ಬೆಂಗಳೂರು: ನಾಳೆ ನೂತನ ಸಚಿವರಾಗಿ ಎಷ್ಟು ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎನ್ನುವುದನ್ನು ಇಂದು ಸಂಜೆ ಹೈಕಮಾಂಡ್ ಅಂತಿಮಗೊಳಿಸಿ ಮಾಹಿತಿ ರವಾನಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಿಂದ ವಾಪಸಾದ ನಂತರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದು ಸಂಜೆಗೆ ಹೈಕಮಾಂಡ್‌ನಿಂದ ಸಂದೇಶ ಬರುತ್ತದೆ. ಸಂಜೆ 7.30ಕ್ಕೆ ಹೈಕಮಾಂಡ್ ಸಂದೇಶ ನೀಡಿದ ಬಳಿಕ ಸಂಪುಟ ಸೇರೋರು ಯಾರ್ಯಾರು ಎಂದು ಗೊತ್ತಾಗುತ್ತದೆ. ಆಗ ನಾನೇ ಬಂದು ಹೇಳುತ್ತೇನೆ ಎಂದರು.
ಇದೇ ವೇಳೆ ರಾಮಮಂದಿರ ನಿರ್ಮಾಣದ ಹತ್ತಾರು ವರ್ಷದ ಕನಸಾದ ಟ್ರಸ್ಟ್‌ನ ರಚನೆ ಮಾಡಿರೋದಕ್ಕಾಗಿ ದೇಶದ ಜನ ಪರವಾಗಿ ಪ್ರಧಾನಿಗೆ ಅಭಿನಂದಿಸುತ್ತೇನೆ ಎಂದರು.