ಬೆಂಗಳೂರು: ಸಿಸಿಬಿ ಪೊಲೀಸರಿಂದ ಪೆಡ್ಲರ್ ಬಂಧನ ಆಗಿದ್ದಾನೆ. ಗಾಂಜಾ ಸಂಗ್ರಹಿಸಿಕೊಂಡು ಮಾರಾಟ ದಂಧೆಯಲ್ಲಿ ತೊಡಗಿದ್ದ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಿಹಾರ ಮೂಲದ ಮನೀಶ್‌ಕುಮಾರ್ (42) ಬಂಧಿತ ಆರೋಪಿ. ಬಂಧಿತನಿಂದ 10 ಲಕ್ಷ ಬೆಲೆ ಬಾಳುವ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಕರಿ ಮತ್ತು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಒಡಿಶಾ ರಾಜ್ಯದ ಆತನ ಸಹಚರನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಕೆ.ಜಿಗಟ್ಟಲೇ ಖರೀದಿ ಮಾಡಿ ಆತನಿಂದಲೇ ಬೆಂಗಳೂರಿಗೆ ತರಿಸಿಕೊಂಡು ಇಲ್ಲಿ ಆತನಿಗೆ ಪರಿಚಯವಿರುವ ಗ್ರಾಹಕರುಗಳಿಗೆ ಅದರಲ್ಲೂ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದ. ಹೀಗೆ ಅಕ್ರಮವಾಗಿ ಹಣ ಗಳಿಕೆಯಲ್ಲಿ ತೊಡಗಿರುವುದಲ್ಲದೇ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗೋವಾದಿಂದ ಕೊಕೇನ್ ತಂದು ಮಾರುತ್ತಿದ್ದ ಅರೇಬಿಕ್ ಟೀಚರ್ ಅರೆಸ್ಟ್