ಬನ್ನೇರುಘಟ್ಟ: ಡಿ.14ರ ರಾತ್ರಿ ಆಟೋದಲ್ಲಿ ಬಂದ ಐವರ ರೌಡಿಶೀಟರ್ ತಂಡವೂ ಕ್ಯಾಂಟರ್ ಚಾಲಕನನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 10ಲಕ್ಷ ರೂ,ಗೆ ಬೇಡಿಕೆಯಿಟ್ಟ ಘಟನೆ ಬನ್ನೇರುಘಟ್ಟ ಸುತ್ತ ನಡೆದಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಬನ್ನೇರುಘಟ್ಟ ಸಮೀಪದ ಪೆಪ್ಸಿಕೊ ಕಂಪನಿಯಲ್ಲಿ ಚಾಲಕನಾಗಿದ್ದ ಚೇತನ್, ಕಂಪನಿಯಿಂದ ಮೈಸೂರಿಗೆ ಲೋಡ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ತಡೆಯಲ್ಲಿ ನಿಧಾನ ಚಲಿಸಿದ ಕ್ಯಾಂಟರ್ಗ್ ಹಿಂಬದಿಯಿಂದ ಆಟೋ ಡಿಕ್ಕಿ ಹೊಡೆಸಿದ ಐವರ ತಂಡ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಚೇತನ್ ಸ್ನೇಹಿತ ವರುಣ್ ದ್ವಿಚಕ್ರ ವಾಹನದಲ್ಲಿ ಬಂದು ಜಗಳ ಬಿಡಿಸಲು ಮುಂದಾಗಿದ್ದಾನೆ. ಐವರು ಮಾರಕಾಸ್ತ್ರಗಳಿಂದ ವರುಣ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅನಂತರ ಅರುಣ್ ನನ್ನು ಬಿಟ್ಟು ಚೇತನ್ನನ್ನು ಕೈಕಾಲು ಕಟ್ಟಿ ಕನಕಪುರ ರಸ್ತೆಯ ಬ್ಯಾಟರಾಯನದೊಡ್ಡಿ ಬಳಿಯ ಟಿಕೆ ಫಾಲ್ಸ್ ಬಳಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕಬ್ಬಿಣದ ರಾಡ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಚೇತನ್ ಮಾಲೀಕರಿಗೆ ಹತ್ತು ಲಕ್ಷ ಬೇಡಿಕೆಯಿಟ್ಟಿದ್ದಾರೆ.
ಕೊನೆಗೆ ಎರಡು ಲಕ್ಷ ತಂದುಕೊಟ್ರೆ ಬಿಡುತ್ತೇವೆ ಎಂದು ಹೇಳಿ ಇಲ್ಲವಾದಲ್ಲಿ ಕೊಲೆ ಬೆದರಿಕೆ ಹಾಕಿ ಇಡೀ ದಿನ ಕುಡಿಯಲು ನೀರು ಕೊಡದೇ ಗಾಂಜಾ ಎಣ್ಣೆ ಪಾರ್ಟಿ ಮಾಡಿದ್ದರು. ಅನಂತರ ಮೂವರನ್ನ ಅಲ್ಲಿಯೇ ಬಿಟ್ಟು ಮತ್ತಿಬ್ಬರು ಮೊಬೈಲ್ ರಾಬರಿ ಮಾಡಲು ಆಟೊದಲ್ಲಿ ಹೊರಟಿದ್ದಾರೆ. ಸಂಜೆಯಾದರೂ ಮರಳಿ ಬಾರದಿದ್ದರಿಂದ ಉಳಿದವರಿಗೆ ನಡುಕ ಶುರುವಾಗಿತ್ತು.
ಅಷ್ಟರೊಳಗೆ ಅರುಣ್ ಪೊಲೀಸರಿಗೆ ವಿಷಯ ಮುಟ್ಟಿಸಿ ಆರೋಪಿಗಳ ಬೆನ್ನು ಬಿದ್ದಾಗ ರಾತ್ರಿಯ ಪೊಲೀಸರ ಟಾರ್ಚ್ ಬೆಳಕಿಗೆ ಚೇತನ್ ಕೈ ಕಾಲು ಕಟ್ಟಿ ಪರಾರಿಯಾಗಿದ್ದಾರೆ. ನಂತರ ಚೇತನ್ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ನಡೆದ ಘಟನೆಯ ವಿವರವನ್ನು ಮುಟ್ಟಿಸಿದ್ದಾನೆ. ಗಂಭೀರ ಹಲ್ಲೆಗೊಳಗಾಗಿದ್ದ ಚೇತನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಬನ್ನೇರುಘಟ್ಟ ಠಾಣೆಯ ಪೊಲೀಸರು ಐವರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಆಟೋ ಕೃಷ್ಣ ಎಂಬ ರೌಡಿಶೀಟರ್ ತಂಡದಿಂದ ಈ ಘಟನೆ ನಡೆದಿದೆ. ಈ ಹಿಂದೆ ಆಟೋ ಕೃಷ್ಣನ ಕಾಲಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದರು. ಅಲ್ಲಿಂದ ಪ್ಲಾಸ್ಟಿಕ್ ಕಾಲಿನ ಮೂಲಕ ಊರು ಬಿಟ್ಟು ಬೇರೆಡೆ ನೆಲೆಸಿ ಬನ್ನೇರುಘಟ್ಟ ಸುತ್ತಲೂ ತನ್ನ ತಂಡದ ಮೂಲಕ ಇಂಥ ಅಪರಾಧ ಕೃತ್ಯಗಳನ್ನು ನಡೆಸುತ್ತಿರುವ ಆರೋಪಗಳು ಕೇಳಿ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ:ಮೂರು ತಿಂಗಳ ಹಿಂದೆ ಮದುವೆ.. ತಾಯಿ, ಮಗ, ಸೊಸೆ ಆತ್ಮಹತ್ಯೆಗೆ ಶರಣು