ETV Bharat / state

ಬೆಂಗಳೂರು ಕೇಂದ್ರ ವಿಭಾಗ ಪೊಲೀಸರ ಭರ್ಜರಿ ಬೇಟೆ: ಅಪಾರ ಪ್ರಮಾಣದ ಚಿನ್ನಾಭರಣ ವಶ, ಆರೋಪಿಗಳ ಬಂಧನ - ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

ಮೂರು ಠಾಣಾ ವ್ಯಾಪ್ತಿಯಲ್ಲಿ 5 ಕೆಜಿ ಚಿನ್ನಾಭರಣ, ಐದೂವರೆ ಕೆಜಿ ಬೆಳ್ಳಿ ಜಪ್ತಿ ಮಾಡಿ ಸಂಬಂಧಪಟ್ಟವರಿಗೆ ಕೊಟ್ಟಿದ್ದು, ಚಿನ್ನಾಭರಣ ಕಳೆದುಕೊಂಡವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್​ ಆಯುಕ್ತರು ಬಹುಮಾನ ಕೂಡ ನೀಡಿದ್ದಾರೆ.

central-division-police-operation-large-amount-of-jewelery-seized
ಕೇಂದ್ರ ವಿಭಾಗ ಪೊಲೀಸರ ಭರ್ಜರಿ ಕಾರ್ಯಚರಣೆ
author img

By

Published : Nov 5, 2020, 7:21 PM IST

ಬೆಂಗಳೂರು: ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​, ಸೌಮೇಂದ್ರ ಮುಖರ್ಜಿ ಹಾಗೂ ಕೇಂದ್ರ ವಿಭಾಗದ ಅನುಚೇತ್ ಭೇಷ್ ಎಂದಿದ್ದಾರೆ.

‌ಮೂರು ಠಾಣಾ ವ್ಯಾಪ್ತಿಯಲ್ಲಿ 5 ಕೆಜಿ ಚಿನ್ನಾಭರಣ, ಐದೂವರೆ ಕೆಜಿ ಬೆಳ್ಳಿ ಜಪ್ತಿ ಮಾಡಿ ಸಂಬಂಧಪಟ್ಟವರಿಗೆ ಕೊಟ್ಟಿದ್ದು, ಚಿನ್ನಾಭರಣ ಕಳೆದುಕೊಂಡವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್​ ಆಯುಕ್ತರು ಬಹುಮಾನ ಕೂಡ ನೀಡಿದ್ದಾರೆ.

ಕಬ್ಬನ್ ಪಾರ್ಕ್ ಠಾಣೆ:

ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಎಂಜಿ ರಸ್ತೆಯಲ್ಲಿನ ನವರತ್ನನ್ ಜುವೆಲರಿ ಅಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಒರಿಸ್ಸಾ ಮೂಲದ ಲಂಭೋಧರ ಬಿಸ್ವಾಲ್ ಬಂಧಿತ ಆರೋಪಿ. ಈತ ಅಂಗಡಿಯಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅಂಗಡಿಯ ಪ್ರತಿಯೊಂದು ಮಾಹಿತಿಯನ್ನ ಪಡೆದು ವ್ಯಾಪಾರವನ್ನು ಸಂಪುರ್ಣವಾಗಿ ಕಂಪ್ಯೂಟರೀಕರಣಗೊಳಿಸುವ ಮಾಹಿತಿ ಸಂಗ್ರಹಿಸಿದ್ದಾನೆ. ನಂತರ ಮಾಲೀಕರಿಗೆ ಗೊತ್ತಾಗದ ಹಾಗೆ ಅಂಗಡಿಯ ಚಿನ್ನಾಭರಣದ ಮಾಹಿತಿ ಬದಲಾಯಿಸಿದ್ದ. ಬಳಿಕ ಚಿನ್ನಾಭರಣ ಕಳ್ಳತನ ಮಾಡಿ ಒರಿಸ್ಸಾ ರಾಜ್ಯಕ್ಕೆ ಪರಾರಿಯಾಗಿದ್ದ. ಹೀಗಾಗಿ ಆರೋಪಿಯನ್ನ ಬಂಧಿಸಿ 1 ಕೋಟಿ ರೂ. ‌ಮೌಲ್ಯದ 1.5 ಕೆಜಿ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಮೋಜು-ಮಸ್ತಿ, ದುಶ್ಚಟಗಳಿಗೆ ಈ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ.

ವಿವೇಕ್ ನಗರ ಠಾಣೆ:

ವಿವೇಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಶೆಖ್ ಷಾ ವಾಲಿ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ ಸುಮಾರು 17 ಲಕ್ಷ ರೂ. ಬೆಲೆ ಬಾಳುವ 355 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಅಶೋಕನಗರ ಪೊಲೀಸ್ ಠಾಣೆ:

ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ತೌಫಿಕ್ ಎಂಬಾತನನ್ನ ಬಂಧಿಸಿದ್ದು, ಈತ ನೆಲಮಂಗಲ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಹಗಲು ಮತ್ತು ರಾತ್ರಿ ಮನೆಗಳ್ಳತನ ಮಾಡುತ್ತಿದ್ದ. ಹೀಗಾಗಿ ಆರೋಪಿ ಮೊಹಮ್ಮದ್ ತೌಫೀಕ್ ಕಡೆಯಿಂದ ಒಟ್ಟು 23 ಕಳವು ಪ್ರಕರಣ ಹಾಗೂ 1.50 ಕೋಟಿ ರೂ. ಮೌಲ್ಯದ 2 ಕೆಜಿ 465 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಹಾಗೆಯೇ ಇದೇ ಠಾಣೆಯ ವ್ಯಾಪ್ತಿಯಲ್ಲಿ ಜೆ.ಬಾಬು ಹಾಗೂ ಜಯಂತಿ ಎಂಬುವರು ಕಳ್ಳತನ ಮಾಡುತ್ತಿದ್ದು, ಇವರನ್ನ ಬಂಧಿಸಿದಾಗ ಇವರು ಮೂಲತಃ ತಮಿಳುನಾಡು ರಾಜ್ಯದ ಮಧುರೈ ಜಿಲ್ಲೆಯವಾರಾಗಿದ್ದಾರೆ. ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡ್ತಾ, ಪೊಲೀಸರಿಗೆ ಅನುಮಾನ ಬಾರದ ರೀತಿ ರೆಸಿಡೆನ್ಸಿಯಲ್ ಏರಿಯಾದಲ್ಲಿ ಆಟೋದಲ್ಲಿ ತಿರುಗಾಡುತ್ತಾ ಖಾಲಿ‌ ಮನೆಗಳನ್ನ ಗುರುತಿಸಿದ್ದರು. ನಂತರ ನಕಲಿ ಕೀಗಳನ್ನ ಬಳಸಿಕೊಂಡು ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಸದ್ಯ ಬಂಧಿತ ಆರೋಪಿಗಳಿಂದ 6 ಪ್ರಕರಣ ಪತ್ತೆ ಹಚ್ಚಿ 62 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.