ಬೆಂಗಳೂರು : ಆಡಳಿತಾತ್ಮಕ ಕಾರಣಗಳಿಂದ ವರ್ಗಾವಣೆಗೊಂಡಿದ್ದ ರಾಜ್ಯದ ಆರು ಮಂದಿ ಡಿವೈಎಸ್ಪಿ ಹಾಗೂ ನಾಲ್ಕು ಜನ ಇನ್‌ಸ್ಪೆಕ್ಟರ್ ಸೇರಿ 10 ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.
ಜೆ.ಸಿ. ನಗರ ಉಪವಿಭಾಗದ ರೀನಾ ಸುವರ್ಣ, ಹಲಸೂರು ಉಪವಿಭಾಗದ ಕುಮಾರ್, ಉತ್ತರ ಸಂಚಾರ ಉಪವಿಭಾಗದ ಗೋಪಾಲ್ ಕೃಷ್ಣ ಗೌಡರ್ ಸೇರಿದಂತೆ ಆರು ಮಂದಿ ಡಿವೈಎಸ್ಪಿ ವರ್ಗಾವಣೆ ರದ್ದುಗೊಳಿಸಲಾಗಿದೆ.
![ವರ್ಗಾವಣೆ ರದ್ದುಗೊಳಿಸಿರುವ ಆದೇಶ ಪ್ರತಿ](https://etvbharatimages.akamaized.net/etvbharat/prod-images/14209858_-bin.jpg)
ಇನ್ಸ್ಪೆಕ್ಟರ್ಗಳಾದ ರಾಜ್ಯ ಗುಪ್ತವಾರ್ತೆಯ ಇನ್‌ಸ್ಪೆಕ್ಟರ್ ಕಾಶಿನಾಥ್, ಚಿತ್ರದುರ್ಗದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ರಮಕಾಂತ್ ಯಲ್ಲಪ್ಪ ಹುಲ್ಲಾರ್ ಸೇರಿ ನಾಲ್ಕು ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ತಡೆಹಿಡಿಯಲಾಗಿದೆ ಎಂದು ಐಜಿಪಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಣೆ
ಜನವರಿ 14 ರಂದು ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಸೇರಿ 34 ಮಂದಿ ಪೊಲೀಸರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.