ್‌ಲೆಸ್ ನಿಯಂತ್ರಕ, ಎಂಟರ್‌ಪ್ರೈಸ್ ಸ್ವಿಚ್‌ಗಳು ಮತ್ತು ಮಾರ್ಗನಿರ್ದೇಶಕಗಳು, ವೈಫೈ -6 ಪ್ರವೇಶ ಬಿಂದುಗಳು ಮತ್ತು ಗುರುತಿನ ನಿರ್ವಹಣಾ ಸೂಟ್ ಅಳವಡಿಸಲಾಗಿದೆ.
ಐಐಎಸ್ಸಿಯಲ್ಲಿ ಸ್ಥಾಪಿಸಿದ ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್, ಮುಂದಿನ ತಲೆಮಾರಿನ ನೆಟ್‌ವರ್ಕಿಂಗ್ ವಿಧಾನಗಳು ಮತ್ತು ಪರಿಕಲ್ಪನೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಿಸ್ಕೋ ಸಿಎಸ್ಆರ್ ಉಪಕ್ರಮವಾಗಿದ್ದು, ಭವಿಷ್ಯದ ವಿಕಸಿತ ನೆಟ್‌ವರ್ಕ್‌ಗಳ ಜ್ಞಾನ ಪಡೆಯಬಹುದು.
ಉದ್ಘಾಟನೆಯ ಭಾಗವಾಗಿ, ಕೇಂದ್ರದ ಲೋಗೋ ಸಹ ಅನಾವರಣಗೊಳಿಸಲಾಯಿತು. ನೆಟ್‌ವರ್ಕಿಂಗ್‌ನ ಇತ್ತೀಚಿನ ಬೆಳವಣಿಗೆಗಳ ಕುರಿತು ಸೆಮಿನಾರ್ ಸರಣಿಯನ್ನು ಆಯೋಜಿಸಲಾಗಿತ್ತು. ಸೆಮಿನಾರ್ ಸರಣಿಯಲ್ಲಿ ಐಐಎಸ್ಸಿ ಮಾಜಿ ನಿರ್ದೇಶಕರಾದ ಪ್ರೊ.ಅನುರಾಗ್ ಕುಮಾರ್, ಐಐಟಿ ಕಾನ್ಪುರ್ ನಿರ್ದೇಶಕರಾದ ಪ್ರೊ. ಅಭಯ್ ಕರಂದೀಕರ್, ಸಿಸ್ಕೋ ಇಂಡಿಯಾದಿಂದ ಡಾ.ಮೌಲಿ ಚಂದ್ರಮೌಳಿ ನಡುವೆ ಸಂವಾದ ನಡೆಯಿತು.
ಅತ್ಯಾಧುನಿಕ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ ಇಂಜಿನಿಯರಿಂಗ್ ಉಪಾಧ್ಯಕ್ಷ ಕೃಷ್ಣ ಸುಂದರೇಶನ್, “ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್ ಮೂಲಕ, ಹೊಸ ತಲೆಮಾರಿನ ನೆಟ್‌ವರ್ಕಿಂಗ್ ತಂತ್ರಜ್ಞಾನಗಳ ಬಗ್ಗೆ ಒಳನೋಟವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿ ಹೊಂದಿದ್ದೇವೆ. ಅವುಗಳನ್ನು ಉಪಕರಣಗಳು ಮತ್ತು ಜ್ಞಾನದೊಂದಿಗೆ ಸಂಯೋಜನೆಗೊಳಿಸುತ್ತೇವೆ. ವಿದ್ಯಾರ್ಥಿಗಳು ಅತ್ಯಾಧುನಿಕ ನೆಟ್‌ವರ್ಕಿಂಗ್ ಪರಿಹಾರಗಳನ್ನು ಪ್ರಯೋಗಿಸಬೇಕು ಮತ್ತು ತಯಾರಿಸಬೇಕು" ಎಂದರು.
ಇತ್ತೀಚಿನ ನೆಟ್‌ವರ್ಕಿಂಗ್ ಲ್ಯಾಬ್ ಮೂಲಕ ಹೊಸ ತರಂಗ ನಾವೀನ್ಯತೆ ಮತ್ತು ಆವಿಷ್ಕಾರ ಸಶಕ್ತಗೊಳಿಸಲು ಐಐಎಸ್ಸಿಯೊಂದಿಗೆ ಪಾಲುದಾರಿಕೆ ಹೊಂದಲು ನಾವು ಹೆಮ್ಮೆಪಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್‌ನ ಕನ್ವೀನರ್ ಪ್ರೊ.ರಾಜೇಶ್ ಸುಂದರೇಶನ್, "ನಾವು ಕೇಂದ್ರ ಮತ್ತು ಅದರ ಚಟುವಟಿಕೆಗಳ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದು, ಕೇವಲ ದತ್ತಾಂಶ ಸಾಗಿಸುವುದರ ಮೇಲೆ ಅಲ್ಲ. ದತ್ತಾಂಶದಿಂದ ಉಪಯುಕ್ತ ಮತ್ತು ಕ್ರಿಯಾತ್ಮಕ ಜ್ಞಾನವನ್ನು ರಚಿಸುವುದರತ್ತ ಗಮನ ಹರಿಸುತ್ತೇವೆ" ಎಂದರು.