ಬೆಂಗಳೂರು: ಈ ಗೆಲವು ದೇಶದ ಜನತೆ ಸಂಭ್ರಮ ಪಡುವ ಸಮಯವಾಗಿದೆ. ಈ ದೇಶ ಯಾರ ಜೊತೆ ಯಾರ ಕೈಯಲ್ಲಿ ಇದ್ದರೆ ಒಳ್ಳೆಯದು ಎಂದು ಜನ ಈ ಫಲಿತಾಂಶದ ಮೂಲಕ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ. ಚೈನಾ ಮಾಲ್ಗೆ ಗ್ಯಾರಂಟಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
![Victory celebration at state BJP office](https://etvbharatimages.akamaized.net/etvbharat/prod-images/03-12-2023/20173478_thumbnabjp.jpg)
3 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಎದುರು ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.
![Victory celebration at state BJP office](https://etvbharatimages.akamaized.net/etvbharat/prod-images/03-12-2023/20173478_thumbngftsf.jpg)
ಈ ವೇಳೆ ಮಾತನಾಡಿದ ಅಶೋಕ್, ಮೂರು ರಾಜ್ಯ ಗೆಲ್ಲುವ ಸಂದೇಶ ಬರ್ತಾ ಇದೆ. ಛತ್ತೀಸ್ಗಢದಲ್ಲಿ ಸಮೀಕ್ಷೆ ವರದಿ ಬೇರೆ ಇತ್ತು. ಆದರೆ ಅವರ ಪ್ರೆಡಿಕ್ಷನ್ ಬುಡ ಮೇಲಾಗಿದೆ. ತೆಲಂಗಾಣದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಮೋದಿ ವಿಶ್ವಕಪ್ ಮ್ಯಾಚ್ ನೋಡಿದ್ದಕ್ಕೆ ಭಾರತ ಸೋತಿದೆ ಮೋದಿ ಪನೌತಿ ಎಂದಿದ್ದರು. ಆದರೆ, ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಮೋದಿ ಆಡಳಿತ ಮಾದರಿ ಎಂದು ಜನರಿಗೆ ಗೊತ್ತಾಗಿದೆ. ಅದಕ್ಕಾಗಿ ಈ ಫಲಿತಾಂಶ ಬಂದಿದೆ.
-
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪ್ರತಿಪಕ್ಷದ ನಾಯಕರಾದ ಶ್ರೀ @RAshokaBJP ಅವರು ಪತ್ರಿಕಾಗೋಷ್ಠಿ ನಡೆಸಿದರು, ಬಳಿಕ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.
— BJP Karnataka (@BJP4Karnataka) December 3, 2023 " class="align-text-top noRightClick twitterSection" data="
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ… pic.twitter.com/4c7RRA7ntH
">ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪ್ರತಿಪಕ್ಷದ ನಾಯಕರಾದ ಶ್ರೀ @RAshokaBJP ಅವರು ಪತ್ರಿಕಾಗೋಷ್ಠಿ ನಡೆಸಿದರು, ಬಳಿಕ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.
— BJP Karnataka (@BJP4Karnataka) December 3, 2023
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ… pic.twitter.com/4c7RRA7ntHಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪ್ರತಿಪಕ್ಷದ ನಾಯಕರಾದ ಶ್ರೀ @RAshokaBJP ಅವರು ಪತ್ರಿಕಾಗೋಷ್ಠಿ ನಡೆಸಿದರು, ಬಳಿಕ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.
— BJP Karnataka (@BJP4Karnataka) December 3, 2023
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ… pic.twitter.com/4c7RRA7ntH
ಮೋದಿ ಅವರನ್ನು ಅಪಶಕುನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆದಿದ್ದಾರೆ. ಅಪಶಕುನ ಯಾರೆಂದು ದೇಶದ ಜನರು ತೀರ್ಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ರಾಹುಲ್ ಗಾಂಧಿ ಅವರನ್ನು ಕರೆಯಲು ಬಳಸುತ್ತಿದ್ದ ಪದ ಪ್ರಯೋಗಿಸಿ ಕರೆಯಬಾರದು ಎಂದು ಕೋರ್ಟ್ ಸೂಚನೆ ಇದೆಯಂತೆ. ಹೀಗಾಗಿ ನಾನು ಅವರನ್ನು ಆ ಪದ ಬಳಸಿ ಕರೆಯಲ್ಲ. ಆದರೂ ರಾಹುಲ್ ಗಾಂಧಿನಾ ಐರನ್ ಲೆಗ್ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ಅವರ ಕುಟುಂಬ ರಾಜಕೀಯ ಇತ್ತು. ರೆಸಾರ್ಟ್ನಲ್ಲಿ ಕುಳಿತು ಅಧಿಕಾರ ಮಾಡುತ್ತಾ ಇದ್ದರು. ಹಾಗಾಗಿ ಅಲ್ಲಿನ ಜನ ಅವರನ್ನು ಖಾಯಂ ಆಗಿ ಅಲ್ಲೇ ಕೂರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆದ್ದಿದೆ. ಅವರ ಗೆಲುವು ಅವರ ಸ್ವಂತ ಗೆಲುವಲ್ಲ ಚಂದ್ರಶೇಖರ ರಾವ್ ವೈಫಲ್ಯದ ಕಾರಣದಿಂದ ಸಿಕ್ಕ ಗೆಲುವು ಎಂದರು.
![Victory celebration at state BJP office](https://etvbharatimages.akamaized.net/etvbharat/prod-images/03-12-2023/20173478_thumbncng.jpg)
ರಾಜ್ಯದಲ್ಲಿ ನಾವು ಅನೇಕ ಪ್ರಯೋಗ ಮಾಡಿದ್ದರೂ ವಿಫಲ ಆಯ್ತು. ಮತ್ತೆ ನಾವು ಸರಿ ಮಾಡಿಕೊಂಡು ಲೋಕಸಭಾ ಗೆಲ್ಲುತ್ತೇವೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ, ಅಮಿತ್ ಶಾ, ಎಲ್ಲ ರಾಜ್ಯ ಅಧ್ಯಕ್ಷರಿಗೂ ಅಭಿನಂದನೆಗಳು. ಈ ದೇಶ ದೇಶದ ಭವಿಷ್ಯ ಯಾರ ಕೈಯಲ್ಲಿದ್ದರೆ ಒಳ್ಳೆಯದು ಎಂಬ ತೀರ್ಮಾನವನ್ನು ಜನತೆ ಕೊಟ್ಟಿದ್ದಾರೆ. ಈ ಫಲಿತಾಂಶ ಸಂಭ್ರಮ ತಂದಿದೆ. ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢಕ್ಕೂ ಹೋಗಿತ್ತು. ಎಲ್ಲೆಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದಿದ್ದರೋ ಅಲ್ಲೆಲ್ಲ ಇವತ್ತು ಕಾಂಗ್ರೆಸ್ ಚೋಡೋ ಆಗಿದೆ ಎಂದರು.
ಇದನ್ನು ಓದಿ: 'ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಬೇರೆ ಪಕ್ಷಗಳಿಗಿಲ್ಲ': ಬಿಎಸ್ವೈ