ಬೆಂಗಳೂರು: ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕರಾಗಿರುವ ವೈ ಎ ನಾರಾಯಣ ಸ್ವಾಮಿ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಂಪುಟ ಸಚಿವರ ಸ್ಥಾನಮಾನದೊಂದಿಗೆ ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲ ಸೌಲಭ್ಯಗಳನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಡಿಸೆಂಬರ್ನಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಅಂದು ಸರ್ಕಾರದ ಮುಖ್ಯ ಸಚೇತಕರಾಗಿದ್ದ ಮಹಾಂತೇಶ ಕವಟಗಿಮಠ ಸೋತಿದ್ದರು. ಈ ಹಿನ್ನಲೆ ಸರ್ಕಾರದ ಮುಖ್ಯ ಸಚೇತಕ ಸ್ಥಾನ ತೆರವಾಗಿತ್ತು.
ಇದನ್ನೂ ಓದಿ: ಬಿಎಸ್ವೈ - ಬೊಮ್ಮಾಯಿ ನಡುವೆ ಅಸಮಾಧಾನದ ಗುಸು ಗುಸು: ಗುರು ಶಿಷ್ಯರ ನಡುವೆ ಮನಸ್ತಾಪವಾಗಿರುವುದು ನಿಜವೇ..?
ಮಾರ್ಚ್ 15 ರಂದು ಕಲಾಪ ನಡೆಯುವ ವೇಳೆ ಅಂದಿನ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೂಚನೆಯಂತೆ ಡಾ.ವೈ ಎ ನಾರಾಯಣಸ್ವಾಮಿ ಅವರನ್ನು ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿ ಪ್ರಕಟಣೆ ಹೊರಡಿಸಿದ್ದರು. ಇಂದು ನಾರಾಯಣಸ್ವಾಮಿ ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.