ಬೆಂಗಳೂರು: ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಈಗಾಗ್ಲೇ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿಯನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ಅಲಿ ಜೊತೆ ಕೆಪಿಎಲ್ನ ಕೆಲ ಆಟಗಾರರು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆ ಈಗಾಗ್ಲೇ ಕೆಪಿಎಲ್ನ ಕೆಲ ಆಟಗಾರರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನ ಸಿಸಿಬಿ ಅಧಿಕಾರಿಗಳು ನೀಡಿದ್ದಾರೆ.
ಐಪಿಎಲ್ ಆಡಿದ ಆಟಗಾರರು ಕೂಡ ಕೆಪಿಎಲ್ ತಂಡದಲ್ಲಿದ್ದು, ಕೆಪಿಎಲ್ ತಂಡ ನಾಲ್ಕು ತಂಡವಾಗಿದ್ದು, ಒಂದು ಬೆಳಗಾವಿ ಫ್ಯಾಂಥರ್ಸ್, ಬಿಜಾಪುರ ಬುಲ್ಸ್, ಶಿವಮೊಗ್ಗ ಲಯನ್ಸ್, ಬಳ್ಳಾರಿ ಟಸ್ಕರ್ಸ್, ಇದರಲ್ಲಿ ಒಟ್ಟು 32 ಜನ ಪ್ಲೇಯರ್ಸ್ಗಳಲ್ಲಿ 14 ಜನ ಪ್ರತಿಷ್ಠಿತ ಆಟಗಾರರು ಇದ್ದಾರೆ. ಹೀಗಾಗಿ ಒಟ್ಟು ನಾಲ್ಕು ತಂಡದ ಆಟಗಾರರ ವಿಚಾರಣೆಯನ್ನ ಸಿಸಿಬಿ ನಡೆಸಲಿದೆ.
ಈಗಾಗಲೇ ಸಿಸಿಬಿ ಕಚೇರಿಯಲ್ಲಿ ಕೆಲವು ಕೆಪಿಎಲ್ ಆಟಗಾರರ ದಂಡು ಸಿಸಿಬಿ ಅಧಿಕಾರಿಗಳ ಸೂಚನೆ ಮೇರೆಗೆ ಹಾಜರ್ ಆಗಿ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಸಂಪೂರ್ಣ ತನಿಖೆ ನಡೆದ ನಂತರ ಎಲ್ಲ ವಿಚಾರ ಬಟಾ ಬಯಲಾಗಲಿದೆ.