ಆನೇಕಲ್(ಬೆಂಗಳೂರು): ಕರ್ನಾಟಕ ಮೂಲದ ಕಾರು ಚಾಲಕನನ್ನು ತಮಿಳುನಾಡಿನ ಬಳಿ ಹತ್ಯೆಗೈಯಲಾಗಿದೆ. ಶಾಂತ್ ಕುಮಾರ್(30) ಕೊಲೆಯಾಗಿರುವ ಚಾಲಕ. ತಮಿಳುನಾಡಿನ ಥಳಿ ತಾಲೂಕಿನ ಪಿನ್ನಮಂಗಲಂ ಎಲೆ ಚಂದ್ರಂ ಸರೋವರದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಬೆಂಗಳೂರಿನ ತೋಟಗೂರು ಮೂಲದವನಾದ ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 10 ದಿನಗಳ ಹಿಂದೆ ಬಾರ್‌ನಲ್ಲಿ ಪಾನಮತ್ತರಾಗಿ ಜಗಳ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಇದೇ ವೈಷಮ್ಯದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಥಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ