ETV Bharat / state

ಏರ್​​​​​​​​ ಶೋ ವೇಳೆ ಸುಟ್ಟ ಕಾರ್​​​​ಗಳ ಮಾಲೀಕರಿಗೆ ಆರ್​​​​ಟಿಒದಿಂದ ಶೀಘ್ರ ಪರಿಹಾರ - ಭರವಸೆ

ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್​​​​​​ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್​​ಟಿಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ಗಳಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ.

ಆರ್​​​​ಟಿಒ
author img

By

Published : Mar 13, 2019, 9:13 PM IST

ಬೆಂಗಳೂರು: ಕಳೆದ ಫೆಬ್ರವರಿ 23 ರಂದು ಏರ್ ಶೋ ವೇಳೆ ನಡೆದ ದುರ್ಘಟನೆಯಲ್ಲಿ ಮುನ್ನೂರಕ್ಕೂ ಅಧಿಕ ಕಾರ್​​​ಗಳು ಬೆಂಕಿಗೆ ಆಹುತಿಯಾಗಿದ್ದವು.

ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್​​​​​​ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್​​ಟಿಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ಗಳಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ.

ಅದರಲ್ಲೂ ಯಶವಂತಪುರ ಆರ್​​ಟಿಒ ಕಚೇರಿಯಲ್ಲಿ ಬೇರೆಲ್ಲಾ ಕಡತಗಳನ್ನು ಬದಿಗಿಟ್ಟು ಏರ್ ಶೋ ದುರ್ಘಟನೆಯಲ್ಲಿ ಕಾರ್ ಕಳೆದುಕೊಂಡವರ ಕೆಲಸವನ್ನು ಮೊದಲು ಮಾಡಿಕೊಡಲಾಗುತ್ತಿದೆ. ಈ ಆರ್​​​ಟಿಒ ವ್ಯಾಪ್ತಿಗೆ ಒಟ್ಟು 44 ಕಾರ್​​ಗಳು ಬಂದಿವೆ. ಇದರಲ್ಲಿ 26 ಅರ್ಜಿಗಳು ಆರ್​​​​​​ಸಿ ಕ್ಯಾನ್ಸಲೇಷನ್​​​ಗೆ ಅರ್ಜಿ ಹಾಕಿದ್ದು, ಈವರೆಗೂ 20 ಪ್ರಕರಣಗಳ ಗಾಡಿ ರೆಕಾರ್ಡ್ ಕ್ಯಾನ್ಸಲ್ ಮಾಡಿಸಿ, ಟ್ಯಾಕ್ಸ್ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ಉಪ ಸಾರಿಗೆ ಆಯುಕ್ತರಾದ ಬಾಲಕೃಷ್ಣ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಕಾರ್​ ಮಾಲೀಕರಿಗೆ ಶೀಘ್ರವೇ ಪರಿಹಾರ

ಇಲ್ಲಿಂದ ಈ ಪ್ರಮಾಣಪತ್ರ ತೆಗೆದುಕೊಂಡು ಇನ್ಶೂರೆನ್ಸ್​​ ಅವರ ಬಳಿ ನೀಡಿದ್ರೆ ಅವರಿಗೆ ಸಿಗುವ ಇನ್ಶೂರೆನ್ಸ್ ಮೊತ್ತ ಸಿಗಲಿದೆ. ಹಾಗಾಗಿ ಆರ್​​​ಟಿಒ ಕಡೆಯಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಲಾಗ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ ಒಂದೇ ದಿನಕ್ಕೆ ಆರ್​​​​ಟಿಒ ಕೆಲಸ ಮಾಡಿಕೊಟ್ಟಿದ್ದು, ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ ಮಾಲೀಕರಾದ ಸಿಮಿ ತಿಳಿಸಿದರು.

ಉಳಿದ 10 ಆರ್​​ಟಿಒ ಆಫೀಸ್​​ಗಳಾದ ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಜಯನಗರ, ಕೆ.ಆರ್.ಪುರಂ, ಚಂದಾಪುರ, ನೆಲಮಂಗಲ, ದೇವನಹಳ್ಳಿ, ಯಲಹಂಕ, ರಾಮನಗರಗಳಲ್ಲೂ ಇದೇ ಸೂಚನೆ ನೀಡಲಾಗಿದ್ದು, ಎಲೆಕ್ಷನ್ ಕೆಲಸವೂ ಬಂದಿರೋದ್ರಿಂದ ವ್ಯತ್ಯಾಸಗಳಾಗ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Intro:Body:

ಏರ್ ಶೋನಲ್ಲಿ ಸುಟ್ಟ ಕಾರ್ ಗಳ ಮಾಲೀಕರಿಗೆ ಆರ್ ಟಿಓ ದಿಂದ ಶೀಘ್ರ ಪರಿಹಾರ 

ಬೆಂಗಳೂರು- ಕಳೆದ ಫೆಬ್ರವರಿ 23 ರಂದು, ಏರ್ ಶೋ ವೇಳೆ ನಡೆದ ದುರ್ಘಟನೆಯಲ್ಲಿ 347 ರಷ್ಟು ಕಾರ್ ಗಳು ಬೆಂಕಿಗೆ ಆಹುತಿಯಾಗಿದ್ದವು. ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್ ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್ ಟಿ ಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ) ಗಳಲ್ಲಿ ವಾಹನ ಕಳೆದುಕೊಂಡು ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ. 

ಅದರಲ್ಲೂ ಯಶವಂತಪುರ ಆರ್ ಟಿ ಒ ಕಛೇರಿಯಲ್ಲಿ ಬೇರೆಲ್ಲಾ ಕಡತಗಳನ್ನು ಬದಿಗಿಟ್ಟು ಏರ್ ಶೋ ದುರ್ಘಟನೆಯಲ್ಲಿ ಕಾರ್ ಕಳೆದುಕೊಂಡವರ ಕೆಲಸವನ್ನು ಮೊದಲು  ಮಾಡಿಕೊಡಲಾಗುತ್ತಿದೆ. ಈ ಆರ್ ಟಿ ಓ ವ್ಯಾಪ್ತಿಗೆ ಒಟ್ಟು 44 ಕಾರ್ ಗಳು ಬಂದಿವೆ. ಇದರಲ್ಲಿ 26 ಅರ್ಜಿಗಳು ಆರ್ ಸಿ ಕ್ಯಾನ್ಸಲೇಷನ್ ಗೆ ಅರ್ಜಿ ಹಾಕಿದ್ದು, ಈ ವರೆಗೂ 20 ಪ್ರಕರಣಗಳ ಗಾಡಿ ರೆಕಾರ್ಡ್ ಕ್ಯಾನ್ಸಲ್ ಮಾಡಿಸಿ, ಟ್ಯಾಕ್ಸ್ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ಉಪ ಸಾರಿಗೆ ಆಯುಕ್ತರಾದ ಬಾಲಕೃಷ್ಣ ಈಟಿವಿ ಭಾರತ್ ಗೆ ತಿಳಿಸಿದರು. 

ಇಲ್ಲಿಂದ ಈ ಪ್ರಮಾಣಪತ್ರ ತೆಗೆದುಕೊಂಡು ಇನ್ಶೂರೆಮ್ಸ್ ಅವರ ಬಳಿ ನೀಡಿದ್ರೆ , ಅವರಿಗೆ ಸಿಗುವ ಇನ್ಶೂರೆನ್ಸ್ ಮೊತ್ತ ಸಿಗಲಿದೆ. ಹಾಗಾಗಿ ಆರ್ ಟಿಒ ಕಡೆಯಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಲಾಗ್ತಿದೆ ಎಂದು ಅವರು ತಿಳಿಸಿದರು. 

ಅಲ್ಲದೆ ಒಂದೇ ದಿನಕ್ಕೆ ಆರ್ಟಿಒ ಕೆಲಸ ಮಾಡಿಕೊಟ್ಟಿದ್ದು, ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ ಮಾಲೀಕರಾದ ಸಿಮಿ ತಿಳಿಸಿದರು. 

ಉಳಿದ 10 ಆರ್ ಟಿ ಓ ಆಫೀಸ್ ಗಳಾದ ಕೋರಮಂಗಲ, ರಾಜಾಜಿನಗರ,ಇಂದಿರಾನಗರ,,ಜಯನಗರ,  ಕೆ ಆರ್ ಪುರಂ, ಚಂದಾಪುರ, ನೆಲಮಂಗಲ, ದೇವನಹಳ್ಳಿ, ಯಲಹಂಕ, ರಾಮನಗರಗಳಲ್ಲೂ ಇದೇ ಸೂಚನೆ ನೀಡಲಾಗಿದ್ದು, ಎಲೆಕ್ಷನ್ ಕೆಲಸವೂ ಬಂದಿರೋದ್ರಿಂದ ವ್ಯತ್ಯಾಸಗಳಾಗ್ತಿವೆ. 

-ಸೌಮ್ಯಶ್ರೀ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.